ಪನ್ನಾ: ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ಮರವೊಂದಕ್ಕೆ ಹಾಕಲಾಗಿದ್ದ ಕುಣಿಕೆಗೆ ಸಿಲುಕಿ ಹುಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದೆ.
ಈ ಘಟನೆ ನಡೆದ ಸ್ಥಳದ ಸುತ್ತಮುತ್ತ ಶ್ವಾನ ದಳ ಪರಿಶೀಲನೆ ನಡೆಸಿದೆ. ಉತ್ತರ ಅರಣ್ಯ ವಿಭಾಗದ ಪನ್ನಾ ವ್ಯಾಪ್ತಿಯ ವಿಕ್ರಮಪುರದ ತಿಲಗ್ವಾನ್ ಬೀಟ್‌ನಲ್ಲಿ ಘಟನೆ ಬೆಳಕಿಗೆ ಬಂದಿದೆ. ಇದು ಹುಲಿ ಬೇಟೆಗಾರರ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.
ಪ್ರಕರಣ ಅನುಮಾನಾಸ್ಪದವಾಗಿದೆ ಎಂದು ಸಿಸಿಎಫ್ ತಿಳಿಸಿದ್ದಾರೆ. ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ. ಎಸ್‌ಟಿಎಫ್ ಹುಲಿ ತಂಡ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಮಾಂಸದಂಗಡಿಗಳ ಮೇಲೆ ಕರಡಿಗಳ ದಾಳಿ.. ಭಯ- ಭೀತರಾದ ಜನ