ETV Bharat / bharat

ಸಂಸತ್ತಿನಲ್ಲಿ ನಿಲ್ಲದ 'ಮಣಿಪುರ' ಗದ್ದಲ; ಅವಿಶ್ವಾಸ ಮಂಡಿಸಿದ್ದರೂ ಮಸೂದೆಗಳ ಅಂಗೀಕಾರಕ್ಕೆ ವಿಪಕ್ಷಗಳ ವಿರೋಧ, ಬಿಜೆಪಿ ತಿರುಗೇಟು - ರಾಜ್ಯಸಭೆಯಲ್ಲಿ ಮಣಿಪುರ ಚರ್ಚೆ

Parliament monsoon session: ಮಣಿಪುರ ವಿಚಾರಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಗದ್ದಲ ಮುಂದುವರಿದಿದೆ. ರಾಜ್ಯಸಭೆಯಲ್ಲಿ ಈ ಬಗ್ಗೆ ಚರ್ಚೆಗೆ ಸಿದ್ಧ ಎಂದು ಬಿಜೆಪಿ ಹೇಳಿದ್ದರೆ, ನಿಯಮದ ನೆಪ ಹೇಳಿ ವಿಪಕ್ಷಗಳ ಗದ್ದಲ ನಡೆಸುತ್ತಿವೆ.

ಸಂಸತ್ತಿನಲ್ಲಿ ನಿಲ್ಲದ 'ಮಣಿಪುರ' ಗದ್ದಲ
ಸಂಸತ್ತಿನಲ್ಲಿ ನಿಲ್ಲದ 'ಮಣಿಪುರ' ಗದ್ದಲ
author img

By

Published : Jul 31, 2023, 3:42 PM IST

ನವದೆಹಲಿ: ಮಣಿಪುರ ವಿಚಾರಕ್ಕೆ ಸಂಸತ್​ ಅಧಿವೇಶನ ವೃಥಾ ಹಾಳಾಗುತ್ತಿದೆ. ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದು ವಿಪಕ್ಷಗಳು ಅವಿಶ್ವಾಸ ನಿರ್ಣಯ ಕೂಡ ಮಂಡಿಸಿವೆ. ಪ್ರಧಾನಿ ಮೋದಿ ಅವರು ಮಣಿಪುರದ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಲೇಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿದ್ದರೆ, ರಾಜ್ಯಸಭೆಯಲ್ಲಿ ಚರ್ಚೆಗೆ ಸಿದ್ಧ ಎಂದು ಬಿಜೆಪಿ ತಿರುಗೇಟು ನೀಡಿದೆ.

ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ನಡೆಸದೆ ಸಂಸತ್ತಿಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅವಮಾನ ಮಾಡುತ್ತಿದೆ ಎಂದು ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದ್ದರೂ, ಮಸೂದೆಗಳಿಗೆ ಅಂಗೀಕಾರ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.

  • #WATCH | Delhi: Congress MP Adhir Ranjan Chowdhary says, "An all-party should visit Manipur and analyse the situation in the state. We are ready to have discussions on Bihar and West Bengal as well. We have brought the no-confidence motion and the govt should have discussions on… pic.twitter.com/ZzmfvxfEZN

    — ANI (@ANI) July 31, 2023 " class="align-text-top noRightClick twitterSection" data=" ">

'ಸರ್ಕಾರ ಮೊದಲು ಅವಿಶ್ವಾಸ ಗೊತ್ತುವಳಿ ಕುರಿತು ಚರ್ಚೆ ನಡೆಸಲಿ. ಸದನದ ಇತರ ಚಟುವಟಿಕೆಗಳ ವಿರುದ್ಧ ನಾವು ಪ್ರತಿಭಟಿಸುತ್ತಿಲ್ಲ. ಅವಿಶ್ವಾಸ ಗೊತ್ತುವಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರ ಸಂಸತ್ತಿಗೆ ಅವಮಾನ ಮಾಡುತ್ತಿದೆ. ಅವಿಶ್ವಾಸ ಮಂಡಿಸಿದಾಗ್ಯೂ ವಿಧೇಯಕಗಳನ್ನು ಪಾಸು ಮಾಡಲಾಗುತ್ತಿದೆ. ಹಿಂದೆ ಇಂತಹ ಪರಿಸ್ಥಿತಿ ಇರಲಿಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದರು.

ಇಂಡಿಯಾ ಮೈತ್ರಿಕೂಟ ಮಣಿಪುರಕ್ಕೆ ಭೇಟಿ ನೀಡಿದ ಬಗ್ಗೆಯೂ ಮಾಹಿತಿ ನೀಡಿದ ಕಾಂಗ್ರೆಸ್ ಸಂಸದ, ಅಲ್ಲಿನ ಪರಿಸ್ಥಿತಿ ಭೀಕರವಾಗಿದೆ. ಮಣಿಪುರದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಆಡಳಿತ ಪಕ್ಷದ ಸಂಸದರು ಅಲ್ಲಿಗೆ ಭೇಟಿ ನೀಡಬೇಕು ಎಂದು ಒತ್ತಾಯಿಸಿದರು.

ಮೋದಿಗೆ ಪ್ರಚಾರಕ್ಕೆ ಟೈಂ ಇದೆ, ಸಂಸತ್ತಿಗೆ ಬರಲ್ಲ: ಚುನಾವಣಾ ರ್ಯಾಲಿ ಮತ್ತು ಬಿಜೆಪಿ ಸಭೆಗಳಲ್ಲಿ ಭಾಗವಹಿಸಲು ಪ್ರಧಾನಿಗೆ ಸಮಯವಿದೆ. ಆದರೆ, ಮಣಿಪುರದ ಜನರ ಸಂಕಟದ ಬಗ್ಗೆ ಮಾತನಾಡಲು ಅವರಲ್ಲಿ ಸಮಯವಿಲ್ಲ. ಮಣಿಪುರದ ಪರಿಸ್ಥಿತಿ ಸುಧಾರಿಸಲು ಮೋದಿ ಸರ್ಕಾರ ಪರಿಹಾರವೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಸಂಸತ್ತಿನಲ್ಲಿ ಯಾವುದೇ ಹೇಳಿಕೆ ನೀಡದಿರುವುದು ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

10,000 ಮಕ್ಕಳು ಸೇರಿದಂತೆ 50,000 ಮಣಿಪುರದ ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿ ಮಹಿಳೆಯರಿಗೆ ಸರಿಯಾದ ಸೌಲಭ್ಯಗಳಿಲ್ಲ. ಔಷಧ, ಆಹಾರ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ. ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ರೈತರು ಕೃಷಿ ಚಟುವಟಿಕೆಯನ್ನು ನಿಲ್ಲಿಸಿದ್ದಾರೆ. ಜನರು ಆರ್ಥಿಕ ನಷ್ಟ ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ ಎಂದು ಖರ್ಗೆ ಹೇಳಿದರು.

  • #WATCH | Leader of the House in Rajya Sabha, Piyush Goyal says, "We have clearly said to the Rajya Sabha Chairman Speaker that whenever he wants, we are ready to have discussions on Manipur. We are requesting the Opposition to have discussions for 10 days. The Opposition is… pic.twitter.com/d8NedJ8Wqq

ಚರ್ಚೆಗೆ ಸಿದ್ಧ, ಪ್ರತಿಪಕ್ಷಗಳಿಂದ ಪಲಾಯನ- ಬಿಜೆಪಿ: ಇತ್ತ ರಾಜ್ಯಸಭೆಯಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆಗೆ ಸಿದ್ಧ. ಪ್ರತಿಪಕ್ಷಗಳೇ ಇದರಿಂದ ನುಣುಚಿಕೊಂಡು ವೃಥಾ ಆರೋಪ ಮಾಡಿದ್ದು ಸಮಯ ಹಾಳು ಮಾಡುತ್ತಿವೆ. ಇಂದಿನಿಂದಲೇ 176 ರ ಅಡಿಯಲ್ಲಿ ಮಣಿಪುರ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಬಿಜೆಪಿ ಸವಾಲು ಎಸೆದಿದೆ.

ಒಂಬತ್ತು ದಿನಗಳಿಂದ ಕಲಾಪಕ್ಕೆ ವಿಪಕ್ಷಗಳು ಅಡ್ಡಿಪಡಿಸುತ್ತಿವೆ. ಸರ್ಕಾರ ಯಾವುದೇ ಚರ್ಚೆಗೆ ಸಿದ್ಧವಿದೆ. 10 ದಿನಗಳ ಕಾಲ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳಲ್ಲಿ ಕೇಳಿಕೊಂಡಿದ್ದೇವೆ. ಆದರೂ ಅವರು ಚರ್ಚೆಗೆ ಬರದೇ ಆರೋಪ ಮಾತ್ರ ಮಾಡುತ್ತಿದ್ದಾರೆ ಎಂದು ರಾಜ್ಯಸಭೆಯ ಸಭಾನಾಯಕ ಪಿಯೂಷ್ ಗೋಯಲ್ ಟೀಕಿಸಿದರು.

ಮಣಿಪುರದ ವಿಷಯದ ಬಗ್ಗೆ ನಿಯಮ 176 ರ ಅಡಿಯಲ್ಲಿ ಚರ್ಚೆಗೆ ಸಿದ್ಧ ಎಂದು ಸರ್ಕಾರ ಘೋಷಿಸಿದರೂ, ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಮುಂದುವರೆಸಿದರು. ನಿಯಮ 267ರ ಪ್ರಕಾರ ಸಮಗ್ರ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.

ವಿಪಕ್ಷಗಳ ಸಭೆ: ಮತ್ತೊಂದೆಡೆ, ಇಂಡಿಯಾ ಮೈತ್ರಿ ಪಕ್ಷಗಳ ನಾಯಕರು ಮಣಿಪುರಕ್ಕೆ ಭೇಟಿ ನೀಡಿದ ಸಂಸದರನ್ನು ಇದೇ ವೇಳೆ ಭೇಟಿ ಮಾಡಿದರು. ಕಾಂಗ್ರೆಸ್ ಸಂಸದೀಯ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಜೊತೆಗೆ ಉಭಯ ಸದನಗಳಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ಚರ್ಚೆ ನಡೆಯಿತು.

ಇದನ್ನೂ ಓದಿ: D K Shivakumar: ಡಿ.ಕೆ.ಶಿವಕುಮಾರ್ ಪ್ರಕರಣ: ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ನಿರಾಕರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.