ETV Bharat / bharat

ಅನಾರೋಗ್ಯದಿಂದ ಬಳಲುತ್ತಿರುವ 100 ವರ್ಷದ ಹಿರಿಯ ಆನೆ 'ವತ್ಸಲಾ'...ಹೇಗಿದಾಳೆ ನೀವೇ ನೋಡಿ! - Vatsala suffering from-blindness

ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ದಶಕಗಳನ್ನು ಕಳೆದಿರುವ ಹಿರಿಯ ಆನೆ ವತ್ಸಲಾ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. 100 ವರ್ಷ ವಯಸ್ಸು ದಾಟಿದ ವತ್ಸಲಾಳನ್ನು, ಆಕೆಯ 50 ನೇ ವರ್ಷ 1971 ರಲ್ಲಿ ಕೇರಳದ ನೀಲಂಬೂರು ಅರಣ್ಯದಿಂದ ಹೋಶಂಗಾಬಾದ್‌ಗೆ ಕರೆತರಲಾಯಿತು.

Vatsala suffering from-blindness
ಅನಾರೋಗ್ಯದಿಂದ ಬಳಲುತ್ತಿರುವ ವತ್ಸಲಾ
author img

By

Published : Jul 1, 2021, 9:39 AM IST

ಪನ್ನಾ (ಮಧ್ಯಪ್ರದೇಶ): ಇಲ್ಲಿನ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಅಂತ್ಯದ ಹಿರಿಯ ವಯಸ್ಸಿನ ಆನೆ ವತ್ಸಲಾ ಅನಾರೋಗ್ಯದಿಂದ ಬಳಲುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ವತ್ಸಲಾಳ ಪ್ರಸ್ತುತ ವಯಸ್ಸು 100 ವರ್ಷಕ್ಕಿಂತ ಹೆಚ್ಚು. ವತ್ಸಲಾಳನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​ಗೆ ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ಆನೆ ಎಂದು ನೋಂದಾಯಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ.

ವತ್ಸಲಾ ಆನೆಯನ್ನು 1971 ರಲ್ಲಿ ಕೇರಳದ ಕಾಡೊಂದರಿಂದ ಹೋಶಂಗಾಬಾದ್‌ಗೆ ಕರೆತರಲಾಯಿತು. ವತ್ಸಲಾಳನ್ನು ಇಲ್ಲಿಗೆ ಕರೆತಂದಾಗ ಅದಕ್ಕೆ 50 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿರುವ ವತ್ಸಲಾ

100 ವರ್ಷ ಮೀರಿದ ವಯಸ್ಸು, ದೃಷ್ಟಿ ಕಳೆದುಕೊಂಡ ವತ್ಸಲಾ :

ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಆನೆಗಳ ಸರಾಸರಿ ಜೀವಿತಾವಧಿ 65 ರಿಂದ 70 ವರ್ಷಗಳು. ಹೋಶಂಗಾಬಾದ್‌ಗೆ ಬರುವ ಮೊದಲು ವತ್ಸಲಾ ಬೆಳೆದದ್ದು ಕೇರಳದ ನಿಲಂಬೂರ್ ಅರಣ್ಯದಲ್ಲಿ. ತನ್ನ ಜೀವನದ 50 ವರ್ಷಗಳನ್ನು ವತ್ಸಲಾ ನಿಲಂಬೂರ್​ನಲ್ಲಿ ಕಳೆದಿದ್ದಾಳೆ. ನಂತರ ಅವಳನ್ನು 1971 ರಲ್ಲಿ ಹೋಶಂಗಾಬಾದ್‌ಗೆ ಕರೆತರಲಾಯಿತು. 2021 ಕ್ಕೆ ವತ್ಸಲಾಗೆ 100 ವರ್ಷ ವಯಸ್ಸಾಗಿದೆ. ಈಗ ವೃದ್ಧಾಪ್ಯದಿಂದಾಗಿ, ಅವಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾಳೆ. ಈಗಾಗಲೇ ದೃಷ್ಟಿ ಕಳೆದುಕೊಂಡಿದ್ದಾಳೆ ಮತ್ತು ಆಹಾರವನ್ನೂ ಸರಿಯಾಗಿ ಸೇವಿಸುತ್ತಿಲ್ಲ.

ವತ್ಸಲಾಳನ್ನು 1993 ರಲ್ಲಿ ಪನ್ನಾಗೆ ಕರೆತಂದರು :

1993 ರಲ್ಲಿ ಹೋಶಂಗಾಬಾದ್‌ನ ಬೋರಿ ಅಭಯಾರಣ್ಯದಿಂದ ವತ್ಸಲಾಳನ್ನು ಪನ್ನಾ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಯಿತು. ಅಂದಿನಿಂದ ಆಕೆ ಇಲ್ಲಿನ ಹಿರಿಮೆ ಹೆಚ್ಚಿಸಿದ್ದಾಳೆ. ಭಾಂದವಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ದಶಕಗಳ ಕಾಲ ಓಡಾಡಿದ್ದ ವತ್ಸಲಾಳನ್ನು ಅನರೋಗ್ಯದ ಕಾರಣದಿಂದ, ಈಗ ಹೊರಗಡೆ ಬಿಡುತ್ತಿಲ್ಲ.

ಗಿನ್ನೆಸ್ ದಾಖಲೆಗೆ ಪ್ರಯತ್ನ :

ಪನ್ನಾ ಟೈಗರ್ ರಿಸರ್ವ್ ಮ್ಯಾನೇಜ್‌ಮೆಂಟ್ ವತ್ಸಲಾ ಹೆಸರನ್ನು ಗಿನ್ನೆಸ್ ಪುಸ್ತಕದಲ್ಲಿ ವಿಶ್ವದ ಅತ್ಯಂತ ಹಳೆಯ ಆನೆ ಎಂದು ನೋಂದಾಯಿಸಲು ಪ್ರಯತ್ನಿಸುತ್ತಿದೆ. ಆದರೆ, ವತ್ಸಲಾಳ ವಯಸ್ಸಿಗೆ ಸಂಬಂಧಿಸಿದ ಹಳೆಯ ದಾಖಲೆಗಳು ಇಲ್ಲದ ಕಾರಣ, ಇನ್ನೂ ಅದು ಸಾಧ್ಯವಾಗಿಲ್ಲ.

ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿದ್ದಳು ವತ್ಸಲಾ:

100 ವರ್ಷ ಪೂರೈಸಿದ ವತ್ಸಲಾ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಾಕ್ಷಿಯಾಗಿದ್ದಾಳೆ. ಕೇರಳದ ನೀಲಂಬೂರು ಅರಣ್ಯದಲ್ಲಿ 50 ವರ್ಷಗಳನ್ನು ಕಳೆದ ವತ್ಸಲಾ, 1921 ರಲ್ಲಿ ಜನಿಸಿದಳು. ನಂತರ ಈಕೆಯನ್ನು 1971 ರಲ್ಲಿ ಹೋಶಂಗಾಬಾದ್ ಮತ್ತು 1993 ರಲ್ಲಿ ಪನ್ನಾ ಹಲಿ ಸಂರಕ್ಷಿತ ಪ್ರದೇಶಕ್ಕೆ ಕರೆತರಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.