ETV Bharat / bharat

ದೆಹಲಿ ಸಂಪೂರ್ಣ ರಾಜ್ಯ ಸ್ಥಾನಮಾನದ ಕಲ್ಪನೆಗೆ ಪಂಡಿತ್ ನೆಹರು, ಅಂಬೇಡ್ಕರ್ ವಿರುದ್ಧವಾಗಿದ್ದರು: ಲೋಕಸಭೆಯಲ್ಲಿ ಅಮಿತ್​ ಶಾ ಹೇಳಿಕೆ

author img

By

Published : Aug 3, 2023, 4:01 PM IST

ಪ್ರತಿಪಕ್ಷಗಳ ಮೈತ್ರಿಕೂಟದಿಂದ ಯಾವುದೇ ಉಪಯೋಗವಾಗಲ್ಲ. ಈ ಮೈತ್ರಿಕೂಟದ ನಂತರವೂ ನರೇಂದ್ರ ಮೋದಿ ಪೂರ್ಣಬಹುಮತದೊಂದಿಗೆ ಮತ್ತೊಮ್ಮೆ ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Pandit Nehru, Sardar Patel, BR Ambedkar were against the idea of full Delhi statehood: Amit Shah
ದೆಹಲಿ ಸಂಪೂರ್ಣ ರಾಜ್ಯ ಸ್ಥಾನಮಾನದ ಕಲ್ಪನೆಗೆ ಪಂಡಿತ್ ನೆಹರು, ಅಂಬೇಡ್ಕರ್ ವಿರುದ್ಧವಾಗಿದ್ದರು: ಲೋಕಸಭೆಯಲ್ಲಿ ಅಮಿತ್​ ಶಾ ಹೇಳಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡುವ ಕಲ್ಪನೆಯನ್ನು ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಸಿ.ರಾಜಗೋಪಾಲಾಚಾರಿ, ರಾಜೇಂದ್ರ ಪ್ರಸಾದ್ ಮತ್ತು ಬಿಆರ್ ಅಂಬೇಡ್ಕರ್ ವಿರೋಧಿಸಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಲೋಕಸಭೆಯಲ್ಲಿ ಇಂದು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ - 2023ರ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಸತ್ತಿನ ಕಲಾಪ ಇದರ ಕಾರಣ ದೆಹಲಿಯ ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಮಸೂದೆಯನ್ನು ಮಂಡಿಸಲಾಗಿದೆ. ಯಾವುದೇ ವಿಧೇಯಕ ಹಾಗೂ ಕಾನೂನನ್ನು ರಾಜಕೀಯ ಕಾರಣ ಹಾಗೂ ರಾಜಕೀಯ ಮೈತ್ರಿಗಾಗಿ ವಿರೋಧಿಸುವುದು ಅಥವಾ ಸಮರ್ಥನೆ ಮಾಡುವುದು ಸರಿಯಲ್ಲ ಎಂದರು.

ಹೊಸ ಘಟಬಂಧನ್​ಗಳನ್ನು ಮಾಡಲು ಅನೇಕ ಪ್ರಕಾರಗಳು ಇವೆ. ವಿಧೇಯಕ ಹಾಗೂ ಕಾನೂನು ದೇಶದ ಬಲಕ್ಕಾಗಿ ಇರುತ್ತದೆ. ಇದರ ವಿರೋಧ, ಸಮರ್ಥನೆಯನ್ನು ದೇಶದ ಬಲಕ್ಕಾಗಿ ಮಾಡಬೇಕು. ಆದರೆ, ದೆಹಲಿ ಏನಾದರೂ ಆಗಲಿ, ಭ್ರಷ್ಟಾಚಾರ ಎಷ್ಟಾದರೂ ಆಗಲಿ, ಮಂತ್ರಿ ಏನಾದರೂ ಮಾಡಲಿ, ಮುಖ್ಯಮಂತ್ರಿ ಕೋಟ್ಯಂತರ ರೂಪಾಯಿ ಬಂಗಲೆ ಮಾಡಲಿ. ಘಟಬಂಧನ್​ಗಾಗಿ ಸಮರ್ಥನೆ ಮಾಡುವ ಯೋಜನೆ ಸೂಕ್ತವಲ್ಲ ಎಂದು ಹೇಳಿದರು.

ದೆಹಲಿ ಬಗ್ಗೆ ಪ್ರತಿಪಕ್ಷದ ಸದಸ್ಯರು ಆಲೋಚನೆ ಮಾಡಿ. ಮೈತ್ರಿಕೂಟದ ಬಗ್ಗೆ ಯೋಚನೆ ಮಾಡಬೇಡಿ. ಮೈತ್ರಿಕೂಟದಿಂದ ಉಪಯೋಗವಾಗಲ್ಲ. ಮೈತ್ರಿಕೂಟದ ನಂತರವೂ ನರೇಂದ್ರ ಮೋದಿ ಪೂರ್ಣಬಹುಮತದೊಂದಿಗೆ ಮತ್ತೊಮ್ಮೆ ಪ್ರಧಾನಮಂತ್ರಿ ಆಗಲಿದ್ದಾರೆ. ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ನಿಮಗೂ ಜನತೆ ಅವಕಾಶ ನೀಡಿದ್ದರು. ಆದರೆ, 10 ವರ್ಷ ಯುಪಿಎ ಆಡಳಿತ ಮಾಡಿ 12 ಲಕ್ಷ ಕೋಟಿ ಹಗರಣಗಳನ್ನು ಮಾಡಿತ್ತು. ಇದೇ ಕಾರಣಕ್ಕೆ ಇಂದು ಪ್ರತಿಪಕ್ಷದಲ್ಲಿ ಕುಳಿತಿದ್ದೀರಿ. ಈ ಬಿಲ್​ ವಿಷಯ ಇತ್ಯರ್ಥವಾದ ಬಳಿಕವೂ ಅವರು (ಆಮ್​ ಆದ್ಮಿ ಪಕ್ಷ) ನಿಮ್ಮ ಜೊತೆಗೆ ಬರುವುದಿಲ್ಲ ಎಂದು ನಾನು ವಿಶೇಷವಾಗಿ ಕಾಂಗ್ರೆಸ್​ನವರಿಗೆ ತಿಳಿಸಲು ಬಯಸುತ್ತೇನೆ ಎಂದು ಅಮಿತ್​ ಶಾ ಹೇಳಿದರು.

ರಾಜಧಾನಿ ಪ್ರದೇಶದ ಯಾವುದೇ ಕಾರ್ಯಕ್ಕಾಗಿ ಕಾನೂನು ಮಾಡಲು ಸಂಪೂರ್ಣ ಅಧಿಕಾರ ಸಂಸತ್ತಿಗೆ ಇದೆ. ದೆಹಲಿಯಲ್ಲಿ ಕೆಲವೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಕೆಲವೊಮ್ಮೆ ಕಾಂಗ್ರೆಸ್​ ಆಡಳಿತ ನಡೆಸಿತ್ತು. ಹಾಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ದೆಹಲಿಯಲ್ಲಿ ಕಾಂಗ್ರೆಸ್​ ಅಧಿಕಾರದಲ್ಲಿ ಇರುತ್ತಿತ್ತು. ಕೇಂದ್ರದಲ್ಲಿ ಕಾಂಗ್ರೆಸ್​ ಸರ್ಕಾರ ಇದ್ದಾಗ ದೆಹಲಿಯಲ್ಲಿ ಬಿಜೆಪಿ ಆಡಳಿತದಲ್ಲಿ ಇರುತ್ತಿತ್ತು. ಎರಡು ಪಕ್ಷಗಳ ನಡುವೆ ಯಾವುದೇ ಗಲಾಟೆ ಆಗಿರಲಿಲ್ಲ. ಎಲ್ಲವೂ ಸುಗಮವಾಗಿ ನಡೆಯುತ್ತಿತ್ತು ಎಂದರು.

ಆದರೆ, 2015ರಲ್ಲಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಪಕ್ಷವೊಂದಕ್ಕೆ ಸೇವೆ ಮಾಡುವ ಮನಸ್ಸೇ ಇಲ್ಲ. ಬದಲಿಗೆ ಜಳಗ ಮಾಡುವುದೊಂದೇ ಆ ಪಕ್ಷದ ಉದ್ದೇಶವಾಗಿದೆ. ಇಲ್ಲಿ ಸಮಸ್ಯೆ ಅಧಿಕಾರಿಗಳ ವರ್ಗಾವಣೆ, ನಿಯೋಜನೆ ಮಾಡುವ ಹಕ್ಕನ್ನು ಪಡೆಯುವುದಲ್ಲ. ಮುಖ್ಯ ಸಮಸ್ಯೆ ಎಂದರೆ ವಿಜಿಲೆನ್ಸ್​ ಇಲಾಖೆಯ ನಿಯಂತ್ರಣಕ್ಕೆ ಪಡೆದು ಬಂಗಲೆಯ ಸತ್ಯ ಹಾಗೂ ಭ್ರಷ್ಟಾಚಾರವನ್ನು ಮರೆಮಾಚುವುದು ಎಂದು ಕೇಜ್ರಿವಾಲ್​ ಸರ್ಕಾರದ ವಿರುದ್ಧ ಅಮಿತ್​ ಶಾ ನಡೆಸಿದರು.

ದೆಹಲಿಯ ಮಸೂದೆ ವಿಚಾರವಾಗಿ ಪಂಡಿತ್ ನೆಹರು ಹೆಸರನ್ನು ಅಮಿತ್​ ಶಾ ಉಲ್ಲೇಖಿಸಿದ್ದಕ್ಕೆ ಪ್ರತಿಕ್ರಿಯೆ ಆಗಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಮಾತನಾಡಿ, ನಿಮಗೆ ಅಗತ್ಯವಿದ್ದಾಗ ನೀವು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಸಹಾಯವನ್ನು ತೆಗೆದುಕೊಳ್ಳಿ. ನೀವು ನಿಜವಾಗಿಯೂ ನೆಹರು ಅವರ ಸಹಾಯವನ್ನು ತೆಗೆದುಕೊಂಡಿದ್ದರೆ, ದೇಶವು ಮಣಿಪುರ ಮತ್ತು ಹರಿಯಾಣ ಘಟನೆಗೆ ಸಾಕ್ಷಿಯಾಗುತ್ತಿರಲಿಲ್ಲ ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದರು.

ಇದನ್ನೂ ಓದಿ: Modi surname row: ಕ್ಷಮೆ ಕೇಳಲ್ಲ, ಹಾಗನ್ನಿಸಿದ್ದರೆ ಮೊದಲೇ ಕೇಳಿರುತ್ತಿದ್ದೆ; ಸುಪ್ರೀಂಕೋರ್ಟ್​ಗೆ ರಾಹುಲ್​ ಗಾಂಧಿ ಅಫಿಡವಿಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.