ETV Bharat / bharat

20ನೇ ಮಹಡಿಯಿಂದ ಬಿದ್ದು ಒಯೊ ಸಂಸ್ಥಾಪಕ ರಿತೇಶ್ ಅಗರ್ವಾಲ್ ತಂದೆ ಸಾವು - ರಿತೇಶ್ ಅಗರ್ವಾಲ್ ಅವರ ತಂದೆ ರಮೇಶ್ ಅಗರ್ವಾಲ್

ಗುರುಗ್ರಾಮ್‌ನಲ್ಲಿ 20ನೇ ಮಹಡಿಯಿಂದ ಬಿದ್ದು ಒಯೊ ರೂಮ್ಸ್‌ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ತಂದೆ ರಮೇಶ್ ಅಗರ್ವಾಲ್ ಮೃತಪಟ್ಟಿದ್ದಾರೆ.

oyo-founders-father-dies-after-falling-from-high-rise-building-in-gurugram
20ನೇ ಮಹಡಿಯಿಂದ ಬಿದ್ದು ಒಯೊ ಸಂಸ್ಥಾಪಕ ರಿತೇಶ್ ಅಗರ್ವಾಲ್ ತಂದೆ ಸಾವು
author img

By

Published : Mar 10, 2023, 10:04 PM IST

ಗುರುಗ್ರಾಮ್ (ಹರಿಯಾಣ): ಒಯೊ ರೂಮ್ಸ್‌ (OYO Rooms) ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ತಂದೆ ರಮೇಶ್ ಅಗರ್ವಾಲ್ ಬಹುಮಹಡಿ ಕಟ್ಟಡದ 20ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿ ಸಮೀಪದ ಗುರುಗ್ರಾಮ್‌ನಲ್ಲಿ ನಡೆದಿದೆ. ರಿತೇಶ್ ಮದುವೆಯಾದ ಎರಡು ದಿನಗಳೇ ನಂತರ ಈ ದುರಂತ ಘಟನೆ ವರದಿಯಾಗಿದೆ.

ಹರಿಯಾಣದ ಗುರುಗ್ರಾಮ್‌ನಲ್ಲಿರುವ ಬಹುಮಹಡಿ ಕಟ್ಟಡದಿಂದ ರಮೇಶ್ ಅಗರ್ವಾಲ್ ಬಿದ್ದು ಮೃತಪಟ್ಟಿರುವ ಬಗ್ಗೆ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಘಟನೆ ನಡೆದಾಗ ರಮೇಶ್ ಅಗರ್ವಾಲ್ ಅವರ ಪತ್ನಿ ಹಾಗೂ ಪುತ್ರ ರಿತೇಶ್ ಅಗರ್ವಾಲ್ ಮತ್ತು ಪತ್ನಿ ಮನೆಯಲ್ಲಿದ್ದರು. ಸದ್ಯ ಮೃತದೇಹದ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ, ಸಾವಿನ ನಿಖರವಾದ ಕಾರಣ ಪತ್ತೆಯಾಗಿಲ್ಲ ಎಂದು ಗುರುಗ್ರಾಮ್ ಪೂರ್ವ ವಲಯದ ಡಿಸಿಪಿ ಕಚೇರಿಯ ಮೂಲಗಳು ತಿಳಿಸಿದೆ.

ಗೌಪ್ಯತೆ ಗೌರವಿಸಬೇಕು - ರಿತೇಶ್ ಅಗರ್ವಾಲ್: ಇದೇ ವೇಳೆ ರಿತೇಶ್ ರಿತೇಶ್ ತಮ್ಮ ತಂದೆ ರಮೇಶ್​ ರಿತೇಶ್ ನಿಧನದ ಬಗ್ಗೆ ಖಚಿತ ಪಡಿಸಿದ್ದಾರೆ. ಈ ಕುರಿತು ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದು, ಪ್ರತಿಯೊಬ್ಬರೂ ದುಃಖದ ಸಮಯದಲ್ಲಿ ತಮ್ಮ ಗೌಪ್ಯತೆ ಗೌರವಿಸಬೇಕೆಂದು ಮನವಿ ಮಾಡಿದ್ದಾರೆ. ''ನನ್ನ ಕುಟುಂಬ ಮತ್ತು ನಾನು ನಮ್ಮ ಮಾರ್ಗದರ್ಶಿ ಬೆಳಕು ಮತ್ತು ಶಕ್ತಿಯಾಗಿದ್ದ ನನ್ನ ತಂದೆ ರಮೇಶ್ ಅಗರ್ವಾಲ್ ಮಾರ್ಚ್ 10ರಂದು ನಿಧನರಾದರು ಎಂದು ಭಾರವಾದ ಹೃದಯದಿಂದ ಹಂಚಿಕೊಳ್ಳಲು ಬಯಸುತ್ತೇವೆ'' ಎಂದು ರಿತೇಶ್ ತಿಳಿಸಿದ್ದಾರೆ.

ಅಲ್ಲದೇ, ''ತಂದೆಯವರು ಪೂರ್ಣ ಜೀವನವನ್ನು ನಡೆಸಿದರು. ನನಗೆ ಮತ್ತು ನಮ್ಮಲ್ಲಿ ಅನೇಕರಿಗೆ ಪ್ರತಿದಿನವೂ ಸ್ಫೂರ್ತಿ ನೀಡುತ್ತಿದ್ದರು. ಅವರ ನಿಧನ ನಮ್ಮ ಕುಟುಂಬಕ್ಕೆ ಅಪಾರ ನಷ್ಟವಾಗಿದೆ. ನನ್ನ ತಂದೆಯ ಸಹಾನುಭೂತಿ ಮತ್ತು ಆತ್ಮೀಯತೆಯು ನಮ್ಮ ಕಷ್ಟದ ಸಮಯದಲ್ಲಿ ನಮ್ಮನ್ನು ನೋಡಿಕೊಂಡಿತ್ತು ಹಾಗೂ ನಮ್ಮನ್ನು ಮುನ್ನಡೆಸಿತ್ತು. ಅವರ ಮಾತುಗಳು ನಮ್ಮ ಹೃದಯದಲ್ಲಿ ಆಳವಾಗಿ ಅನುರಣಿಸುತ್ತವೆ. ಈ ದುಃಖದ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಲು ನಾವು ಪ್ರತಿಯೊಬ್ಬರನ್ನು ವಿನಂತಿಸುತ್ತೇವೆ" ಎಂದು ರಿತೇಶ್ ಅಗರ್ವಾಲ್​ ಹೇಳಿದ್ದಾರೆ.

ಪೊಲೀಸರ ವಿಚಾರಣೆ: ರಮೇಶ್ ಅಗರ್ವಾಲ್ ನಿಧನದ ಬಗ್ಗೆ ಮೃತರ ಕುಟುಂಬದವರು ಯಾವುದೇ ದೂರು ದಾಖಲಿಸಿಲ್ಲ ಎಂದು ವರದಿಯಾಗಿದೆ. ಆದರೆ, ಈ ಕುರಿತಾಗಿ ಕುಟುಂಬ ಸದಸ್ಯರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಸಿಆರ್‌ಪಿಸಿಯ ಸೆಕ್ಷನ್ 174ರ ಅಡಿಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

29 ವರ್ಷದ ರಿತೇಶ್ ಅಗರ್ವಾಲ್ ಕೇವಲ ಎರಡು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಫಾರ್ಮೇಶನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕಿ ಗೀತಾಂಶ ಸೂದ್ ಅವರನ್ನು ರಿತೇಶ್ ವಿವಾಹವಾಗಿದ್ದರು. ಇಡೀ ಕುಟುಂಬ ಮದುವೆ ಸಂಭ್ರಮದಿಂದ ಹೊರ ಬರುವ ಮುನ್ನವೇ ತಂದೆ ರಮೇಶ್ ಅಗರ್ವಾಲ್ ಅವರ ಹಠಾತ್​ ಸಾವು ಸಂಭವಿಸಿದೆ.

ಇದನ್ನೂ ಓದಿ: ವೈದ್ಯೆಗೆ ಇರಿದು ಕೊಂದ ಸ್ನೇಹಿತ: ಅದೇ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.