ಅನುಪಗಢ (ರಾಜಸ್ಥಾನ): ರಾಜಸ್ಥಾನದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ನುಸುಳುಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೆಡೆಮುರಿ ಕಟ್ಟಿದೆ.
ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಅನುಪಗಢದಲ್ಲಿನ ಗಡಿಯಲ್ಲಿ ಶುಕ್ರವಾರ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದನ್ನು ಬಿಎಸ್‌ಎಫ್ ಸಿಬ್ಬಂದಿ ಗಮನಿಸಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ಕಂಡ ನುಸುಳುಕೋರ ಪರಾರಿಯಾಗಲು ಯತ್ನಿಸಿದ್ದು, ಕಾರ್ಯ ಪ್ರವೃತ್ತರಾದ ಸಿಬ್ಬಂದಿ ಗುಂಡು ಹಾರಿಸಿ ಆತನನ್ನು ಸದೆಬಡಿದಿದ್ದಾರೆ.
ಇದನ್ನೂ ಓದಿ: 5.6 ಕೋಟಿ ರೂ. ಮೊತ್ತದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವಂಚನೆ: ವ್ಯಕ್ತಿ ಬಂಧನ
ನುಸುಳುಕೋರನ ಮೃತದೇಹವನ್ನು ವಶಪಡಿಸಿಕೊಂಡ ಬಿಎಸ್‌ಎಫ್ ಸಿಬ್ಬಂದಿ, ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.