ETV Bharat / bharat

ದೂಧ್​ ಸಾಗರ್​ ನೀರಿನ ಮಟ್ಟ ಹೆಚ್ಚಳ: ಕುಸಿದ ಕೇಬಲ್ ಸೇತುವೆ - 40ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ - Dudhsagar waterfall water levels

ಗೋವಾ-ಕರ್ನಾಟಕ ಗಡಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ದೂಧ್​ ಸಾಗರ್ ಜಲಪಾತದ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳವಾಗಿದೆ. ಶುಕ್ರವಾರ ಕೇಬಲ್ ಸೇತುವೆ ಕುಸಿದಿದ್ದು, 40 ಕ್ಕೂ ಹೆಚ್ಚು ಪ್ರವಾಸಿಗರು ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಕೂಡಲೇ ವಿಷಯ ತಿಳಿದು ಸ್ಥಳಕ್ಕಾಮಿಸಿದ ದೃಷ್ಟಿ ಜೀವರಕ್ಷಕರು ಎಲ್ಲ ಪ್ರವಾಸಿಗರನ್ನ ರಕ್ಷಿಸಿದ್ದು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

cable bridge collapses
ಕುಸಿದ ಕೇಬಲ್ ಸೇತುವೆ
author img

By

Published : Oct 15, 2022, 7:08 AM IST

ಪಣಜಿ: ದಕ್ಷಿಣ ಗೋವಾದ ಪ್ರಸಿದ್ಧ ದೂಧ್​ ಸಾಗರ್​ ಜಲಪಾತದಲ್ಲಿ ಶುಕ್ರವಾರ ಸುರಿದ ಭಾರಿ ಮಳೆಗೆ ಕೇಬಲ್ ಸೇತುವೆ ಕುಸಿದು ಬಿದ್ದಿದ್ದು, 40ಕ್ಕೂ ಹೆಚ್ಚು ಪ್ರವಾಸಿಗರನ್ನ ರಕ್ಷಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಶುಕ್ರವಾರ ಸಂಜೆ ಘಟನೆ ನಡೆದಿದ್ದು, ಗೋವಾ - ಕರ್ನಾಟಕ ಗಡಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಲಪಾತದ ನೀರಿನ ಮಟ್ಟ ಏರಿಕೆಯಾಗಿದೆ. ಪರಿಣಾಮ ಸೇತುವೆ ಕುಸಿದಿದ್ದು, 40ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಅಪಾಯದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆದರೆ, 'ದೃಷ್ಟಿ ಲೈಫ್ ಸೇವರ್ಸ್' ಸಹಾಯದಿಂದ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ದೃಷ್ಟಿ ಲೈಫ್‌ ಸೇವರ್ಸ್‌ನ ಪಿಆರ್​ಒ ಮಾಹಿತಿ ನೀಡಿದೆ.

ಇದನ್ನೂ ಓದಿ: ಮೈದುಂಬಿದ ಹೊಗೆನಕಲ್ ಜಲಪಾತ - ಪ್ರವಾಸಿಗರಿಗೆ ನಿರ್ಬಂಧ

ಭಾರಿ ಮಳೆ ಮತ್ತು ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ಮುಂದಿನ ಕೆಲ ದಿನಗಳವರೆಗೆ ದೂಧ್​ ಸಾಗರ್​ ಜಲಪಾತಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.