ನವದೆಹಲಿ: ರಾಷ್ಟ್ರ ರಾಜಧಾನಿಗೆ ಸುಮಾರು 70 ಟನ್ ಜೀವ ರಕ್ಷಕ ಅನಿಲವನ್ನು ಹೊತ್ತ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಮಂಗಳವಾರ ಮುಂಜಾನೆ ರಾಷ್ಟ್ರ ರಾಜಧಾನಿಯನ್ನು ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಆಮ್ಲಜನಕವನ್ನು ಈಗ ದೆಹಲಿ ಸರ್ಕಾರವು ವಿವಿಧ ಆಸ್ಪತ್ರೆಗಳಿಗೆ ವಿತರಿಸಲಿದೆ.
ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಭಾನುವಾರ ರಾತ್ರಿ ರಾಯಘಡದ ಜಿಂದಾಲ್ ಸ್ಟೀಲ್ ವರ್ಕ್ಸ್ ಪ್ಲಾಂಟ್ ನಿಂದ ನಿರ್ಗಮಿಸಿ ಇಂದು ದೆಹಲಿಗೆ ಬಂದು ತಲುಪಿದೆ. ಅಂಗುಲ್, ಕಾಳಿಂಗ ನಗರ, ರೂರ್ಕೆಲಾ ಮತ್ತು ರಾಯಘಡದಿಂದ ದೆಹಲಿ ಮತ್ತು ಎನ್ ಸಿಆರ್ ವಲಯಕ್ಕೆ ಮೆಡಿಕಲ್ ಆಕ್ಸಿಜನ್ ಸಾಗಿಸಲು ರೈಲ್ವೆ ಯೋಜನೆ ಮಾಡಿಕೊಳ್ಳಲಾಗಿತ್ತು.
"ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಚತ್ತೀಸ್‌ಗಢ್, ರಾಯ್‌ಗಡ ಮೂಲಕ ದೆಹಲಿಯನ್ನು ತಲುಪಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತೀಯ ರೈಲ್ವೆ ಯಾವುದೇ ಸಮಯದಲ್ಲಿ ಸಹಕಾರ ನೀಡಲು ಸಿದ್ಧವಿದೆ. ದೇಶಾದ್ಯಂತ ಜನರ ಜೀವ ಉಳಿಸಲು ಬೇಕಾದ ಸಂಪನ್ಮೂಲಗಳನ್ನು ಒದಗಿಸಲು ಸಿದ್ದವಿದೆ" ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿ ಹಾಗೂ ಅದರ ಸುತ್ತಮುತ್ತ ಆಕ್ಸಿಜನ್ ಕೊರತೆಯಿಂದ ಜನ ಪಡುತ್ತಿರುವ ಕಷ್ಟದ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ವೇದಿಕೆಗಳಲ್ಲಿ ಹತಾಶೆ ಸಂದೇಶಗಳು ಹರಿದಾಡುತ್ತಿದ್ದು, ದೇಶದಲ್ಲಿ ಆಕ್ಸಿಜನ್ ಗೆ ತೀವ್ರ ಬೇಡಿಕೆ ಇರುವ ಕಾರಣದಿಂದ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ದೆಹಲಿ ಬಂದು ತಲುಪಿದೆ.
ಇದನ್ನೂ ಓದಿ : ಮಕ್ಕಳಿಗಾಗಿ ಹೊಸ ಕನ್ನಡ ಚಾನಲ್ ಲೋಕಾರ್ಪಣೆ: ನಿಮ್ಮ ಮನೆಯಂಗಳಕ್ಕೆ 'ಈಟಿವಿ ಬಾಲ ಭಾರತ'