ಸಂಗಾರೆಡ್ಡಿ(ತೆಲಂಗಾಣ): ಜಿಲ್ಲೆಯ ಮುನಿಪಲ್ಲಿ ತಾಲೂಕಿನ ಚಿನ್ನಚೆಲ್ಮೆಡದಲ್ಲಿ ಭೀಕರ ಕೊಲೆಯೊಂದು ನಡೆದಿದೆ. ಎರಡು ವರ್ಷಗಳ ಹಿಂದೆ ತಮ್ಮ ಮಗನನ್ನು ವ್ಯಕ್ತಿಯೊಬ್ಬ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದ. ಸೇಡು ತೀರಿಸಿಕೊಳ್ಳಲು ಕಾದು ಕುಳಿತಿದ್ದ ಪೋಷಕರು ವ್ಯಕ್ತಿಯ ಗ್ರಾಮಕ್ಕೆ ತೆರಳಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ.
ಪೊಲೀಸರ ಪ್ರಕಾರ, ಚಿನ್ನಚೆಲ್ಮೆಡ ನಿವಾಸಿ ಬೀಗರಿ ಆನಂದ್ 2020 ರ ಅಕ್ಟೋಬರ್‌ನಲ್ಲಿ ಅದೇ ಗ್ರಾಮದ ನಿವಾಸಿ ತಲಾರಿ ಪ್ರವೀಣ್‌ನನ್ನು ಕೊಲೆ ಮಾಡಿದ್ದರು. ಜೂಜಾಟದ ವೇಳೆ ಇಬ್ಬರ ನಡುವೆ ನಡೆದ ಜಗಳ ಈ ಘಟನೆಗೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಒಂದು ವರ್ಷ ಜೈಲು ವಾಸ ಅನುಭವಿಸಿದ್ದ ಆನಂದ್ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇವರು ಸಂಗಾರೆಡ್ಡಿಯಲ್ಲಿ ವಾಸವಾಗಿದ್ದು, ಖಾಸಗಿ ಉದ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಇದೇ 9ರಂದು ಶುಭ ಕಾರ್ಯದ ಹಿನ್ನೆಲೆ ಚಿನ್ನಚೆಲ್ಮೆಡದಲ್ಲಿರುವ ಸಂಬಂಧಿಕರ ಮನೆಗೆ ಆನಂದ್ ತೆರಳಿದ್ದರು. ಶುಕ್ರವಾರ ಬೆಳಗ್ಗೆ ಆನಂದ್ ಹೊರಗೆ ಬರುವುದನ್ನು ಪ್ರವೀಣ್ ತಂದೆ ಅಂಬಯ್ಯ, ತಾಯಿ ಸ್ವರೂಪ ಮತ್ತು ಸಹೋದರ ಪ್ರಭುದಾಸ್ ಗಮನಿಸಿದ್ದಾರೆ. ಬಳಿಕ ಅವರೆಲ್ಲರೂ ಕೊಡಲಿಗಳೊಂದಿಗೆ ಆನಂದ್‌ನನ್ನು ಹಿಂಬಾಲಿಸಿದ್ದಾರೆ. ನಿರ್ಜನ ಪ್ರದೇಶ ಬಂದಾಕ್ಷಣ ಆನಂದ್ ಕಣ್ಣಿಗೆ ಮೃತ ಪ್ರವೀಣ್ ಪೋಷಕರು ಮೆಣಸಿನ ಪುಡಿ ಎರಚಿದ್ದಾರೆ. ಬಳಿಕ ಅವರು ಆನಂದ್‌ನನ್ನು ಅಡ್ಡರಸ್ತೆಯಲ್ಲಿ ತಲೆ ಮತ್ತು ಕೈಗಳನ್ನು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಂತರ ಆರೋಪಿಗಳು ಬುಧೇರಾ ಪೊಲೀಸ್ ಠಾಣೆಯಲ್ಲಿ ಶರಣಾದರು.
ಘಟನಾ ಸ್ಥಳಕ್ಕೆ ಸದಾಶಿವಪೇಟೆ ಗ್ರಾಮಾಂತರ ಸಿಐ ಸಂತೋಷ್ ಕುಮಾರ್ ಭೇಟಿ ನೀಡಿದರು. ಮುನಿಪಲ್ಲಿ ಎಸ್ಸೈ ರಾಜಶೇಖರ್ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆಹಾಕಿದರು.
ಓದಿ: ಶಾಲೆಯಲ್ಲಿ ಪ್ರೀತ್ಸೆ ಪ್ರೀತ್ಸೆ ಅಂತಾ ಬೆನ್ನುಬಿದ್ದ.. ಮನೆಗೆ ಬಂದು ಮಂಗಳಸೂತ್ರ ಕಟ್ಟಿ ಅತ್ಯಾಚಾರವೆಸಗಿದ