ETV Bharat / bharat

ಬಂಡಿಪೋರಾದಲ್ಲಿ ಇಬ್ಬರು ಪೊಲೀಸರು ಹುತಾತ್ಮ.. ಕೃತ್ಯದಲ್ಲಿ ಪಾಕ್‌ ಉಗ್ರನ ಕೈವಾಡ ಎಂದ ಐಜಿಪಿ.. - ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ

ಪಾಕಿಸ್ತಾನದ ಭಯೋತ್ಪಾದಕ ಮೊದಲು ಪೊಲೀಸ್ ವಾಹನ ಚಲಾವಣೆ ಮಾಡ್ತಿದ್ದ ಚಾಲಕನಿಗೆ ಗುಂಡು ಹಾರಿಸಿದ್ದು, ತದನಂತರ ಪಿಎಸ್​ಒಗೆ ಗುಂಡು ಹಾರಿಸಿದ್ದಾರೆ. ಜೊತೆಗೆ ಶಸ್ತ್ರಾಸ್ತ್ರ ಕಸಿದುಕೊಳ್ಳಲು ಯತ್ನಿಸಿದ್ದಾರೆ ಎಂದರು..

Bandipora terror attack
Bandipora terror attack
author img

By

Published : Dec 11, 2021, 5:10 PM IST

ಬಂಡಿಪೋರಾ(ಜಮ್ಮು-ಕಾಶ್ಮೀರ): ಕಣಿವೆ ನಾಡು ಜಮ್ಮು-ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುಲ್ಶನ್​​​​​​​​ ಚೌಕ್​​ನಲ್ಲಿ ನಿನ್ನೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. ಈ ಕೃತ್ಯದಲ್ಲಿ ಪಾಕಿಸ್ತಾನಿ ಉಗ್ರನ ಕೈವಾಡವಿದೆ ಎಂದು ಐಜಿಪಿ ವಿಜಯ್‌ಕುಮಾರ್​ ತಿಳಿಸಿದ್ದಾರೆ.

ನಿನ್ನೆ ಸಂಜೆ ಬಂಡಿಪೋರಾದ ಗುಲ್ಶನ್ ಚೌಕ್​​ನಲ್ಲಿ ಪೊಲೀಸರನ್ನ ಗುರಿಯಾಗಿಸಿಕೊಂಡು ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೊಹಮ್ಮದ್​ ಸುಲ್ತಾನ್​​ ಹಾಗೂ ಫೈಯಾಜ್​ ಅಹ್ಮದ್ ಹುತಾತ್ಮರಾಗಿದ್ದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಕಾಶ್ಮೀರದ ಐಜಿಪಿ ವಿಜಯ್​ ಕುಮಾರ್​​, ಅಲ್ಲಿನ ಭದ್ರತೆ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿರುವ ಅವರು, ಪೊಲೀಸರ ಮೇಲೆ ನಡೆದ ದಾಳಿಯಲ್ಲಿ ಪಾಕಿಸ್ತಾನದ ಉಗ್ರ ಭಾಗಿಯಾಗಿದ್ದಾನೆಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ : ಇಬ್ಬರು ಪೊಲೀಸರು ಹುತಾತ್ಮ

ಪಾಕಿಸ್ತಾನದ ಭಯೋತ್ಪಾದಕ ಮೊದಲು ಪೊಲೀಸ್ ವಾಹನ ಚಲಾವಣೆ ಮಾಡ್ತಿದ್ದ ಚಾಲಕನಿಗೆ ಗುಂಡು ಹಾರಿಸಿದ್ದು, ತದನಂತರ ಪಿಎಸ್​ಒಗೆ ಗುಂಡು ಹಾರಿಸಿದ್ದಾರೆ. ಜೊತೆಗೆ ಶಸ್ತ್ರಾಸ್ತ್ರ ಕಸಿದುಕೊಳ್ಳಲು ಯತ್ನಿಸಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.