ಚೆನ್ನೈ (ತಮಿಳುನಾಡು): ಅಕ್ರಮವಾಗಿ ಭಾರತದಲ್ಲಿ ಉಳಿದುಕೊಂಡಿದ್ದಕ್ಕಾಗಿ ಪಾಕಿಸ್ತಾನದ ಪ್ರಜೆಗೆ ತಮಿಳುನಾಡು ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕರಾಚಿಯ ನಿವಾಸಿ ಮೊಹಮ್ಮದ್ ಯೂನುಸ್ ಎಂದು ಗುರುತಿಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಯು ಲಾಡ್ಜ್‌ನಲ್ಲಿ ತಂಗಿದ್ದಾನೆ ಎಂಬ ಸುಳಿವು ಆಧರಿಸಿ 2017 ರಲ್ಲಿ ತಮಿಳುನಾಡು ಪೊಲೀಸರು ಈತನನ್ನು ಬಂಧಿಸಿದ್ದರು. ಬಂಧಿತನಿಂದ ಪಾಕಿಸ್ತಾನ, ಅಮೆರಿಕನ್ ಮತ್ತು ಶ್ರೀಲಂಕಾದ ಕರೆನ್ಸಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಪಾಸ್ಪೋರ್ಟ್ ಇಲ್ಲದೇ ಭಾರತದಲ್ಲಿ ನೆಲೆಸಿದ್ದ ಈತ ಶ್ರೀಲಂಕಾಕ್ಕೆ ತೆರಳಲು ಯೋಜನೆ ಹಾಕಿದ್ದ ಎಂದು ತನಿಖೆಯಲ್ಲಿ ಬಯಲಾಗಿತ್ತು. ಬಂಧಿತ ಆರೋಪಿ ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದನು. ಪ್ರಕರಣದ ವಿವಾರಣೆ ಬಳಿಕ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ನಂತರ, ಅವರನ್ನು ವಾಘಾ ಗಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು, ಅಲ್ಲಿಯವರೆಗೆ ಕಂದಾಯ ಇಲಾಖೆ ಅಧಿಕಾರಿಗಳ ನಿಯಂತ್ರಣದಲ್ಲಿರುತ್ತಾನೆ.