ETV Bharat / bharat

ಚೇಲಾ, ಚಮಚ, ಭ್ರಷ್ಟ, ಜುಮ್ಲಾಜೀವಿ..ಸಂಸತ್ತಿನಲ್ಲಿ ಇಂಥ ಪದಬಳಕೆಗೆ ಕಡಿವಾಣ: ಪಟ್ಟಿ ದೊಡ್ಡದಿದೆ! - ಲೋಕಸಭೆ ಕಲಾಪ ಅಸಭ್ಯ ಪದಗಳು

ಕಾಲಕಾಲಕ್ಕೆ ಕೆಲ ಶಬ್ದ ಹಾಗೂ ಅಭಿವ್ಯಕ್ತಿ ಪದಗಳನ್ನು ಗುರುತಿಸಿ ಅವುಗಳನ್ನು ಅಸಂಸದೀಯ ಪದಗಳೆಂದು ದೇಶದ ಸದನಗಳ ಸಭಾಪತಿಗಳು ಗುರುತಿಸುತ್ತಿರುತ್ತಾರೆ ಹಾಗೂ ಇವುಗಳನ್ನು ಲೋಕಸಭೆಯ ಕಾರ್ಯದರ್ಶಿಗಳು ಒಂದೆಡೆ ಸಂಗ್ರಹಿಸಿ, ಭವಿಷ್ಯದಲ್ಲಿ ಸಂಸದರಿಗೆ ತಕ್ಷಣಕ್ಕೆ ಸಿಗುವ ಹಾಗೆ ಕೈಪಿಡಿಯ ಮೂಲಕ ಪ್ರಕಟಿಸುತ್ತಾರೆ. ಆದಾಗ್ಯೂ ಅಸಂಸದೀಯ ಪದಗಳ ಬಗ್ಗೆ ಅಂತಿಮ ನಿರ್ಧಾರ ತಳೆಯುವುದು ರಾಜ್ಯಸಭಾ ಚೇರ್ಮನ್ ಮತ್ತು ಲೋಕಸಭಾ ಸ್ಪೀಕರ್ ಅವರ ಪರಮಾಧಿಕಾರ.

Parliament flags usage of 'unparliamentary words' in the Lok Sabha and Rajya Sabha

author img

By

Published : Jul 14, 2022, 11:59 AM IST

ನವದೆಹಲಿ: ದೇಶದ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಬಳಸಬಾರದಂಥ ಅಸಂಸದೀಯ ಪದಗಳ ಪಟ್ಟಿಯನ್ನೊಳಗೊಂಡ ಹೊಸ ಕೈಪಿಡಿಯೊಂದನ್ನು ಲೋಕಸಭೆಯ ಕಾರ್ಯದರ್ಶಿ ಇಂದು ಬಿಡುಗಡೆ ಮಾಡಿದ್ದಾರೆ. 'ಜುಮ್ಲಾಜೀವಿ', 'ಬಾಲಬುದ್ಧಿ', 'ಕೋವಿಡ್ ಸ್ಪ್ರೆಡರ್' ಮತ್ತು 'ಸ್ನೂಪ್ ಗೇಟ್​' ಇವನ್ನೆಲ್ಲ ಇನ್ನುಮುಂದೆ ಸದನದಲ್ಲಿ ಬಳಸುವಂತಿಲ್ಲ. ಅಷ್ಟೇ ಏಕೆ, ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಶಬ್ದಗಳಾದ 'ನಾಚಿಕೆಗೇಡು' (ashamed), 'ದುರುಪಯೋಗ' (abused), 'ದ್ರೋಹ ಬಗೆದ' (betrayed), 'ಭ್ರಷ್ಟ​' (corrupt), 'ನಾಟಕ' (drama), 'ಬೂಟಾಟಿಕೆ' (hypocrisy) ಮತ್ತು 'ಅಸಮರ್ಥ' (incompetent) ಈ ಪದಗಳು ಸಹ ಇನ್ನುಮುಂದೆ ರಾಜ್ಯಸಭೆ ಹಾಗೂ ಲೋಕಸಭೆಗಳಲ್ಲಿ ಅಸಂಸದೀಯ ಪದಗಳಾಗಲಿವೆ. ಜುಲೈ 18 ರಂದು ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಹೊಸ ಅಸಂಸದೀಯ ಪದಗಳ ಕೈಪಿಡಿ ಪ್ರಕಟಿಸಲಾಗಿದೆ.

ಶಕುನಿ, ವಿನಾಶ ಪುರುಷ್ ಅನ್ನೋ ಹಾಗಿಲ್ಲ: ಅರಾಜಕತಾವಾದಿ (anarchist), ಶಕುನಿ (Shakuni), ಸರ್ವಾಧಿಕಾರಿ (dictatorial), ಸರ್ವಾಧಿಕಾರಿ (taanashah), ಜೈಚಂದ್ (Jaichand), ವಿನಾಶ್ ಪುರುಷ್ (vinash purush), ಖಲಿಸ್ತಾನಿ (Khalistani), ರಕ್ತದಿಂದ ಕೃಷಿ (khoon se kheti) ಈ ಯಾವುದೇ ಶಬ್ದಗಳನ್ನು ರಾಜ್ಯಸಭೆ ಅಥವಾ ಲೋಕಸಭೆ ಕಲಾಪದಲ್ಲಿ ಸದಸ್ಯರು ಬಳಸಿದರೆ ಅವು ಕಡತ ಸೇರುವುದಿಲ್ಲ. ಅಂದರೆ ರೆಕಾರ್ಡ್​ನಿಂದ ಡಿಲೀಟ್ ಮಾಡಲಾಗುತ್ತದೆ.

ಡಬಲ್ ರೋಲ್ (dohra charitra), ಕೆಲಸಕ್ಕೆ ಬಾರದವ (nikamma), ನಾಟಕ (nautanki), ತಮಟೆ ಬಾರಿಸುವುದು (dhindora peetna) ಮತ್ತು ಕಿವುಡ ಸರ್ಕಾರ (behri sarkar) ಇವೂ ಸಹ ಕೈಪಿಡಿಯ ಪ್ರಕಾರ ಅಸಂಸದೀಯ ಪದಗಳಾಗಿವೆ.

ಕಾಲಕಾಲಕ್ಕೆ ಕೆಲ ಶಬ್ದ ಹಾಗೂ ಅಭಿವ್ಯಕ್ತಿ ಪದಗಳನ್ನು ಗುರುತಿಸಿ ಅವುಗಳನ್ನು ಅಸಂಸದೀಯ ಪದಗಳೆಂದು ದೇಶದ ಸದನಗಳ ಸಭಾಪತಿಗಳು ಗುರುತಿಸುತ್ತಿರುತ್ತಾರೆ ಹಾಗೂ ಇವುಗಳನ್ನು ಲೋಕಸಭೆಯ ಕಾರ್ಯದರ್ಶಿಗಳು ಒಂದೆಡೆ ಸಂಗ್ರಹಿಸಿ, ಭವಿಷ್ಯದಲ್ಲಿ ಸಂಸದರಿಗೆ ತಕ್ಷಣಕ್ಕೆ ಸಿಗುವ ಹಾಗೆ ಕೈಪಿಡಿಯ ಮೂಲಕ ಪ್ರಕಟಿಸುತ್ತಾರೆ. ಆದಾಗ್ಯೂ ಅಸಂಸದೀಯ ಪದಗಳ ಬಗ್ಗೆ ಅಂತಿಮ ನಿರ್ಧಾರ ತಳೆಯುವುದು ರಾಜ್ಯಸಭಾ ಚೇರ್ಮನ್ ಮತ್ತು ಲೋಕಸಭಾ ಸ್ಪೀಕರ್ ಅವರ ಪರಮಾಧಿಕಾರವಾಗಿದೆ. ಭಾರತ ಮಾತ್ರವಲ್ಲದೆ ಇತರ ಕಾಮನ್​ವೆಲ್ತ್​​ ರಾಷ್ಟ್ರಗಳಲ್ಲೂ ಅಸಂಸದೀಯ ಪದಗಳನ್ನು ಗುರುತಿಸುವ ಪರಿಪಾಠವಿದೆ.

2021ರಲ್ಲಿ ಭಾರತ ದೇಶದ ರಾಜ್ಯ ವಿಧಾನಮಂಡಲಗಳು ಮತ್ತು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಅಸಂಸದೀಯ ಎಂದು ಗುರುತಿಸಲ್ಪಟ್ಟ ಶಬ್ದಗಳನ್ನು ಈಗ ಬಿಡುಗಡೆ ಮಾಡಲಾದ ಕೈಪಿಡಿಯು ಒಳಗೊಂಡಿದೆ. 2020ರಲ್ಲಿ ಕೆಲವೊಂದು ಕಾಮನ್​ವೆಲ್ತ್​ ರಾಷ್ಟ್ರಗಳ ಅಸಂಸದೀಯ ಶಬ್ದಗಳನ್ನೂ ಇದು ಒಳಗೊಂಡಿದೆ.

ಸದನದ ಕಲಾಪದ ಸಮಯದಲ್ಲಿ ನಿರ್ದಿಷ್ಟ ಅಭಿವ್ಯಕ್ತಿಯೊಂದರ ಜೊತೆಗೆ ಬಳಸಲ್ಪಡದ ಕೆಲ ಶಬ್ದಗಳು ಅಸಂಸದೀಯ ಅನ್ನಿಸದಿರಬಹುದು ಎಂಬುದನ್ನು ಕೈಪಿಡಿಯಲ್ಲಿ ಹೇಳಲಾಗಿದೆ. ಎರಡೂ ಸದನಗಳ ಸಭಾಪತಿಗಳ ವಿರುದ್ಧ ತೋರ್ಪಡಿಸಲಾಗುವ ಅಸಂಸದೀಯ ಅಭಿವ್ಯಕ್ತಿಗಳನ್ನು ಸಹ ಕೈಪಿಡಿಯಲ್ಲಿ ಸೇರಿಸಲಾಗಿದೆ ಹಾಗೂ ಇಂಥ ಶಬ್ದ ಅಥವಾ ಅಭಿವ್ಯಕ್ತಿಗಳನ್ನು ಬಳಸಿದಲ್ಲಿ ಅವನ್ನು ಕಡತದಿಂದ ತೆಗೆದುಹಾಕಲಾಗುವುದು.

ಇನ್ನಷ್ಟು ಅಸಂಸದೀಯ ಪದಗಳು: ರಕ್ತಪಾತ (bloodshed), ಕ್ರೂರಿ (bloody), ದ್ರೋಹ ಬಗೆದ (betrayed), ನಾಚಿಕೆಗೇಡು (ashamed), ನಿಂದಿಸಿದ (abused), ಮೋಸಮಾಡಿದ (cheated), ಚಮಚಾ (chamcha), ಚಮಚಾಗಿರಿ (chamchagiri), ಚೇಲಾಗಳು (chelas), ಬಾಲಿಶ (childishness), ಭ್ರಷ್ಟ (corrupt), ಹೇಡಿ (coward), ಅಪರಾಧಿ (criminal) ಮತ್ತು ಮೊಸಳೆ ಕಣ್ಣೀರು (crocodile tears), ಅವಮಾನ (disgrace), ಕತ್ತೆ (donkey), ನಾಟಕ (drama), ಕಣ್ಣೊರೆಸು (eyewash). .. ಪಟ್ಟಿ ಇಷ್ಟಕ್ಕೇ ಮುಗಿಯಲ್ಲ .. ಇನ್ನೂ ದೊಡ್ಡದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.