ETV Bharat / bharat

ಪಾಕಿಸ್ತಾನ ಸೂಪರ್ ಲೀಗ್ : ಕ್ರಿಕೆಟ್ ಬೆಟ್ಟಿಂಗ್ ಗ್ಯಾಂಗ್ ಬಂಧನ.. 21.50 ಲಕ್ಷ ರೂ. ವಶ

ಪಾಕಿಸ್ತಾನ ಸೂಪರ್ ಲೀಗ್ ಈ ತಿಂಗಳ 8ರಂದು ಪ್ರಾರಂಭವಾಗಿತ್ತು. ಹೈದರಾಬಾದ್​ ಕೇಂದ್ರವಾಗಿ ಪಾಕಿಸ್ತಾನ್​ನಲ್ಲಿ ನಡೆಯುವ ಸೂಪರ್​ ಲೀಗ್​ಗೆ ಈ ತಂಡ ಬೆಟ್ಟಿಂಗ್​ ಆಡಿಸುತ್ತಿತ್ತು. ಇಲ್ಲಿನ ನಿಜಾಂಪೇಟೆಯ ಕಟ್ಟಡದ ಮೇಲೆ ದಾಳಿ ನಡೆಸಿದ ವೇಳೆ ದಂಧೆ ಬೆಳಕಿಗೆ ಬಂದಿದೆ. ಪೂರ್ವ ಗೋದಾವರಿ ಜಿಲ್ಲೆಯ ಸೋಮಣ್ಣ ಎಂಬಾತನ ನೇತೃತ್ವದಲ್ಲಿ ಬೆಟ್ಟಿಂಗ್​ ನಡೆಸಲಾಗುತ್ತಿತ್ತು ಎಂದು ಸೈಬರಾಬಾದ್ ಸಿಪಿ (ಕಮಿಷನರ್​ ಆಫ್​ ಪೊಲೀಸ್)​ ಸಜ್ಜನರ್ ತಿಳಿಸಿದರು..

ಕ್ರಿಕೆಟ್ ಬೆಟ್ಟಿಂಗ್
ಕ್ರಿಕೆಟ್ ಬೆಟ್ಟಿಂಗ್
author img

By

Published : Jun 22, 2021, 8:28 PM IST

ಹೈದರಾಬಾದ್​ (ತೆಲಂಗಾಣ): ಇಲ್ಲಿನ ಬಚುಪಲ್ಲಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 21.50 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಬೆಟ್ಟಿಂಗ್‌ನಲ್ಲಿ ಭಾಗವಹಿಸುವ ಮೂಲಕ ಯುವಕರು ತಮ್ಮ ಭವಿಷ್ಯತ್ತನ್ನು ಹಾಳುಮಾಡಿಕೊಳ್ಳದಂತೆ ಸೈಬರಾಬಾದ್ ಸಿಪಿ (ಕಮಿಷನರ್​ ಆಫ್​ ಪೊಲೀಸ್)​ ಸಜ್ಜನರ್ ಅವರು ಸಲಹೆ ನೀಡಿದರು.

ಈ ಕುರಿತು ಮಾತನಾಡಿದ ಅವರು, ಪಾಕಿಸ್ತಾನ ಪ್ರೀಮಿಯರ್ ಲೀಗ್‌ಗೆ ಬೆಟ್ಟಿಂಗ್ ನಡೆಸಲಾಗಿತ್ತು. ಆ್ಯಪ್‌ಗಳ ಮೂಲಕ ನಡೆಸುವ ಈ ಧಂದೆಯಲ್ಲಿ ಹಣ ಆನ್‌ಲೈನ್‌ನಲ್ಲಿ ಕೈ ಬದಲಾಯಿಸಲಾಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಬೆಟ್ಟಿಂಗ್‌ನಲ್ಲಿ ಭಾಗಿಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.

ಪಾಕಿಸ್ತಾನ ಸೂಪರ್ ಲೀಗ್ ಈ ತಿಂಗಳ 8ರಂದು ಪ್ರಾರಂಭವಾಗಿತ್ತು. ಹೈದರಾಬಾದ್​ ಕೇಂದ್ರವಾಗಿ ಪಾಕಿಸ್ತಾನ್​ನಲ್ಲಿ ನಡೆಯುವ ಸೂಪರ್​ ಲೀಗ್​ಗೆ ಈ ತಂಡ ಬೆಟ್ಟಿಂಗ್​ ಆಡಿಸುತ್ತಿತ್ತು. ಇಲ್ಲಿನ ನಿಜಾಂಪೇಟೆಯ ಕಟ್ಟಡದ ಮೇಲೆ ದಾಳಿ ನಡೆಸಿದ ವೇಳೆ ದಂಧೆ ಬೆಳಕಿಗೆ ಬಂದಿದೆ. ಪೂರ್ವ ಗೋದಾವರಿ ಜಿಲ್ಲೆಯ ಸೋಮಣ್ಣ ಎಂಬಾತನ ನೇತೃತ್ವದಲ್ಲಿ ಬೆಟ್ಟಿಂಗ್​ ನಡೆಸಲಾಗುತ್ತಿತ್ತು ಎಂದು ತಿಳಿಸಿದರು.

ಆರೋಪಿಗಳಿಂದ ನಗದು ಜೊತೆಗೆ 26 ಮೊಬೈಲ್‌ಗಳು, ಕಮ್ಯುನಿಕೇಟರ್​ ಬೋರ್ಡ್ ಮತ್ತು ವೈಫೈ ರೂಟರ್ ಅನ್ನು ನಾವು ವಶಪಡಿಸಿಕೊಂಡಿದ್ದೇವೆ. ಹವಾಲಾ ಹಣದ ಮೂಲಕ ಬೆಟ್ಟಿಂಗ್ ನಡೆಸಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಲೈವ್ ಲೈನ್ ಗುರು, ಕ್ರಿಕೆಟ್ ಮಜಾ, ಲೋಟಸ್, ಬೆಟ್ 365 ಈ ಆನ್‌ಲೈನ್ ಅಪ್ಲಿಕೇಶನ್‌ಗಳ ಮೂಲಕ ಬೆಟ್ಟಿಂಗ್ ನಡೆಸಲಾಗುತ್ತಿದೆ. ಹೆಚ್ಚಾಗಿ ಯುವಕರು ಮತ್ತು ವಿದ್ಯಾರ್ಥಿಗಳು ಇವುಗಳಲ್ಲಿ ಭಾಗಿಯಾಗಿದ್ದಾರೆ. ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.