ETV Bharat / bharat

ಶಬರಿಮಲೆ ದೇಗುಲದ ಮುಖ್ಯ ಅರ್ಚಕರಾಗಿ ಪರಮೇಶ್ವರನ್ ನಂಬೂತಿರಿ ನೇಮಕ - ತಿರುವಾಂಕೂರು ದೇವಸ್ವಂ ಬೋರ್ಡ್

ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಮುಖ್ಯ ಅರ್ಚಕರಾಗಿ ಪರಮೇಶ್ವರನ್ ನಂಬೂತಿರಿಯನ್ನು ನೇಮಿಸಿ ತಿರುವಾಂಕೂರು ದೇವಸ್ವಂ ಬೋರ್ಡ್ ಆದೇಶ ಹೊರಡಿಸಿದೆ.

ಪರಮೇಶ್ವರನ್ ನಂಬೂತಿರಿ
ಪರಮೇಶ್ವರನ್ ನಂಬೂತಿರಿ
author img

By

Published : Oct 17, 2021, 3:33 PM IST

ತಿರುವನಂತಪುರಂ (ಕೇರಳ): ಪರಮೇಶ್ವರನ್ ನಂಬೂತಿರಿಯನ್ನು ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಮುಖ್ಯ ಅರ್ಚಕರಾಗಿ ನೇಮಕ ಮಾಡಲಾಗಿದೆ ಎಂದು ಟಿಡಿಬಿ ಹೇಳಿದೆ.

ಇಂದು ಬೆಳಗ್ಗೆ ದೇವಾಲಯದ ಸೋಪಾನಂನಲ್ಲಿ ಅರ್ಚಕರನ್ನು ಆಯ್ಕೆ ಮಾಡಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಹೇಳಿದೆ.

ಪಕ್ಕದ ಮಾಲಿಕಪ್ಪುರಂ ದೇವಿ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಕುರವಕ್ಕಡ್ ಇಲ್ಲಂನ ಶಾಭು ನಂಬೂತಿರಿಯನ್ನು ಆಯ್ಕೆ ಮಾಡಲಾಗಿದೆ. ಟಿಡಿಬಿ ನಡೆಸಿದ ಸಂದರ್ಶನದ ನಂತರ ಶಾರ್ಟ್‌ಲಿಸ್ಟ್ ಮಾಡಿದ ಪುರೋಹಿತರ ಫಲಕದಿಂದ ಚೀಟಿಗಳನ್ನು ಎತ್ತುವ ಮೂಲಕ ಆಯ್ಕೆಗಳನ್ನು ಮಾಡಲಾಗಿದೆ. ಬೆಳಗ್ಗೆ 8 ಗಂಟೆಗೆ ಪಂಡಲಂ ರಾಜಮನೆತನದ ಅತ್ಯಂತ ಕಿರಿಯ ಸದಸ್ಯ ಗೋವಿಂದ ವರ್ಮ ಅವರು ಈ ಚೀಟಿ ಎತ್ತಿದ್ದಾರೆ ಎಂದು ಟಿಡಿಬಿ ಹೇಳಿದೆ.

ಏತನ್ಮಧ್ಯೆ, ಭಾರಿ ಮಳೆಯ ಹಿನ್ನೆಲೆ, ಶಬರಿಮಲೆ ಮತ್ತು ಪಂಬಾ ಪ್ರದೇಶ ಸೇರಿದಂತೆ ಅರಣ್ಯ ಪ್ರದೇಶಗಳಲ್ಲಿ ಸಂಭವನೀಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಅವರು ಭಾನುವಾರ ಮತ್ತು ಸೋಮವಾರ ಯಾತ್ರೆಯನ್ನು ನಿಷೇಧಿಸಿರುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದಲ್ಲಿ ದೇವಾಲಯಗಳಿಗೆ ಧಕ್ಕೆ: ಹಿಂದೂ ಸಂಘಟನೆಗಳಿಂದ ಭಾರಿ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.