ಹರಿದ್ವಾರ(ಉತ್ತರಾಖಂಡ): ಹರಿದ್ವಾರದ ಜಿಲ್ಲಾ ನ್ಯಾಯಾಲಯದಲ್ಲಿ ವಿಶಿಷ್ಟ ಮತ್ತು ವಿಚಿತ್ರ ಪ್ರಕರಣವೊಂದು ದಾಖಲಾಗಿದ್ದು, ವೃದ್ಧ ದಂಪತಿ ತಮ್ಮ ಮಗ ಮತ್ತು ಸೊಸೆಯಿಂದ ವಿಭಿನ್ನ ಬೇಡಿಕೆಯೊಂದಿಗೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬೇಡಿಕೆ ಈಡೇರಿಸುವಲ್ಲಿ ವಿಫಲರಾದರೆ ತಮಗೆ 5 ಕೋಟಿ ರೂಪಾಯಿ ಪರಿಹಾರದ ರೂಪದಲ್ಲಿ ನೀಡುವಂತೆ ಕೋರ್ಟ್ನಲ್ಲಿ ದೂರು ದಾಖಲಿಸಿದ್ದಾರೆ.
ಏನಿದು ಕೇಸ್: ಹರಿದ್ವಾರದ ನಿವಾಸಿ ಸಂಜೀವ್ ರಂಜನ್ ಪ್ರಸಾದ್ BHELನಿಂದ ಈಗಾಗಲೇ ನಿವೃತ್ತಿ ಪಡೆದುಕೊಂಡಿದ್ದು, ಸದ್ಯ ಪತ್ನಿ ಸಾಧನಾ ಜೊತೆ ಹೌಸಿಂಗ್ ಸೊಸೈಟಿಯಲ್ಲಿ ವಾಸವಾಗಿದ್ದಾರೆ. ಈ ದಂಪತಿ ತಮ್ಮ ಏಕೈಕ ಪುತ್ರ ಶ್ರೇಯ್ ಸಾಗರ್ ಅವರಿಗೆ ನೋಯ್ಡಾ ನಿವಾಸಿ ಶುಭಾಂಗಿ ಸಿನ್ಹಾ ಜೊತೆ 2016ರಲ್ಲಿ ವಿವಾಹ ಮಾಡಿಸಿದ್ದರು. ಶ್ರೇಯ್ ಪೈಲಟ್ ಆಗಿದ್ದರೆ, ಶುಭಾಂಗಿ ನೋಯ್ಡಾದಲ್ಲಿ ಕೆಲಸ ಮಾಡ್ತಿದ್ದಾರೆ.
ಮದುವೆಯಾಗಿ ಆರು ವರ್ಷ ಕಳೆದರೂ ಇವರಿಗೆ ಮಕ್ಕಳಾಗಿಲ್ಲ. ಅದಕ್ಕಾಗಿ ಇಬ್ಬರೂ ಯಾವುದೇ ರೀತಿಯ ಪ್ಲಾನಿಂಗ್ ಮಾಡ್ತಿಲ್ಲ ಎಂದು ಆರೋಪ ಮಾಡಿರುವ ವೃದ್ಧ ದಂಪತಿ ಇದೀಗ ಹರಿದ್ವಾರ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ತಮಗೆ ಒಂದು ವರ್ಷದೊಳಗೆ ಮೊಮ್ಮಕ್ಕಳನ್ನ ನೀಡುವಂತೆ ಅಥವಾ ತಾವು ಖರ್ಚು ಮಾಡಿರುವ 5 ಕೋಟಿ ರೂಪಾಯಿ ಹಣವನ್ನು ಪರಿಹಾರ ರೂಪದಲ್ಲಿ ವಾಪಸ್ ನೀಡುವಂತೆ ದೂರು ದಾಖಲಿಸಿದ್ದಾರೆ.
-
I gave my son all my money, got him trained in America. I don't have any money now. We have taken a loan from bank to build home. We're troubled financially& personally. We have demanded Rs 2.5 cr each from both my son & daughter-in-law in our petition: SR Prasad, Father pic.twitter.com/MeKMlBSFk1
— ANI UP/Uttarakhand (@ANINewsUP) May 11, 2022 " class="align-text-top noRightClick twitterSection" data="
">I gave my son all my money, got him trained in America. I don't have any money now. We have taken a loan from bank to build home. We're troubled financially& personally. We have demanded Rs 2.5 cr each from both my son & daughter-in-law in our petition: SR Prasad, Father pic.twitter.com/MeKMlBSFk1
— ANI UP/Uttarakhand (@ANINewsUP) May 11, 2022I gave my son all my money, got him trained in America. I don't have any money now. We have taken a loan from bank to build home. We're troubled financially& personally. We have demanded Rs 2.5 cr each from both my son & daughter-in-law in our petition: SR Prasad, Father pic.twitter.com/MeKMlBSFk1
— ANI UP/Uttarakhand (@ANINewsUP) May 11, 2022
ಮಗನ ವಿದ್ಯಾಭ್ಯಾಸಕ್ಕಾಗಿ ನನ್ನ ಬಳಿಯ ಎಲ್ಲ ಹಣ ಖರ್ಚು ಮಾಡಿದ್ದೇನೆ. ಆತನಿಗೆ ಅಮೆರಿಕದಲ್ಲಿ ತರಬೇತಿ ಕೊಡಿಸಿರುವೆ. ಇದೀಗ ನನ್ನ ಬಳಿ ಯಾವುದೇ ಹಣ ಉಳಿದುಕೊಂಡಿಲ್ಲ. ಮನೆ ಕಟ್ಟಲು ಬ್ಯಾಂಕ್ನಿಂದ ಸಾಲ ಪಡೆದುಕೊಂಡಿದ್ದು, ಇದೀಗ ಆರ್ಥಿಕ ಮುಗ್ಗಟ್ಟನ್ನು ಸಹ ಎದುರಿಸುತ್ತಿದ್ದೇನೆ ಎಂದು ಸಂಜೀವ್ ರಂಜನ್ ಪ್ರಸಾದ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಹುಡುಗಿಯರಿಬ್ಬರ ಸಂಬಂಧಕ್ಕೆ ಕುಟುಂಬದಿಂದ ವಿರೋಧ.. ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂಗಾತಿಗಳು!
ವೃದ್ಧ ವಯಸ್ಸಿನಲ್ಲಿ ನಾವು ಏಕಾಂಗಿಯಾಗಿ ಬದುಕುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಮಗ-ಸೊಸೆಯ ನಿರ್ಧಾರ ತುಂಬಾ ಬೇಸರ ಮೂಡಿಸಿದೆ. ಇದೀಗ ನಮಗೆ ಮೊಮ್ಮಕ್ಕಳು ಬೇಕು ಅಥವಾ 5 ಕೋಟಿ ರೂ. ನೀಡಬೇಕೆಂದು ತಿಳಿಸಿದ್ದಾರೆ.
ಪ್ರಕರಣದ ಪರ ವಾದ ಮಾಡುತ್ತಿರುವ ವಕೀಲ ಎ.ಕೆ. ಶ್ರೀವಾಸ್ತವ್ ಈ ಪ್ರಕರಣದ ಬಗ್ಗೆ ಮಾತನಾಡಿ, ಇಂದಿನ ಸಮಾಜದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ತಮ್ಮ ಮಕ್ಕಳಿಗೋಸ್ಕರ ಪೋಷಕರು ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಆದರೆ, ವಯಸ್ಸಾದ ಸಂದರ್ಭದಲ್ಲಿ ಅವರೊಂದಿಗೆ ಮಕ್ಕಳು ಉಳಿದುಕೊಳ್ಳುವುದನ್ನ ಬಿಟ್ಟು, ಬೇರೆ ಮನೆ ಮಾಡಲು ಶುರು ಮಾಡುತ್ತಾರೆ. ಪ್ರಸಾದ್ ದಂಪತಿ ಪ್ರಕರಣ ದಾಖಲು ಮಾಡಿದ್ದು, ಈ ಅರ್ಜಿಯ ವಿಚಾರಣೆ ಮೇ 17ರಂದು ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.