ETV Bharat / bharat

ಅಮೃತ್​ಸರ್​ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್​ ಪ್ರತ್ಯಕ್ಷ​

ಗಡಿ ಭಾಗದಲ್ಲಿ ಪಾಕಿಸ್ತಾನದ ಡ್ರೋನ್​ ​ವೊಂದು ಪತ್ತೆಯಾಗಿದ್ದು, ಗಡಿ ಭದ್ರತ ಪಡೆಗಳು ಡ್ರೋನ್​​​ ಮೇಲೆ ಗುಂಡಿನ ದಾಳಿ ನಡೆಸಿವೆ.

Pakistani drone
ಗಡಿ ಭದ್ರತ ಪಡೆಗಳು
author img

By

Published : Sep 15, 2022, 7:39 PM IST

ಅಮೃತ್​ಸರ್, ಪಂಜಾಬ್​​: ಬುಧವಾರ ರಾತ್ರಿ ಅಮೃತ್​ಸರ್​​ನ ರಾಮದಾಸ್ ನಜ್ದಿರ್ ಗಡಿ ಪೋಸ್ಟ್​ನ ದರಿಯಾ ಮಂದಸೌರ್ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್​​​​ವೊಂದು ಕಾಣಿಸಿಕೊಂಡಿರುವ ಘಟನೆ ನಡೆದಿದೆ.

ಕಳೆದ ರಾತ್ರಿ 11.30ರ ಸುಮಾರಿಗೆ ಪಾಕಿಸ್ತಾನ ಕಡೆಯಿಂದ ಬಂದ ಡ್ರೋನ್​​​​​ವೊಂದು ಅಮೃತ್​ಸರದ ಗಡಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಗಡಿ ಭದ್ರತಾ ಪಡೆಗಳು ಡ್ರೋನ್​​​ ಮೇಲೆ 10 ಸುತ್ತಿನ ಗುಂಡಿನ ದಾಳಿ ನಡೆಸಿವೆ. ಬಳಿಕ ಡ್ರೋನ್​​​ ಪಾಕಿಸ್ತಾನಕ್ಕೆ ಹಿಂತಿರುಗಿದೆ. ಡ್ರೋನ್​​​​ ಕಾಣಿಸಿಕೊಂಡಿರುವ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ.

ಇನ್ನು ಡ್ರೋನ್​​​ ಕಾಣಿಸಿಕೊಂಡಿರುವ ಪ್ರದೇಶದಿಂದ 2 ಕಿಮಿ ದೂರದಲ್ಲಿ ಪಾಕಿಸ್ತಾನದ BOP ಪುರಾನ ಶಹಪುರ್​ ಇರುವ ಕಾರಣ ಭದ್ರತಾ ಪಡೆಗಳು ಗಡಿ ಪ್ರದೇಶದಲ್ಲಿ ತೀವ್ರ ನಿಗಾ ವಹಿಸಿವೆ.

ಇದನ್ನೂ ಓದಿ: ಶ್ರೀನಗರದ ನೌಗಾಮ್ ಪ್ರದೇಶದಲ್ಲಿ ಎನ್​ಕೌಂಟರ್​.. ಇಬ್ಬರು ಉಗ್ರರು ಹತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.