ನವದೆಹಲಿ: ನೇರ ಖರೀದಿ ವಿಭಾಗದ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 60,25,95,250 ಕೋಟಿ ಕೋವಿಡ್ ಡೋಸ್‌ಗಳನ್ನು ಪೂರೈಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 4,20,58,316 ಡೋಸ್ಗಳು ಲಭ್ಯವಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಜೂನ್ 21, 2021 ರಿಂದ ಉಚಿತ ಸಾರ್ವತ್ರಿಕ ವ್ಯಾಕ್ಸಿನೇಷನ್ ಆರಂಭವಾಗಿದೆ. ಕೇಂದ್ರ ಸರ್ಕಾರ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಸುವುದರ ಮೂಲಕ ಕ್ಷಿಪ್ರಗತಿಯ ವ್ಯಾಕ್ಸಿನೇಷನ್ಗೆ ಪ್ರೋತ್ಸಾಹ ನೀಡಿತು.
ಇದನ್ನೂ ಓದಿ: ದೇಶದಲ್ಲಿ ನಿನ್ನೆ 46,759 ಕೋವಿಡ್ ಸೋಂಕಿತರು ಪತ್ತೆ; ಕೇರಳದಲ್ಲೇ 32,801 ಮಂದಿಗೆ ವೈರಸ್
ಕೇಂದ್ರ ಸರ್ಕಾರವು, ವ್ಯಾಕ್ಸಿನ್ ತಯಾರಿಕಾ ಕಂಪನಿಗಳಲ್ಲಿ ಉತ್ಪಾದನೆಯಾಗುವ ಶೇಕಡಾ 75 ರಷ್ಟು ವ್ಯಾಕ್ಸಿನ್ಗಳನ್ನು ಖರೀದಿಸಿ ದೇಶದ ಎಲ್ಲಾ ಭಾಗಗಳಿಗೂ ಉಚಿತವಾಗಿ ನೀಡುತ್ತಿದೆ.ವಿಶೇಷವೆಂದರೆ ನಿನ್ನೆ ಒಂದೇ ದಿನ ದೇಶದಲ್ಲಿ 96 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದ್ದು, ಇಲ್ಲಿಯವರೆಗೆ ನೀಡಿರುವ ಅತ್ಯಧಿಕ ಡೋಸ್ ಇದಾಗಿದೆ. ಇದರ ಬೆನ್ನಲ್ಲೇ ದೇಶದಲ್ಲಿ ನಿನ್ನೆ 40 ಸಾವಿರಕ್ಕೂ ಅಧಿಕ ಕೋವಿಡ್ ಸೋಂಕಿತ ಪ್ರಕರಣಗಳು ದಾಖಲಾಗಿವೆ.