ನವದೆಹಲಿ: ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. 4 ತಿಂಗಳಲ್ಲಿ 2 ನೇ ಬಾರಿಗೆ ಖಾತೆಯ ಚಟುವಟಿಕೆಯನ್ನು ದೇಶದಲ್ಲಿ ನಿಲ್ಲಿಸಲಾಗಿದೆ. ಈ ಹಿಂದೆ ಜುಲೈನಲ್ಲಿ ತಡೆಹಿಡಿಯಲಾಗಿತ್ತು. ಕೆಲ ದಿನಗಳ ಬಳಿಕ ಪುನಃ ಸಕ್ರಿಯಗೊಳಿಸಲಾಗಿತ್ತು.
ಪಾಕಿಸ್ತಾನದ ಟ್ವಿಟ್ಟರ್ ಖಾತೆಯನ್ನು ತಡೆಹಿಡಿದ ಕಾರಣ ಬಳಕೆದಾರರಿಗೆ ಅದು "ಮುಂದಿನ ಕಾನೂನು ಪರಿಶೀಲನೆಗೆ ಒಳಪಡಿಸಲಾಗಿದೆ. ನ್ಯಾಯಾಂಗದ ಮುಂದಿನ ಆದೇಶದವರೆಗೆ ಸ್ಥಗಿತ" ಎಂಬ ಸೂಚನೆ ಟ್ವಿಟ್ಟರ್ ಖಾತೆಯ ಮೇಲೆ ಕಾಣುತ್ತಿದೆ. ಹೀಗಾಗಿ ಪಾಕಿಸ್ತಾನದ @GovtogPakistan ಟ್ವಿಟ್ಟರ್ ಖಾತೆ ಭಾರತದಲ್ಲಿ ಕಾಣಸಿಗುವುದಿಲ್ಲ.
ಆಯಾ ದೇಶಗಳಲ್ಲಿ ಕಾನೂನು ತೊಡಕು ಉಂಟಾದಲ್ಲಿ, ಅವುಗಳ ಮೇಲೆ ದೂರು ಕೇಳಿ ಬಂದರೆ ಟ್ವಿಟ್ಟರ್ ಖಾತೆಯನ್ನು ತಡೆಹಿಡಿಯಲಾಗುವುದು ಎಂದು ಸಾಮಾಜಿಕ ಮಾಧ್ಯಮ ದೈತ್ಯ ಹೇಳಿತ್ತು. ಇದಕ್ಕೂ ಮೊದಲು ಅಂದರೆ ಜೂನ್ನಲ್ಲಿ ಪಾಕಿಸ್ತಾನದ ವಿಶ್ವಸಂಸ್ಥೆ ಟ್ವಿಟ್ಟರ್ ಖಾತೆ, ಟರ್ಕಿ, ಇರಾನ್ ಮತ್ತು ಈಜಿಪ್ಟ್‌ನ ಅಧಿಕೃತ ಖಾತೆಗಳನ್ನು ನಿಷೇಧಿಸಲಾಗಿತ್ತು.
-
The Twitter account of the Government of Pakistan withheld in India pic.twitter.com/60Uzpoujwz
— ANI (@ANI) October 1, 2022 " class="align-text-top noRightClick twitterSection" data="
">The Twitter account of the Government of Pakistan withheld in India pic.twitter.com/60Uzpoujwz
— ANI (@ANI) October 1, 2022The Twitter account of the Government of Pakistan withheld in India pic.twitter.com/60Uzpoujwz
— ANI (@ANI) October 1, 2022
ಈ ಹಿಂದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಸುಳ್ಳು ಮಾಹಿತಿಯನ್ನು ಹರಡಿದ್ದಕ್ಕಾಗಿ 6 ಪಾಕಿಸ್ತಾನ ಮೂಲದ ಚಾನಲ್‌ಗಳು ಸೇರಿದಂತೆ 16 ಯೂಟ್ಯೂಬ್ ಸುದ್ದಿ ಚಾನಲ್‌ಗಳನ್ನು ನಿರ್ಬಂಧಿಸಿತ್ತು.