ಅಹಮದಾಬಾದ್(ಗುಜರಾತ್): ಭಾರತದ ಜಲಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ಬೋಟ್ ಅನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ವಶಕ್ಕೆ ಪ್ರವೇಶಿಸಿದ್ದ ಅವರಲ್ಲಿ 10 ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಶನಿವಾರ ರಾತ್ರಿ ಭಾರತೀಯ ಕರಾವಳಿ ಪಡೆಗೆ ಸೇರಿದ ಐಸಿಜಿಎಸ್ ಅಂಕಿತ್ ಶಿಪ್ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯಲ್ಲಿ 'ಯಾಸಿನ್' ಹೆಸರಿನ ಪಾಕ್ ಬೋಟ್ ಭಾರತದ ಜಲ ಗಡಿ ಪ್ರವೇಶಿಸಿದ್ದು ಗೊತ್ತಾಗಿದ್ದು, ತಕ್ಷಣ ಅದನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಅದರಲ್ಲಿದ್ದ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
The @IndiaCoastGuard 🚢 Ankit apprehended Pakistani 🚣 'Yaseen' with 10 crew in Indian waters at Arabian Sea during Night Ops on 08 Jan
— PRO Defence Gujarat (@DefencePRO_Guj) January 9, 2022 " class="align-text-top noRightClick twitterSection" data="
Boat being brought to Porbandar for further interrogation@PMO_NaMo @CMOGuj @AjaybhattBJP4UK @Bhupendrapbjp @NIA_India @dgpgujarat @ANI pic.twitter.com/izf8GedLUb
">The @IndiaCoastGuard 🚢 Ankit apprehended Pakistani 🚣 'Yaseen' with 10 crew in Indian waters at Arabian Sea during Night Ops on 08 Jan
— PRO Defence Gujarat (@DefencePRO_Guj) January 9, 2022
Boat being brought to Porbandar for further interrogation@PMO_NaMo @CMOGuj @AjaybhattBJP4UK @Bhupendrapbjp @NIA_India @dgpgujarat @ANI pic.twitter.com/izf8GedLUbThe @IndiaCoastGuard 🚢 Ankit apprehended Pakistani 🚣 'Yaseen' with 10 crew in Indian waters at Arabian Sea during Night Ops on 08 Jan
— PRO Defence Gujarat (@DefencePRO_Guj) January 9, 2022
Boat being brought to Porbandar for further interrogation@PMO_NaMo @CMOGuj @AjaybhattBJP4UK @Bhupendrapbjp @NIA_India @dgpgujarat @ANI pic.twitter.com/izf8GedLUb
ತಪ್ಪಿಸಿಕೊಳ್ಳಲು ಯತ್ನ: ಭಾರತದ ಜಲಗಡಿಯೊಳಗೆ ಸುಮಾರು 6ರಿಂದ 7 ಮೈಲು ಒಳಗೆ ಪಾಕ್ ಬೋಟ್ ಪ್ರವೇಶಿಸಿದ್ದು, ಭಾರತೀಯ ಕೋಸ್ಟ್ಗಾರ್ಡ್ನ ಶಿಪ್ ನೋಡಿದ ತಕ್ಷಣ ತಪ್ಪಿಸಿಕೊಳ್ಳಲು ಯತ್ನಿಸಿತು. ಇದನ್ನು ಬೆನ್ನತ್ತಿದ ಭಾರತೀಯ ಕೋಸ್ಟ್ಗಾರ್ಡ್ನ ಶಿಪ್ ಅಂಕಿತ್ ಯಾಸಿನ್ ಅನ್ನು ವಶಕ್ಕೆ ಪಡೆದುಕೊಂಡಿದೆ.
ಈ ಹಡಗಿನಲ್ಲಿದ್ದ ಎರಡು ಟನ್ ಮೀನು ಮತ್ತು 600 ಲೀಟರ್ ಇಂಧನವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 15ರಂದು, ಭಾರತೀಯ ಕೋಸ್ಟ್ ಗಾರ್ಡ್ ಇದೇ ರೀತಿಯ ಕಾರ್ಯಾಚರಣೆ ನಡೆಸಿ, ಪಾಕ್ ಬೋಟ್ ಅನ್ನು ಗುಜರಾತ್ನ ಕರಾವಳಿಯಲ್ಲಿ ವಶಕ್ಕೆ ತೆಗೆದುಕೊಂಡಿತ್ತು.
ಸಾಮಾನ್ಯವಾಗಿ ಇಂಥ ದೋಣಿಗಳನ್ನು ಮಾದಕ ದ್ರವ್ಯ ಸಾಗಾಟಕ್ಕೆ ಹೆಚ್ಚಾಗಿ ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ. ಹಿಂದಿನ ವರ್ಷ ಡಿಸೆಂಬರ್ 20ರಂದು ಭಯೋತ್ಪಾದನಾ ನಿಗ್ರಹ ದಳ ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 400 ಕೋಟಿ ರೂಪಾಯಿ ಮೌಲ್ಯದ 77 ಕೆಜಿ ಹೆರಾಯಿನ್ ಅನ್ನು ಜಪ್ತಿ ಮಾಡಿ 6 ಮಂದಿಯನ್ನು ಬಂಧಿಸಿತ್ತು.
ಇದನ್ನೂ ಓದಿ: ನೋಡಿ: ಬ್ರೆಜಿಲ್‌ನಲ್ಲಿ ಸರೋವರದ ಬೆಟ್ಟ ಕುಸಿದು ಐವರು ಸಾವು, 20 ಮಂದಿ ನಾಪತ್ತೆ