ಮುಂಬೈ: ಶಿವಸೇನೆ ಶಾಸಕಿ ಗೀತಾ ಜೈನ್ ಸಹೋದರ ಸಂಜಯ್ ಪುನ್ಮಿಯಾ ಮತ್ತು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ವಿರುದ್ಧ ದೊಡ್ಡ ಆರೋಪ ಮಾಡಿದ ಬಿಲ್ಡರ್ವೊಬ್ಬರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ವಿರುದ್ಧ ಸುಲಿಗೆ ದೂರು ದಾಖಲಿಸಿರುವ ಬಿಲ್ಡರ್, ನನ್ನ ಮಾಜಿ ವ್ಯವಹಾರ ಪಾಲುದಾರ ಪುನ್ಮಿಯಾ ಮತ್ತು ಸಿಂಗ್ ಅವರ ಆಪ್ತ ಸಹಚರರೊಂದಿಗಿನ ಮಾರ್ಚ್ನಲ್ಲಿ ಮೀಟಿಂಗ್ ನಡೆದಿತ್ತು.
ಈ ಮೀಟಿಂಗ್ನಲ್ಲಿ ಎನ್‌ಐಎ ತನಿಖೆ ತಂಡ ಮಹಾರಾಷ್ಟ್ರದ ನಾಲ್ಕರಿಂದ ಐದು ಮಂತ್ರಿಗಳ ಬಗ್ಗೆ ವಿಚಾರಣೆ ನಡೆಸಲಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರ ಬೀಳಲಿದೆ ಸಿಂಗ್ ಅವರ ಆಪ್ತರ ಲೆಕ್ಕಚಾರವಾಗಿದೆ ಎಂದು ಬಿಲ್ಡರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಅಂತಾ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಲ್ಡರ್ ಶ್ಯಾಮ್‌ಸುಂದರ್ ಅಗರ್ವಾಲ್ರಿಂದ 15 ಕೋಟಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪದಡಿ ಮುಂಬೈ ಮಾಜಿ ಆಯುಕ್ತ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣವನ್ನು ದಕ್ಷಿಣ ಮುಂಬೈನ ಮೆರೈನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಬುಧವಾರ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಅಗರ್‌ವಾಲ್ ಅವರ ಮಾಜಿ ಪಾಲುದಾರ ಸಂಜಯ್ ಪುನ್ಮಿಯಾ (55) ಮತ್ತು ಅವರ ಸಹಾಯಕ ಸುನಿಲ್ ಜೈನ್ (45) ನನ್ನು ಬಂಧಿಸಲಾಗಿದೆ.
ಅಗರ್ವಾಲ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪರಂಬೀರ್ ಸಿಂಗ್ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿದ್ದಾರೆ. ಅಗರ್ವಾಲ್ ದೂರಿನ ಪ್ರಕಾರ, 2011 ರಲ್ಲಿ ವಿವಾದಗಳಿಂದಾಗಿ ನನ್ನ ಮತ್ತು ಪುನ್ಮಿಯಾ ಪಾಲುದಾರಿಕೆ ಕೊನೆಗೊಂಡಿತು. ಬಳಿಕ ನನ್ನ ವಿರುದ್ಧ ಪುನ್ಮಿಯಾ ಸುಲಿಗೆ ಮತ್ತು ವಂಚನೆ ಸೇರಿದಂತೆ ಕನಿಷ್ಠ 18 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪೊಲೀಸರಿಗೆ ನೀಡಿರುವ ದೂರಿನಲ್ಲಿ ಏನಿದೆ?
ಈ ವರ್ಷ ಮಾರ್ಚ್ 23 ಮತ್ತು ಮಾರ್ಚ್ 30 ರಂದು ಪುನ್ಮಿಯಾರನ್ನು ಭೇಟಿ ಮಾಡಿದ್ದೆ. ಈ ವೇಳೆ ಅವರು ಮಾತನಾಡಿರುವುದು ರೆಕಾರ್ಡ್ ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಗರ್ವಾಲ್ ತಿಳಿಸಿದ್ದಾರೆ. ಈ ರೆಕಾರ್ಡಿಂಗ್ ಸಿಂಗ್ ಮತ್ತು ಇತರರ ವಿರುದ್ಧದ ಪ್ರಾಥಮಿಕ ಸಾಕ್ಷಿಯಾಗಿದೆ.
ಪುನ್ಮಿಯಾರನ್ನು ಭೇಟಿ ಮಾಡಿದ ಸಮಯದಲ್ಲಿ ಪುನ್ಮಿಯಾಗೆ ಪರಂಬೀರ್ ಸಿಂಗ್, ಡಿಸಿಪಿ ಅಕ್ಬರ್ ಪಠಾಣ್ ಮತ್ತು ಇತರ ಅಧಿಕಾರಿಗಳಿಂದ ಕರೆಗಳು ಬಂದಿದ್ದವು. ಈ ವೇಳೆ ಪುನ್ಮಿಯಾ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಸಿಂಗ್ ಮೂಲಕ ಬರೆದ 100 ಕೋಟಿ ಪತ್ರದ ಬಗ್ಗೆ ಚರ್ಚೆ ಮಾಡಿದರು ಎಂದು ಅಗರ್ವಾಲ್ ಪೊಲೀಸರಿಗೆ ತಿಳಿಸಿದರು.
ನಾಲ್ಕೈದು ಮಂತ್ರಿಗಳ ವಿಚಾರಣೆ ನಡೆಯಬಹುದು?
ಶೀಘ್ರದಲ್ಲೇ ಸಿಬಿಐ 100 ಕೋಟಿ ಆರೋಪದ ಬಗ್ಗೆ ತನಿಖೆ ಪ್ರಾರಂಭಿಸಲಿದೆ. ಈ ತನಿಖೆ ಭಾಗವಾಗಿ ಎನ್‌ಐಎ ರಾಜ್ಯ ಸರ್ಕಾರದ ನಾಲ್ಕೈದು ಮಂತ್ರಿಗಳ ವಿಚಾರಣೆ ನಡೆಸಲಿದೆ. ಇದರಿಂದಾಗಿ ಈ ಸರ್ಕಾರವು ತೊಂದರೆಗೆ ಸಿಲುಕಲಿದ್ದು, ಶೀಘ್ರದಲ್ಲೇ ಸರ್ಕಾರ ಬೀಳಲಿದೆ ಎಂದು ಪುನ್ಮಿಯಾ ಹೇಳಿದ್ದಾರೆ ಅಂತಾ ಅಗರ್‌ವಾಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮುಂಬೈನ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಪತ್ತೆಯಾದ ಸ್ಫೋಟಕಗಳಿಂದ ತುಂಬಿದ ವಾಹನದ ಪ್ರಕರಣದಲ್ಲಿ ವಜಾಗೊಳಿಸಿದ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಬಂಧಿಸಿದ ನಂತರ ಈ ವರ್ಷದ ಮಾರ್ಚ್ 17 ರಂದು ಪರಮ್ ಬಿರ್ ಸಿಂಗ್ ಅವರನ್ನು ಮುಂಬೈ ಪೊಲೀಸ್ ಆಯುಕ್ತರನ್ನಾಗಿ ಕೈಬಿಡಲಾಯಿತು. ಸಿಂಗ್ ಮಾಡಿದ ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಅನಿಲ್ ದೇಶ್ಮುಖ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.