ETV Bharat / bharat

ಭಾರತದಲ್ಲಿ ಕೋವಿಡ್​ಗೆ ಐದಲ್ಲ 50 ಲಕ್ಷ ಸಾವು..ಲಸಿಕೆಯಿಂದಾಗಿ ಉಳಿದವು 42 ಲಕ್ಷ ಜೀವ.. ಇದು ಲ್ಯಾನ್ಸೆಟ್​​​​​​​​ ಸಂಶೋಧನಾ ವರದಿ

2021 ರ ಅಂತ್ಯದ ವೇಳೆಗೆ ಎರಡು ಅಥವಾ ಅದಕ್ಕಿಂತ ಹೆಚ್ಚು ಡೋಸ್‌ಗಳೊಂದಿಗೆ ವಿಶ್ವದ ಶೇ 40 ರಷ್ಟು ಜನರಿಗೆ ಲಸಿಕಾಕರಣ ಮಾಡಿದ್ದರೆ ಇನ್ನಷ್ಟು ಜೀವಗಳನ್ನು ಉಳಿಸಬಹುದಿತ್ತು ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ.

VIRUS-VACCINE-STUDY
ಭಾರತದಲ್ಲಿ ಕೋವಿಡ್​ಗೆ ಐದಲ್ಲ 50 ಲಕ್ಷ ಸಾವು
author img

By

Published : Jun 24, 2022, 7:05 AM IST

ಲಂಡನ್( ಇಂಗ್ಲೆಂಡ್​): ಕೋವಿಡ್​ ಲಸಿಕೆಯಿಂದಾಗಿ ಭಾರತದಲ್ಲಿ 42 ಲಕ್ಷಕ್ಕೂ ಹೆಚ್ಚು ಜೀವಗಳು ಉಳಿದಿವೆ. ಕೋವಿಡ್​ ವಿರುದ್ಧದ ಲಸಿಕೆ ಕಂಡು ಹಿಡಿದಿರುವುದರಿಂದಲೇ ಸಂಭಾವ್ಯ ಸಾವುಗಳು ತಪ್ಪಿವೆ ಎಂದು ಲ್ಯಾನ್ಸೆಟ್​​​ ಸಾಂಕ್ರಾಮಿಕ ರೋಗಗಳ ಜರ್ನಲ್​​​​​​ನಲ್ಲಿ ಪ್ರಕಟವಾದ ವರದಿಯಲ್ಲಿ ದೀರ್ಘವಾದ ಲೇಖನವನ್ನು ಪ್ರಕಟಿಸಲಾಗಿದೆ.

ಜಾಗತಿಕವಾಗಿ ನಡೆಸಿದ ಅಧ್ಯಯನದಲ್ಲಿ ಕೊರೊನಾ ಲಸಿಕೆಯಿಂದಾಗಿ ಸರಿ ಸುಮಾರು 2ಕೋಟಿ ಜನ ಸಂಭಾವ್ಯ ಸಾವಿನಿಂದ ಬಚಾವ್​ ಆಗಿದ್ದಾರೆ ಎಂದು ಅಧ್ಯಯನದ ವೇಳೆ ಕಂಡು ಹಿಡಿಯಲಾಗಿದೆ. ಲಸಿಕಾ ಕಾರ್ಯಕ್ರಮದ ಮೊದಲ ವರ್ಷದಲ್ಲಿ 185 ದೇಶಗಳಲ್ಲಿ ಸುಮಾರು 3 ಕೋಟಿ 14 ಲಕ್ಷ ಸಂಭಾವ್ಯ ಸಾವುಗಳಲ್ಲಿ ಲಸಿಕೆಯಿಂದಾಗಿ ಸುಮಾರು 1.98 ಕೋಟಿ ಸಾವುಗಳನ್ನು ಯಶಸ್ವಿಯಾಗಿ ತಡೆಗಟ್ಟಲಾಗಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.

2021 ರ ಅಂತ್ಯದ ವೇಳೆಗೆ ಎರಡು ಅಥವಾ ಅದಕ್ಕಿಂತ ಹೆಚ್ಚು ಡೋಸ್‌ಗಳೊಂದಿಗೆ ವಿಶ್ವದ ಶೇ 40 ರಷ್ಟು ಜನರಿಗೆ ಲಸಿಕಾಕರಣ ಮಾಡಿದ್ದರೆ ಇನ್ನಷ್ಟು ಜೀವಗಳನ್ನು ಉಳಿಸಬಹುದಿತ್ತು ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿನ ಕೋವಿಡ್​ ನಿಯಂತ್ರಣದ ಪ್ರಸ್ತಾಪ: ಭಾರತಕ್ಕೆ ಸಂಬಂಧಿಸಿದಂತೆ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. 2021ರ ಈ ಅವಧಿಯಲ್ಲಿ ವ್ಯಾಕ್ಸಿನೇಷನ್ ಮೂಲಕ ಭಾರತದಲ್ಲಿ ಸರಿ ಸುಮಾರು 42,10,000 ಸಾವುಗಳನ್ನು ತಡೆಗಟ್ಟಲಾಗಿದೆ ಎಂದು ನಾವು ಅಂದಾಜು ಮಾಡುತ್ತೇವೆ. ಇದು ನಮ್ಮ ಕೇಂದ್ರದಿಂದ ಮಾಡಲಾಗಿರುವ ಅಂದಾಜಾಗಿದೆ. ಈ ಅಂದಾಜಿನಲ್ಲಿನ ಅನಿಶ್ಚಿತತೆಯು 36,65,000-43,70,000 ರ ನಡುವೆ ಇದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಇಂಪಿರಿಯಲ್​ ಕಾಲೇಜು ಲಂಡನ್​​ನ ಲೇಖಕ ಆಲಿವರ್ ವ್ಯಾಟ್ಸನ್ ತಿಳಿಸಿದ್ದಾರೆ.

ಭಾರತದಲ್ಲಿ ಕೈಗೊಳ್ಳಲಾದ ಲಸಿಕೆ ಅಭಿಯಾನವು ಲಕ್ಷಾಂತರ ಜೀವಗಳನ್ನು ಉಳಿಸಿದೆ ಎಂದು ಅಧ್ಯಯನದ ವೇಳೆ ಕಂಡು ಬಂದಿದೆ. ಅಷ್ಟೇ ಅಲ್ಲ ಭಾರತದಲ್ಲಿ ವ್ಯಾಕ್ಸಿನೇಷನ್ ಹೊಂದಿರುವ ಗಮನಾರ್ಹ ಪರಿಣಾಮವನ್ನು ತೋರಿಸುತ್ತದೆ. ವಿಶೇಷವಾಗಿ ಭಾರತ ಡೆಲ್ಟಾ ರೂಪಾಂತರದ ಪರಿಣಾಮವನ್ನು ಅನುಭವಿಸಿದ ಮೊದಲ ದೇಶವಾಗಿದೆ ಎಂದೂ ವ್ಯಾಟ್ಸನ್ ತಿಳಿಸಿದ್ದಾರೆ.

ಸಾವು 5 ಲಕ್ಷ ಅಲ್ಲ 51 ಲಕ್ಷ: ಸಾಂಕ್ರಾಮಿಕದ ವೇಳೆ ದೇಶದಲ್ಲಿ 51,60,000 (48,24,000-56,29,000) ಸಾವುಗಳು ಸಂಭವಿಸಿರಬಹುದು ಎಂಬ ಅಂದಾಜಿನ ಮೇಲೆ ಭಾರತದಲ್ಲಿ ಇಷ್ಟು ಜೀವಗಳು ಉಳಿದಿವೆ ಎಂದು ಅಂದಾಜಿಸಲಾಗಿದೆ. ಸರ್ಕಾರ ನೀಡಿರುವ ಅಂಕಿ - ಸಂಖ್ಯೆಗಳ ಆಧಾರದಲ್ಲಿ 5,24,941 ಸಾವುಗಳು ಸಂಭವಿಸಿವೆ ಎಂದು ಅಧಿಕೃತ ಅಂಕಿ - ಅಂಶಗಳು ಹೇಳುತ್ತಿವೆ. ಆದರೆ ಈ ಅಧಿಕೃತ ಅಂಕಿ ಅಂಶಕ್ಕಿಂತ 10 ಪಟ್ಟು ಹೆಚ್ಚು ಸಾವು ಭಾರತದಲ್ಲಿ ಸಂಭವಿಸಿವೆ ಎಂದೂ ಅವರು ಇದೇ ವೇಳೆ ತಮ್ಮ ಅಧ್ಯಯನದ ಆಧಾರದ ಮೇಲೆ ಹೇಳಿದ್ದಾರೆ.

47 ಲಕ್ಷ ಸಾವು- ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜು: ಇನ್ನು ದಿ ಎಕನಾಮಿಸ್ಟ್‌ನ ಅಂದಾಜಿನ ಪ್ರಕಾರ, ಮೇ 2021 ರ ಆರಂಭದ ವೇಳೆಗೆ ಭಾರತದಲ್ಲಿ COVID-19ರಿಂದ 2.3 ಮಿಲಿಯನ್ ಅಂದರೆ 23 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ 4.7 ಮಿಲಿಯನ್ ಅಂದರೆ 47 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಇದನ್ನು ಭಾರತ ಸರ್ಕಾರ ನಿರಾಕರಿಸಿದೆ.

ಲಸಿಕೆ ಪರಿಚಯಿಸಿದ ನಂತರ, ಅಂದರೆ ಮೊದಲ ವರ್ಷದಲ್ಲಿ ಸುಮಾರು 20 ಮಿಲಿಯನ್ ಅಂದರೆ 2 ಕೋಟಿ ಸಾವುಗಳನ್ನು ತಡೆಗಟ್ಟಲಾಗಿದೆ ಎಂದು ಅಂದಾಜಿಸಲಾಗಿದೆ. ಸುಮಾರು 75 ಲಕ್ಷ ಸಾವುಗಳನ್ನು ಭಾರಿ ಪ್ರಮಾಣದಲ್ಲಿ ಕೋವಿಡ್​ ಹಬ್ಬಿದ ದೇಶಗಳಲ್ಲಿ ತಡೆಯಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಲಸಿಕಾಕರಣ ಆರಂಭವಾದ ಮೇಲೂ 35 ಲಕ್ಷ ಜನರ ಸಾವು; ಡಿಸೆಂಬರ್ 8, 2020 ರಂದು ಮೊದಲ ಲಸಿಕೆಯನ್ನು ವೈದ್ಯಕೀಯ ಪರೀಕ್ಷೆಯ ಯಶಸ್ವಿ ಬಳಿಕ ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ ಎಂದು ವರದಿಯಲ್ಲಿ ದಾಖಲಿಸಲಾಗಿದೆ. ವಿಶ್ವಾದ್ಯಂತ ಲಸಿಕೆಯನ್ನು ಸಮರೋಪಾದಿಯಲ್ಲಿ ಹಾಕಿದ ಹೊರತಾಗಿಯೂ, ಡಿಸೆಂಬರ್ 2020 ರಲ್ಲಿ ಮೊದಲ ಲಸಿಕೆಯನ್ನು ನೀಡಿದ ಬಳಿಕ ಸುಮಾರು 35 ಲಕ್ಷ ಮಂದಿ ಕೋವಿಡ್​ಗೆ ಬಲಿಯಾಗಿದ್ದಾರೆ ಎಂದು ವಾಟ್ಸನ್​ ತಮ್ಮ ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನು ಓದಿ:ಕೇದಾರನಾಥ ಯಾತ್ರೆಯಲ್ಲಿ 175 ಕುದುರೆ, ಕತ್ತೆಗಳ ಸಾವು: ಮಾಲೀಕರಿಗೆ ಕೋಟಿ ಕೋಟಿ ಆದಾಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.