ETV Bharat / bharat

ಮಹಿಳೆಯರ ವಿವಾಹ ವಯಸ್ಸು 18 ರಿಂದ 21ಕ್ಕೆ ಹೆಚ್ಚಳ: ಪರಿಶೀಲನಾ ಸಂಸತ್​ ಸಮಿತಿಗೆ 3 ತಿಂಗಳ ಗಡುವು ವಿಸ್ತರಣೆ - Parliament panel

ಮಹಿಳೆಯರ ವಿವಾಹ ವಯಸ್ಸನ್ನು ಹೆಚ್ಚಿಸುವ ಮಸೂದೆಯನ್ನು ಪರಿಶೀಲಿಸುವ ಸಂಸತ್ತಿನ ಸಮಿತಿಯು ವರದಿ ಸಲ್ಲಿಸಲು 3 ತಿಂಗಳ ಹೆಚ್ಚುವರಿ ಗಡುವನ್ನು ಪಡೆದುಕೊಂಡಿದೆ.

ಮಹಿಳೆಯರ ವಿವಾಹ ವಯಸ್ಸು
ಮಹಿಳೆಯರ ವಿವಾಹ ವಯಸ್ಸು
author img

By ETV Bharat Karnataka Team

Published : Oct 18, 2023, 10:57 PM IST

ನವದೆಹಲಿ: ಮಹಿಳೆಯರ ವಿವಾಹ ವಯೋಮಿತಿಯನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಮಸೂದೆಯ ಪರಿಶೀಲನಾ ಸಂಸದೀಯ ಸಮಿತಿಯ ಅವಧಿಯನ್ನು ವಿಸ್ತರಿಸಲಾಗಿದೆ. ಮಸೂದೆಯ ಸಾಧಕ ಬಾಧಕಗಳನ್ನು ಚರ್ಚಿಸಿ ಅಂತಿಮ ವರದಿ ಸಲ್ಲಿಸಲು ಸಮಿತಿಗೆ ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್​ ಅವರು ಮೂರು ತಿಂಗಳ ಹೆಚ್ಚುವರಿ ಗಡುವು ನೀಡಿದ್ದಾರೆ.

ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪ ರಾಷ್ಟ್ರಪತಿ ಜಗದೀಪ್​ ಧನಕರ್​ ಅವರು, ಶಿಕ್ಷಣ, ಮಹಿಳಾ ಮತ್ತು ಮಕ್ಕಳು, ಯುವ ಮತ್ತು ಕ್ರೀಡಾ ಸಂಸದೀಯ ಸ್ಥಾಯಿ ಸಮಿತಿಗೆ ಮಹಿಳಾ ವಿವಾಹ ವಯೋಮಿತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆಯಡಿ ಅಂತಿಮ ವರದಿ ಸಲ್ಲಿಸಲು 24 ಜನವರಿ 2024 ರವರೆಗೆ ಅವಕಾಶ ನೀಡಿದ್ದಾರೆ ಎಂದು ರಾಜ್ಯಸಭೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2021 ರ ಡಿಸೆಂಬರ್​ನಲ್ಲಿ ನಡೆದ ಸಂಸತ್​ ಅಧಿವೇಶನದಲ್ಲಿ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಮಸೂದೆ-2021 ಅನ್ನು ಲೋಕಸಭೆಯಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆಯಾಗಿದ್ದ ಸ್ಮೃತಿ ಇರಾನಿ ಅವರು ಮಂಡಿಸಿದ್ದರು. ಇದಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಕೂಡ ನೀಡಿತ್ತು. ಬಳಿಕ ಇದನ್ನು ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸ್ಥಾಯಿ ಸಮಿತಿಗೆ ಕಳುಹಿಸಲಾಗಿತ್ತು. ತಿದ್ದುಪಡಿ ಮಸೂದೆಯ ಅಂತಿಮ ವರದಿ ಸಲ್ಲಿಕೆಗಾಗಿ ಸಮಿತಿಯು ಮತ್ತೆ ಗಡುವನ್ನು ಪಡೆದಿದೆ.

ಜಯಾ ಜೇಟ್ಲಿ ಆಯೋಗದ ಶಿಫಾರಸು: ಸದ್ಯ ಪುರುಷರಿಗೆ ಕನಿಷ್ಠ ವಿವಾಹದ ವಯಸ್ಸು 21 ವರ್ಷ ಇದ್ದರೆ, ಮಹಿಳೆಯರಿಗೆ 18 ವರ್ಷ ಇದೆ. ಇದನ್ನು ಮಾರ್ಪಡಿಸಿ ಮಹಿಳೆಯರಿಗೂ 21 ವರ್ಷ ಇರಬೇಕು ಎಂದು ಜಯಾ ಜೇಟ್ಲಿ ನೇತೃತ್ವದ ನೀತಿ ಆಯೋಗದ ಕಾರ್ಯಪಡೆಯು ಶಿಫಾರಸು ಮಾಡಿತ್ತು. ಇದಕ್ಕೆ ಕೇಂದ್ರ ಸಚಿವ ಸಂಪುಟ ಕೂಡ ಅಸ್ತು ಎಂದಿತ್ತು. ಮಹಿಳೆಯರ ವಿವಾಹ ವಯೋಮಿತಿ ಹೆಚ್ಚಿಸಲು ಪ್ರಮುಖವಾಗಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ವಿಶೇಷ ವಿವಾಹ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ತಿದ್ದುಪಡಿ ನಂತರ ಹೊಸ ನಿರ್ಧಾರಗಳು ಜಾರಿಯಾಗಲಿವೆ.

2020 ರ ಸ್ವಾತಂತ್ರ್ಯ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅಪೌಷ್ಟಿಕತೆಯಿಂದ ಮಹಿಳೆಯರನ್ನು ರಕ್ಷಿಸಲು ಸರಿಯಾದ ವಯಸ್ಸಿನಲ್ಲಿ ವಿವಾಹವಾಗಬೇಕು ಎಂದು ಹೇಳಿದ್ದರು. ಜೊತೆಗೆ ಕಾರ್ಯಪಡೆಯೂ ಕೂಡ ಮಹಿಳೆ ಮೊದಲ ಮಗುವಿಗೆ ಜನ್ಮ ನೀಡಲು ಆಕೆಯ ವಯಸ್ಸು 21 ಇರಬೇಕು ಎಂದು ಹೇಳಿತ್ತು. ಹೀಗಾಗಿ ಮಹಿಳಾ ವಿವಾಹ ವಯಸ್ಸು ಹೆಚ್ಚಳದ ಕುರಿತು ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ: 'ಶಾಸಕಾಂಗದಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡಲ್ಲ': ಹಿಂದು ಧಾರ್ಮಿಕ ಕೇಂದ್ರಗಳ ನಿಯಂತ್ರಣ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.