ನವದೆಹಲಿ : ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ. ಇದು ರಾಜ್ಯಗಳ ಮೇಲೆ ಹೊರೆ ಬೀಳುವುದಿಲ್ಲ. ಹೊರತಾಗಿ ಈ ನಷ್ಟವನ್ನು ಕೇಂದ್ರವೇ ಭರಿಸಬೇಕು. ನನ್ನ ಮಾತನ್ನು ತಿದ್ದಿಕೊಂಡಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ನಿನ್ನೆ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಇಳಿಕೆ ಘೋಷಣೆ ಬಳಿಕ ಟ್ವೀಟ್ ಮಾಡಿದ್ದ ಚಿದಂಬರಂ ಅವರು, ಈ ನಿರ್ಧಾರದಿಂದ ಕೇಂದ್ರ 1 ರೂ. ಭರಿಸಿದರೆ, ರಾಜ್ಯಗಳು 42 ಪೈಸೆ ಭರಿಸಬೇಕು ಎಂದು ಹೇಳಿದ್ದರು. ಇದೀಗ ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಂಡಿರುವ ಅವರು, ಇಳಿಕೆಯ ಬಳಿಕ ಉಂಟಾಗುವ ಇಡೀ ನಷ್ಟವನ್ನು ಕೇಂದ್ರವೇ ನಿಭಾಯಿಸಬೇಕು ಎಂದು ಸ್ಪಷ್ಟನೆ ನೀಡಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಸುಂಕ ರಾಜ್ಯಗಳಿಗೆ ಹೆಚ್ಚಿನ ಪಾಲು ಸಿಗುವುದಿಲ್ಲ. ಇದನ್ನು ಕೇಂದ್ರ ಸರ್ಕಾರ ಕಡಿಮೆ ಮಾಡುವ ಮೂಲಕ ರಾಜ್ಯಗಳೂ ಸುಂಕ ಕಡಿಮೆ ಮಾಡಲು ಹೇಳಿದಲ್ಲಿ, ಆಯಾ ಸರ್ಕಾರಗಳು ಆರ್ಥಿಕ ನಷ್ಟವನ್ನು ಅನುಭವಿಸಲಿವೆ. ಹೀಗಾಗಿ, ಕೇಂದ್ರ ಈ ನಿಟ್ಟಿನಲ್ಲಿ ಹೆಚ್ಚಿನ ಹಣಕಾಸು ನೆರವು ನೀಡಬೇಕು ಎಂದು ಅವರು ಹೇಳಿದ್ದಾರೆ.
ಕೇಂದ್ರದ ನಿರ್ಧಾರದಿಂದ ರಾಜ್ಯಗಳ ಪರಿಸ್ಥಿತಿ 'ದೆವ್ವ ಮತ್ತು ಆಳ ಸಮುದ್ರದ ರೀತಿ'ಯಾಗಿದೆ. ದರ ಕಡಿಮೆ ಮಾಡಿದರೆ, ಸಿಗುವ ಅಲ್ಪ ಆದಾಯವೂ ಖೋತಾ ಆಗಲಿದೆ. ಕಡಿಮೆ ಮಾಡದಿದ್ದಲ್ಲಿ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ನಿನ್ನೆ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕದಲ್ಲಿ ಪ್ರತಿ ಲೀಟರ್‌ಗೆ ₹ 8 ಕಡಿತ ಮತ್ತು ಡೀಸೆಲ್ ಮೇಲೆ ₹ 6 ಕಡಿತವನ್ನು ಘೋಷಿಸಿದೆ.
ಓದಿ: ಟಿಎಂಸಿಗೆ ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಅರ್ಜುನ್ ಸಿಂಗ್ ಜಂಪ್!?