ಡಾರ್ಜಿಲಿಂಗ್: ಭಾರತ - ಚೀನಾ ಗಡಿಯಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ತರಬೇತಿ ನೀಡುತ್ತಿದ್ದ ಪ್ಯಾರಾ ಟ್ರೂಪರ್ರೊಬ್ಬರು ಮೃತಪಟ್ಟಿದ್ದಾರೆ. ಮೃತ ಯೋಧನನ್ನು ಲಘಿಯಾಲ್ (31) ಎಂದು ಗುರುತಿಸಲಾಗಿದೆ. ಲಘಿಲ್ ಪಶ್ಚಿಮ ಸಿಕ್ಕಿಂನ ರಾವಂಗ್ಲಾ ನಿವಾಸಿ ಎಂದು ತಿಳಿದು ಬಂದಿದೆ.
ಕಳೆದ ಎಂಟು ವರ್ಷಗಳಿಂದ ಅವರು ಪ್ಯಾರಾ ಟ್ರೂಪರ್ 6 ವಿಕಾಸ್ ರೆಜಿಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ಭಾರತ - ಚೀನಾ ಗಡಿ ಪ್ರದೇಶಕ್ಕೆ ತರಬೇತಿಗಾಗಿ ತೆರಳಿದ್ದಾಗ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಆಮ್ಲಜನಕ ಕೊರತೆಯಿಂದ ಬಿಎಸ್ಎಫ್ ಯೋಧ ಮೃತ
ಲಘಿಯಲ್ ಹೆಲಿಕಾಪ್ಟರ್ ಮೂಲಕ ಒಂದು ನಿರ್ದಿಷ್ಟ ಎತ್ತರವನ್ನು ಅವರು ತಲುಪಿದ್ದಾರೆ. ನಂತರ ಸುಮಾರು 200 ರಿಂದ 250 ಅಡಿ ಎತ್ತರದಿಂದ ಪ್ಯಾರಾಚೂಟ್‌ನೊಂದಿಗೆ ಜಿಗಿದಿದ್ದಾರೆ. ಬಳಿಕ ಕೆಲವು ಕ್ಷಣಗಳ ನಂತರ ಅವರ ಪ್ಯಾರಾಚೂಟ್‌ನ ಬಲ ಕ್ಲಿಪ್ ಕಳಚಿ ಹೋಗಿದೆ. ಆದರೆ, ಎಡಭಾಗವು ಸಿಲುಕಿಕೊಂಡಿತು. ಹಾಗಾಗಿ ಲಘಿಯಾಲ್ ನೇರವಾಗಿ ಪರ್ವತದ ಕಂದಕದಲ್ಲಿ ಬಿದ್ದು ಮೃತಪಟ್ಟಿದ್ದಾರೆ.