ETV Bharat / bharat

ದಾರಿ ತಪ್ಪಿದ ಮಗನ ಅಂತ್ಯಕ್ಕೆ ಸುಪಾರಿ ನೀಡಿದ ಹೆತ್ತವರು.. ತೆಲಂಗಾಣದಲ್ಲಿ ಅಚ್ಚರಿಯ ಘಟನೆ - ತೆಲಂಗಾಣದಲ್ಲಿ ದಾರಿ ತಪ್ಪಿದ ಮಗನ ಕೊಲೆ

ಎಷ್ಟೇ ಬುದ್ಧಿ ಹೇಳಿದರೂ ದಾರಿ ತಪ್ಪಿದ ಮಗ ಸರಿದಾರಿಗೆ ಬಾರದ ಕಾರಣಕ್ಕೆ ನೊಂದ ಪೋಷಕರು ಮಗನ ಹತ್ಯೆಗೇ ಸುಪಾರಿ ನೀಡಿದ್ದಾರೆ. ಉಸಿದು ಚೆಲ್ಲಿದ್ದ ಶವ ಮೂಸಿ ನದಿಯಲ್ಲಿ ತೇಲಿಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

parents-offer-supari-to-kill-son
ದಾರಿ ತಪ್ಪಿದ ಮಗನ ಅಂತ್ಯಕ್ಕೆ ಸುಪಾರಿ ನೀಡಿದ ಹೆತ್ತವರು
author img

By

Published : Nov 1, 2022, 7:02 PM IST

ಹೈದರಾಬಾದ್​(ತೆಲಂಗಾಣ): ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದ ಮಗನಿಗೆ ಹೆತ್ತವರು ಬುದ್ಧಿವಾದ ಹೇಳಿ ಬೇಸತ್ತಿದ್ದರು. ಮಗನ ಈ ದುಶ್ಚಟ ಕುಟುಂಬಕ್ಕೆ ಕಂಟಕವಾಗಿತ್ತು. ದಾರಿ ತಪ್ಪಿದ ಮಗನ ಕಿರುಕುಳಕ್ಕೆ ನೊಂದಿದ್ದ ತಂದೆ - ತಾಯಿಯೇ ಆತನ ಅಂತ್ಯಕ್ಕೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ. ಪ್ರಕರಣ ಬೇಧಿಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಈ ಘಟನೆ ನಡೆದಿದ್ದು ತೆಲಂಗಾಣದ ಸೂರ್ಯಪೇಟ್​ ಜಿಲ್ಲೆಯಲ್ಲಿ. ಹೆಣವೊಂದು ಮೂಸಿ ನದಿಯಲ್ಲಿ ತೇಲಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಾಯಿನಾಥ್​(26)ಮೃತ ವ್ಯಕ್ತಿ.

ಪ್ರಕರಣದ ಹಿನ್ನೆಲೆ: ಖಮ್ಮಂ ಜಿಲ್ಲೆಯ ನಿವಾಸಿಗಳಾದ ರಾಮ್ ಸಿಂಗ್ ಮತ್ತು ರಾಣಿಬಾಯಿ ದಂಪತಿಯ ಮಗನಾಗಿದ್ದ ಸಾಯಿನಾಥ್​ ಕಳೆದ ನಾಲ್ಕು ವರ್ಷಗಳಿಂದ ವಿಪರೀತ ಕುಡಿತದ ದಾಸನಾಗಿದ್ದ. ಕೆಲಸ ಮಾಡದೇ ಮದ್ಯದ ನಶೆಯಲ್ಲೇ ಇರುತ್ತಿದ್ದ ಈತ, ಕುಡಿತದ ಹಣಕ್ಕಾಗಿ ಹೆತ್ತವರನ್ನು ಪೀಡಿಸುತ್ತಿದ್ದ. ಆರಂಭದಿಂದಲೂ ಬುದ್ಧಿವಾದ ಹೇಳುತ್ತಿದ್ದ ಹೆತ್ತವರ ಮಾತಿಗೆ ಈತ ಸೊಪ್ಪು ಹಾಕಿಲ್ಲ.

ಹಣಕ್ಕಾಗಿ ಪೋಷಕರಿಗೆ ಕಿರುಕುಳ: ಕುಡಿಯದೇ ಬದುಕುವುದೇ ಇಲ್ಲ ಎಂಬಂತೆ ಆಡುತ್ತಿದ್ದ ಸಾಯಿನಾಥ್​, ಮದ್ಯ ಖರೀದಿಗಾಗಿ ಹಣಕ್ಕೆ ಪೋಷಕರನ್ನು ದಿನವೂ ಪೀಡಿಸುತ್ತಿದ್ದ. ಮನೆಯ ಹೊಣೆ ಹೊರಬೇಕಿದ್ದ ಮಗನೇ ದುಡಿದು ತಿನ್ನುತ್ತಿದ್ದ ಹೆತ್ತವರಿಗೆ ವಿಲನ್​ ಆಗಿದ್ದ. ಹಣಕ್ಕಾಗಿ ತಂದೆ- ತಾಯಿಯನ್ನು ಚಿತ್ರಹಿಂಸೆ ನೀಡುತ್ತಿದ್ದ. ಇದರಿಂದ ಪೋಷಕರು ತೀವ್ರ ಬೇಸರಗೊಂಡಿದ್ದರು.

ಮಗನ ಉಸಿರು ನಿಲ್ಲಿಸಲು ಸುಪಾರಿ: ಇನ್ನು ಮಗನ ಕಾಟಕ್ಕೆ ನೊಂದಿದ್ದ ಹೆತ್ತವರು ಆತನ ಉಸಿರನ್ನೇ ನಿಲ್ಲಿಸಲು ನಿರ್ಧರಿಸಿದ್ದರು. ಚಟಕ್ಕೆ ದಾಸನಾಗಿದ್ದ ಮಗನ ಕಿರುಕುಳದಿಂದ ತಪ್ಪಿಸಿಕೊಳ್ಳಲು ಕೊಲೆ ಮಾಡಿಸುವ ನಿರ್ಧಾರಕ್ಕೆ ಬಂದಿದ್ದರು. ಇದನ್ನು ಆತನ ಚಿಕ್ಕಪ್ಪನ ಮುಂದೆಯೂ ಉಸುರಿದ್ದರು. ಅದರಂತೆ ಯೋಜನೆ ರೂಪಿಸಿ ಹತ್ಯೆಗಾಗಿ ಆಟೋ ಚಾಲಕ, ಗ್ರಾಮದ ಕೆಲವರಿಗೆ ಸುಪಾರಿ ನೀಡಿದ್ದರು.

ಅದರಂತೆ ಸಾಯಿನಾಥ್​ನನ್ನು ಅಕ್ಟೋಬರ್ 18 ರಂದು ನಲ್ಗೊಂಡ ಜಿಲ್ಲೆಯ ಮೈಸಮ್ಮ ದೇವಸ್ಥಾನಕ್ಕೆ ಹಂತಕರು ಕರೆದೊಯ್ದು, ಅಲ್ಲಿ ಆತನಿಗೆ ಕಂಠಪೂರ್ತಿ ಮದ್ಯ ಕುಡಿಸಿದ್ದಾರೆ. ಕುಡಿದ ಮತ್ತಲ್ಲಿದ್ದ ಆತನನ್ನು ಸುಪಾರಿ ಪಡೆದವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಸಾಯಿನಾಥ್​ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ.

ಬಳಿಕ ಇದು ಯಾರ ಗಮನಕ್ಕೂ ಬರಬಾರದು ಎಂದು ಸುಪಾರಿ ಹಂತಕರು, ಶವವನ್ನು ಮೂಸಿ ನದಿಗೆ ಎಸೆದಿದ್ದಾರೆ. ಮರುದಿನ ನದಿಯಲ್ಲಿ ಶವ ತೇಲಿಕೊಂಡು ಬಂದಿದೆ. ವಿಷಯ ತಿಳಿದ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣದ ಸತ್ಯಗಳು ಒಂದೊಂದಾಗಿಯೇ ಬಿಚ್ಚಿಕೊಂಡಿವೆ. ದೇವಸ್ಥಾನದಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಬಳಿಕ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಬೆಂಕಿಗೆ ದಗ ದಗನೇ ಹೊತ್ತಿ ಉರಿದ ಬಸ್​..42 ಮಂದಿ ಜೀವ ಸೇಫ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.