ETV Bharat / bharat

ಕೊರೊನಾ ಮರೆತ ಭಕ್ತರು: ನಿನ್ನೆ ಗಂಗೆಯಲ್ಲಿ 'ಶಾಹಿ ಸ್ನಾನ' ಮಾಡಿದ್ದು ಬರೋಬ್ಬರಿ 35 ಲಕ್ಷ ಮಂದಿ!

author img

By

Published : Apr 13, 2021, 10:20 AM IST

ನಡೆದ ಉತ್ತರಾಖಂಡದ ಹರಿದ್ವಾರದ ಹರ್ ಕಿ ಪೌರಿಯ ಗಂಗಾ ನದಿಯಲ್ಲಿ ಸೋಮವಾರ ಒಂದೇ ದಿನ 35 ಲಕ್ಷ ಭಕ್ತರು ಎರಡನೇ 'ಶಾಹಿ ಸ್ನಾನ' ಮಾಡಿದ್ದು, ಕೋವಿಡ್​ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

Over 35 lakhs take dip in Ganga on shahi snan amid rising coronavirus cases
ಶಾಹಿ ಸ್ನಾನ

ಹರಿದ್ವಾರ (ಉತ್ತರಾಖಂಡ): ಕೋವಿಡ್​ ಸಾಂಕ್ರಾಮಿಕ ಉಲ್ಬಣಗೊಂಡಿರುವ ಈ ಸಂದರ್ಭದಲ್ಲಿ ಕುಂಭಮೇಳ ನಡೆಯುತ್ತಿದೆ. ನಿನ್ನೆ ಹರಿದ್ವಾರದ ಹರ್ ಕಿ ಪೌರಿಯ ಗಂಗಾ ನದಿಯಲ್ಲಿ ಒಟ್ಟು 35 ಲಕ್ಷ ಭಕ್ತರು ಎರಡನೇ 'ಶಾಹಿ ಸ್ನಾನ' ಮಾಡಿದ್ದಾರೆ.

ಮಹಾಶಿವರಾತ್ರಿಯ ಪ್ರಯುಕ್ತ ಮಾರ್ಚ್ 11 ರಂದು ಮೊದಲ ಶಾಹಿ ಸ್ನಾನ ನಡೆದಿದ್ದು, ಎರಡನೆಯದು ಸೋಮವಾರ ಜರುಗಿತು. ನಿನ್ನೆ ಒಂದೇ ದಿನ 35 ಲಕ್ಷ ಭಕ್ತರು ಪವಿತ್ರ ಸ್ನಾನ ಮಾಡಿರುವುದಾಗಿ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಮಾಹಿತಿ ನೀಡಿದರು.

ಗಂಗಾ ನದಿಯಲ್ಲಿ ಶಾಹಿ ಸ್ನಾನ

ಮಹಾದೇವ ಶಿವ ಗಂಗೆಯನ್ನ ಧರೆಗೆ ಇಳಿಸಿದ್ದ. ಹೀಗಾಗಿ ಗಂಗಾ ಸ್ನಾನ ಮಾಡುವುದು ತುಂಬಾ ಪವಿತ್ರ. ಗಂಗೆಯಲ್ಲಿ ಮಿಂದೆದ್ದರೆ ಎಲ್ಲಾ ಪಾಪಗಳಿಂದಲೂ ಮುಕ್ತಿ ಸಿಗುತ್ತದೆ ಎಂದು ಭಕ್ತರು ನಂಬಿದ್ದಾರೆ. ಹೀಗಾಗಿ ಕುಂಭಮೇಳ, ಶಿವರಾತ್ರಿ ಸಂದರ್ಭದಲ್ಲಿ ಜನರು ಗಂಗಾ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

ಇದನ್ನೂ ಓದಿ: ಕೊರೊನಾ ಆರ್ಭಟ: ಗಂಟುಮೂಟೆ ಕಟ್ಟಿಕೊಂಡು ಮತ್ತೆ ತವರಿನತ್ತ ವಲಸೆ ಕಾರ್ಮಿಕರು

ಏಪ್ರಿಲ್ 14ರಂದು ಮೂರನೇ ಹಾಗೂ ಏಪ್ರಿಲ್ 27ರಂದು ಕುಂಭಮೇಳದ ನಾಲ್ಕನೇ ಶಾಹಿ ಸ್ನಾನ ನಡೆಯಲಿದೆ. ಮೊದಲು ಸಾರ್ವಜನಿಕರಿಗೆ ಸ್ನಾನ ಮಾಡಲು ಅವಕಾಶ ನೀಡಲಾಗುವುದು. ಬಳಿಕ 13 ಅಖಾಡಗಳ ಸಾಧು-ಸಂತರು ಮಿಂದೇಳುತ್ತಾರೆ.

ಕೊರೊನಾ ಕೇಸ್​ಗಳ ಸಂಖ್ಯೆ ಹೆಚ್ಚುತ್ತಿರುವ ಈ ವೇಳೆಯಲ್ಲಿ ಭಕ್ತರು ಸಾಮಾಜಿಕ ಅಂತರ ಮರೆತು ಕುಂಭಮೇಳ ಆಚರಿಸುತ್ತಿದ್ದಾರೆ. ಕುಂಭಮೇಳ ನಡೆದ ಪ್ರದೇಶದಲ್ಲಿ ಸೋಮವಾರ 9,678 ಮಂದಿಗೆ ಕೊರೊನಾ ಟೆಸ್ಟ್​ ಮಾಡಲಾಗಿದ್ದು, ಇವರಲ್ಲಿ 26 ಜನರ ವರದಿ ಪಾಸಿಟಿವ್​ ಬಂದಿದೆ. ಕಳೆದ 24 ಗಂಟೆಗಳಲ್ಲಿ ಹರಿದ್ವಾರದಲ್ಲಿ 408 ಮಂದಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.