ETV Bharat / bharat

ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಮೇಕ್ ಇನ್ ಇಂಡಿಯಾ ಉತ್ತೇಜಿಸಲು ಸಂಸದೀಯ ಸಮಿತಿ ಸಲಹೆ - make in india

ವೈದ್ಯಕೀಯ ಉಪಕರಣಗಳ ಕುರಿತಂತೆ ಸಂಸದೀಯ ಸಮಿತಿಯು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದೆ. ಸೌಲಭ್ಯಗಳು ಹಾಗೂ ಕಚ್ಚಾ ವಸ್ತುಗಳು ಸೇರಿದಂತೆ ಹಲವು ರೀತಿಯ ಕೊರತೆಗಳು ಈ ಉದ್ಯಮವನ್ನು ಬಾಧಿಸುತ್ತಿವೆ ಎಂದು ತಿಳಿಸಿದೆ.

parl-panel-bats-for-make-in-india-to-boost-medical-device-production
ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಮೇಕ್ ಇನ್ ಇಂಡಿಯಾ ಉತ್ತೇಜಿಸಲು ಸಂಸದೀಯ ಸಮಿತಿ ಸಲಹೆ
author img

By

Published : Oct 12, 2022, 9:52 PM IST

ನವದೆಹಲಿ: ಭಾರತವು ಶೇ.80ರಷ್ಟು ವೈದ್ಯಕೀಯ ಉಪಕರಣಗಳ ಆಮದು ಮೇಲೆ ಅವಲಂಬಿತವಾಗಿದೆ. ಆದ್ದರಿಂದ 'ಮೇಕ್ ಇನ್ ಇಂಡಿಯಾ' ಪರಿಕಲ್ಪನೆಯನ್ನು ಉತ್ತೇಜಿಸಲು ವೈದ್ಯಕೀಯ ಸಾಧನಗಳಿಗೆ ಹೊಸ ನಿಯಮಾವಳಿ ರೂಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸಂಸದೀಯ ಸ್ಥಾಯಿ ಸಮಿತಿಯು ಸಲಹೆ ನೀಡಿದೆ.

2021-22ರಲ್ಲಿ ಭಾರತದ ವೈದ್ಯಕೀಯ ಉಪಕರಣಗಳ ಆಮದು ವೆಚ್ಚ 63,000 ಕೋಟಿ ರೂಪಾಯಿಗಳನ್ನು ದಾಟಿದೆ. ಇದರ ಅಂದಾಜು ಮಾರುಕಟ್ಟೆ ಮೌಲ್ಯವು1.60 ಲಕ್ಷ ಕೋಟಿ ರೂಪಾಯಿ ಆಗಿದೆ. ಹೀಗಾಗಿಯೇ ಸಂಸದೀಯ ಸಮಿತಿಯು ವಿವಿಧ ರಾಜ್ಯಗಳಿಗೆ ತನ್ನ ಕ್ಷೇತ್ರ ಭೇಟಿಯ ನಂತರ ಸಲಹೆಗಳನ್ನು ನೀಡಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯೊಂದಿಗೆ ಹೆಜ್ಜೆ ಹಾಕಲು ದೇಶದಲ್ಲಿ ವೈದ್ಯಕೀಯ ಉಪಕರಣಗಳ ಉದ್ಯಮಕ್ಕೆ ಕಿಕ್ ಸ್ಟಾರ್ಟ್ ನೀಡಲು ಸಾಕಷ್ಟು ನಿಬಂಧನೆಗಳನ್ನು ಹೊಂದಿರುವ ಹೊಸ ಶಾಸನ ರೂಪಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಮಿತಿಯು ಔಷಧೀಯ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

ಸಚಿವಾಲಯಗಳ ಸಮನ್ವಯದ ಅಗತ್ಯ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪ್ರಮುಖ ಪಾಲುದಾರರಾಗಿರುವುದರಿಂದ ಮತ್ತು ವೈದ್ಯಕೀಯ ಸಾಧನಗಳು ತಂತ್ರಜ್ಞಾನ ಮತ್ತು ವಸ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ವ್ಯಾಪ್ತಿಯಲ್ಲಿ ಬಹಳ ವೈವಿಧ್ಯಮ ಆಗಿರುವುದರಿಂದ ವಿವಿಧ ಇಲಾಖೆಗಳ ನಡುವೆ ಅಂತರ್​ ಸಚಿವಾಲಯಗಳ ಸಮನ್ವಯದ ಅಗತ್ಯವಿದೆ. ಇದನ್ನು ಆರೋಗ್ಯ ಮತ್ತು ಕುಟುಂಬ ಸಚಿವಾಲಯವು ಮಾಡಬೇಕೆಂದೂ ಸಂಸದೀಯ ಸಮಿತಿಯ ತನ್ನ ಶಿಫಾರಸಿನಲ್ಲಿ ಉಲ್ಲೇಖಿಸಿದೆ.

ಪ್ರಮುಖವಾಗಿ ಕೋವಿಡ್ 19 ಸಾಂಕ್ರಾಮಿಕವು ವೈದ್ಯಕೀಯ ಸಾಧನಗಳ ಸ್ಥಳೀಯ ತಯಾರಕರನ್ನು ಬೆಂಬಲಿಸುವ ಅಗತ್ಯವನ್ನು ಎತ್ತಿ ತೋರಿಸಿದೆ. ಕೋವಿಡ್ ಸಾಂಕ್ರಾಮಿಕವು ಮೂಲ ಸೌಕರ್ಯಗಳ ಅಗತ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ನಿಧಿಗಳು, ನುರಿತ ಮಾನವಶಕ್ತಿಯ ಅಗತ್ಯತೆ, ಕೇಂದ್ರ ಮತ್ತು ರಾಜ್ಯ ನಿಯಂತ್ರಕ ಅಧಿಕಾರಿಗಳ ನಡುವಿನ ಬಲವಾದ ಸಹಕಾರ ಹಾಗೂ ಇತ್ಯಾದಿಗಳು ಭಾರತದಲ್ಲಿ ವೈದ್ಯಕೀಯ ಉಪಕರಣಗಳ ಉದ್ಯಮಕ್ಕೆ ಅವಶ್ಯಕವಾಗಿದೆ ಎಂದು ಅಧಿಕಾರಿ ನೀಡಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಕಂಡು ಬಂದ ಅಂಶಗಳು: ದೇಶದಲ್ಲಿ ವೈದ್ಯಕೀಯ ಉಪಕರಣಗಳ ಉದ್ಯಮದ ಸ್ಥಿತಿ ಮತ್ತು ಭವಿಷ್ಯವನ್ನು ತಿಳಿಯಲು ಸಂಸದೀಯ ಸಮಿತಿಯ ನಿಯೋಗವು ಕಳೆದ ವರ್ಷದಲ್ಲಿ ಹಲವಾರು ರಾಜ್ಯಗಳಿಗೆ ಭೇಟಿ ನೀಡಿತ್ತು. ಆ ರಾಜ್ಯಗಳಲ್ಲಿ ಕಂಡು ಬಂದ ಅಂಶಗಳ ಬಗ್ಗೆಯೂ ಸಮಿತಿಯು ವಿಶ್ಲೇಷಣೆ ಮಾಡಿ ವರದಿ ಸಲ್ಲಿಸಿದೆ.

  • ಜಮ್ಮು ಮತ್ತು ಕಾಶ್ಮೀರ: ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ 11 ವೈದ್ಯಕೀಯ ಉಪಕರಣಗಳ ಉದ್ಯಮಗಳು ಅಸ್ತಿತ್ವದಲ್ಲಿವೆ. ಆದರೆ, ಯಾವುದೇ ಪರೀಕ್ಷಾ ಪ್ರಯೋಗಾಲಯಗಳಿಲ್ಲ. ವೈದ್ಯಕೀಯ ಉಪಕರಣಗಳ ಪಾರ್ಕ್​ಗಳನ್ನು ಸ್ಥಾಪಿಸುವುದು ಮತ್ತು ದೇಶೀಯ ತಯಾರಕರನ್ನು ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಕಚ್ಚಾ ವಸ್ತುಗಳ ಅಲಭ್ಯತೆ ಮತ್ತು ಸಾರಿಗೆ ವೆಚ್ಚಗಳು ಮತ್ತು ಕೌಶಲ್ಯಪೂರ್ಣ ಕಾರ್ಮಿಕ ಸಂಪನ್ಮೂಲಗಳ ಕೊರತೆ ಪ್ರಮುಖ ಸವಾಲುಗಳಾಗಿವೆ.
  • ಹರಿಯಾಣ: ರಾಜ್ಯದಲ್ಲಿ ಭೂಮಿ ಮತ್ತು ವಿದ್ಯುತ್‌ನ ಹೆಚ್ಚಿನ ವೆಚ್ಚವು ವೈದ್ಯಕೀಯ ಉಪಕರಣಗಳ ಉದ್ಯಮಕ್ಕೆ ಪ್ರಮುಖ ಸವಾಲುಗಳಾಗಿವೆ.
  • ಅಸ್ಸೋಂ: ಪ್ರಸ್ತುತ ಅಸ್ಸೋಂ ಬಿ ಗ್ರೇಡ್​ ವೈದ್ಯಕೀಯ ಉಪಕರಣಗಳಿಗೆ ಕೇವಲ ಒಂದು ಪರವಾನಗಿ ಉತ್ಪಾದನಾ ಸೌಲಭ್ಯವನ್ನು ಹೊಂದಿದೆ. ವೈದ್ಯಕೀಯ ಉಪಕರಣಗಳ ವಿಭಾಗವು ರಾಜ್ಯದಲ್ಲಿ ಉತ್ತಮ ಮಾರುಕಟ್ಟೆ ಸಾಮರ್ಥ್ಯ ಹೊಂದಿದೆ.
  • ಗುಜರಾತ್: 2017ರ ವೈದ್ಯಕೀಯ ಉಪಕರಣಗಳ ನಿಯಮಗಳಿಂದ ಪ್ರಸ್ತುತ ಡ್ಯುಯಲ್ ಲೈಸೆನ್ಸ್ ಪ್ರಕ್ರಿಯೆಯಿಂದಾಗಿ ರಾಜ್ಯದ ಎಂಎಸ್‌ಎಂಇ ತಯಾರಕರು ಕೇಂದ್ರ ಪರವಾನಗಿ ಪ್ರಾಧಿಕಾರದಿಂದ ಪರವಾನಗಿ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
  • ಜಾರ್ಖಂಡ್: ಜಾರ್ಖಂಡ್‌ನಲ್ಲಿ ಕೆಲವೇ ವೈದ್ಯಕೀಯ ಉಪಕರಣಗಳ ಉದ್ಯಮಗಳು ನೆಲೆಗೊಂಡಿವೆ. ಆದರೆ, ಇದು ಸೀಮಿತ ವರ್ಗದ ವೈದ್ಯಕೀಯ ಉಪಕರಣಗಳನ್ನು ತಯಾರಿಸುತ್ತಿವೆ.
  • ಮೇಘಾಲಯ: ರಾಜ್ಯದಲ್ಲಿ ವೈದ್ಯಕೀಯ ಉಪಕರಣಗಳ ಉದ್ಯಮದ ಉತ್ಪಾದನಾ ಸ್ಥಿತಿ ಶೂನ್ಯವಾಗಿದೆ. ಆದರೆ, ರಾಜ್ಯದಲ್ಲಿ ಮಾರುಕಟ್ಟೆ ಸಾಮರ್ಥ್ಯ ದೊಡ್ಡದಿದೆ.
  • ಒಡಿಶಾ: ರಾಜ್ಯದಲ್ಲಿ ಕೆಲವು ವೈದ್ಯಕೀಯ ಉಪಕರಣಗಳ ತಯಾರಿಕಾ ಕೈಗಾರಿಕೆಗಳು, ಘಟಕಗಳಿವೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 25 ತಯಾರಕರು ಇದ್ದಾರೆ.

ವೈದ್ಯಕೀಯ ಉಪಕರಣಗಳ ಮಾರುಕಟ್ಟೆ: ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯಾದ ನಂತರ ಭಾರತವು 4ನೇ ಅತಿದೊಡ್ಡ ಏಷ್ಯನ್ ವೈದ್ಯಕೀಯ ಉಪಕರಣಗಳ ಮಾರುಕಟ್ಟೆಯಾಗಿದೆ. ಜಾಗತಿಕವಾಗಿ ಅಗ್ರ 20 ವೈದ್ಯಕೀಯ ಉಪಕರಣಗಳ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ಭಾರತ ಸರ್ಕಾರವು ವೈದ್ಯಕೀಯ ಉಪಕರಣಗಳ ವಲಯ ಬಲಪಡಿಸಲು ವಿವಿಧ ಉಪಕ್ರಮಗಳನ್ನು ತೆಗೆದುಕೊಳ್ಳಬೇಕು. ಸಂಶೋಧನೆ ಮತ್ತು ಅಭಿವೃದ್ಧಿ (R&D) ಮತ್ತು ಮಾರುಕಟ್ಟೆಯನ್ನು ಹೆಚ್ಚಿಸಲು ವೈದ್ಯಕೀಯ ಉಪಕರಣಗಳ 100 ಪ್ರತಿಶತ ಎಫ್‌ಡಿಐಗೆ ಒತ್ತು ನೀಡಿದೆ.

ಗಮನಾರ್ಹ ಎಂದರೆ ವೈದ್ಯಕೀಯ ಉಪಕರಣಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಭಾರತದಲ್ಲಿ ಬೃಹತ್ ಹೂಡಿಕೆ ಆಕರ್ಷಿಸಲು, ಔಷಧೀಯ ಇಲಾಖೆಯು ವೈದ್ಯಕೀಯ ಉಪಕರಣಗಳ ದೇಶೀಯ ತಯಾರಿಕೆಗಾಗಿ ಪಿಎಲ್​ಐ (production-linked incentive) ಯೋಜನೆಯನ್ನು ಪ್ರಾರಂಭಿಸಿತ್ತು. 2021-28ರ ಅವಧಿಗೆ ಒಟ್ಟು 3,420 ಕೋಟಿ ರೂಪಾಯಿಗಳ ಹಣ ಖರ್ಚು ಮಾಡಿದೆ.

ಇದನ್ನೂ ಓದಿ: ವಿಡಿಯೊ ಗೇಮ್‌ ಆಡುವ ಮಕ್ಕಳ ಬಗ್ಗೆ ಇರಲಿ ಎಚ್ಚರ: ಎದುರಾಗಬಹುದು ಹೃದಯ ಬಡಿತದ ಸಮಸ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.