ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ತೀವ್ರತೆ ದಿನದಿಂದ ದಿನಕ್ಕೆ ಕೈಮೀರಿ ಹೋಗುತ್ತಿದ್ದು, ಕೆಲವೊಂದು ರಾಜ್ಯಗಳಲ್ಲಿ ಹೇಳದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದೇ ವಿಚಾರವನ್ನಿಟ್ಟುಕೊಂಡು ಇದೀಗ ಉತ್ತರ ಪ್ರದೇಶ ಯೋಗಿ ಸರ್ಕಾರ ಹಾಗೂ ಕೇಂದ್ರದ ವಿರುದ್ಧ ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.
-
People must revolt against a government that is assuming all the people of India are fools
— P. Chidambaram (@PChidambaram_IN) April 28, 2021 " class="align-text-top noRightClick twitterSection" data="
">People must revolt against a government that is assuming all the people of India are fools
— P. Chidambaram (@PChidambaram_IN) April 28, 2021People must revolt against a government that is assuming all the people of India are fools
— P. Chidambaram (@PChidambaram_IN) April 28, 2021
ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ಮಾಜಿ ಹಣಕಾಸು ಸಚಿವರು, ಎಲ್ಲ ಚಾನೆಲ್ಗಳಲ್ಲಿ ನಕಲಿ ದೃಶ್ಯಗಳು ಪ್ರಸಾರಗೊಳ್ಳುತ್ತಿರುವುದೇ? ಪತ್ರಿಕೆಗಳಲ್ಲಿ ಬರುತ್ತಿರುವ ಸುದ್ದಿಗಳು ತಪ್ಪೇ? ಎಲ್ಲ ವೈದ್ಯರು ಸುಳ್ಳು ಹೇಳುತ್ತಿದ್ದಾರೆ? ಕುಟುಂಬದ ಸದಸ್ಯರು ಹೇಳುತ್ತಿರುವುದು ಸುಳ್ಳಾ? ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಮಾತನಾಡಿದ್ದ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಬೆಡ್, ಔಷಧ, ಹಾಗೂ ಲಸಿಕೆ ಕೊರತೆ ಇಲ್ಲ ಎಂದಿದ್ದರು. ಆದರೆ, ಉತ್ತರ ಪ್ರದೇಶದ ಕೆಲವೊಂದು ಆಸ್ಪತ್ರೆಗಳಲ್ಲಿ ರೆಮ್ಡೆಸಿವಿರ್, ಬೆಡ್ ಹಾಗೂ ಕೋವಿಡ್ ಲಸಿಕೆ ಕೊರತೆ ಕಂಡು ಬಂದಿದೆ. ಇದೇ ವಿಚಾರವಾಗಿ ಮಾಧ್ಯಮಗಳಲ್ಲಿ ತೋರಿಸಿರುವ ಮತ್ತು ಹೇಳುತ್ತಿರುವುದು ಸುಳ್ಳು ಸುದ್ದಿ ಎಂದು ಪ್ರಶ್ನೆ ಮಾಡಿದ್ದಾರೆ.
ದೇಶದಲ್ಲಿ ಆಮ್ಲಜನಕ, ಲಸಿಕೆ ಹಾಗೂ ಸಲಕರಣೆಗಳ ಕೊರತೆಯಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವರ ಹೇಳಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಯುಪಿ ಮುಖ್ಯಮಂತ್ರಿ ಹೇಳಿಕೆಯಿಂದ ಭಯಭೀತನಾಗಿದ್ದೇನೆ ಎಂದಿದ್ದಾರೆ. ದೇಶದ ಜನರು ಮೂರ್ಖರು ಎಂದು ನಂಬಿರುವ ಸರ್ಕಾರದ ವಿರುದ್ಧ ಜನರು ದಂಗೆ ಏಳಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಿಗದ ಆ್ಯಂಬುಲೆನ್ಸ್: ಬಂಡಿ ಮೇಲೆ ಮಹಿಳೆ ಶವ ಸಾಗಿಸಿದ ಕುಟುಂಬ
ಇತ್ತೀಚೆಗೆ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು 11 ರಾಜ್ಯಗಳ ಆರೋಗ್ಯ ಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ್ದು. ಈ ವೇಳೆ ಯೋಗಿ ಆದಿತ್ಯನಾಥ್ ತಮ್ಮಲ್ಲಿ ಯಾವುದೇ ಕೊರತೆ ಇಲ್ಲ ಎಂದು ಹೇಳಿ ಕೆಲವೊಂದು ಅಂಕಿ-ಅಂಶ ಹಂಚಿಕೊಂಡಿದ್ದರು.