ETV Bharat / bharat

9 ವರ್ಷದಲ್ಲಿ 24 ಕೋಟಿಗೂ ಹೆಚ್ಚು ಜನ ಬಡತನದಿಂದ ಹೊರಕ್ಕೆ: ನೀತಿ ಆಯೋಗ - ನೀತಿ ಆಯೋಗದ ವರದಿ

ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದಲ್ಲಿ ಬಹು ಆಯಾಮದ ಬಡತನದಿಂದ 24.8 ಕೋಟಿ ಜನರು ಹೊರಬಂದಿದ್ದಾರೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ.

NITI report  NITI Aayog  ಬಹು ಆಯಾಮದ ಬಡತನ  ನೀತಿ ಆಯೋಗದ ವರದಿ  ನೀತಿ ಆಯೋಗ
9 ವರ್ಷಗಳಲ್ಲಿ ಭಾರತದಲ್ಲಿ ಬಹು ಆಯಾಮದ ಬಡತನದಿಂದ ಹೊರಬಂದ 24.8 ಕೋಟಿ ಜನ: ನೀತಿ ಆಯೋಗದ ವರದಿ
author img

By PTI

Published : Jan 16, 2024, 8:20 AM IST

Updated : Jan 16, 2024, 8:58 AM IST

ನವದೆಹಲಿ: 2013-14ರಿಂದ 2022-23ರವರೆಗಿನ ಒಂಬತ್ತು ವರ್ಷಗಳಲ್ಲಿ 24.82 ಕೋಟಿ ಜನರು ಬಹುಆಯಾಮದ ಬಡತನದಿಂದ ಹೊರಬಂದಿದ್ದಾರೆ. ಬಡತನದಿಂದ ಹೊರಬಂದಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ ಮುಂಚೂಣಿಯಲ್ಲಿವೆ ಎಂದು ನೀತಿ ಆಯೋಗ ವರದಿ ಹೇಳುತ್ತದೆ.

ಬಹುಆಯಾಮದ ಬಡತನ ಎಂದರೇನು?: ಬಹುಆಯಾಮದ ಬಡತನವನ್ನು ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟ ಸುಧಾರಣೆಯಿಂದ ಅಳೆಯಲಾಗುತ್ತದೆ. ನೀತಿ ಆಯೋಗದ ವರದಿಯನುಸಾರ, ದೇಶದಲ್ಲಿ ಬಹುಆಯಾಮದ ಬಡತನವು 2013-14ರಲ್ಲಿ ಶೇಕಡಾ 29.17ರಿಂದ 2022-23ರಲ್ಲಿ ಶೇ.11.28ಕ್ಕೆ ಇಳಿದಿದೆ. ಬಹುಆಯಾಮದ ಬಡತನವು 12 ಸುಸ್ಥಿರ ಅಭಿವೃದ್ಧಿ ಗುರಿಗಳು ಒಳಗೊಂಡಿರುವ ಸೂಚಕಗಳನ್ನು ಪ್ರತಿನಿಧಿಸುತ್ತವೆ. ಇವುಗಳಲ್ಲಿ ಪೌಷ್ಟಿಕತೆ, ಮಕ್ಕಳು ಮತ್ತು ಹದಿಹರೆಯದವರ ಮರಣ, ತಾಯಿಯ ಆರೋಗ್ಯ, ಶಾಲಾ ಶಿಕ್ಷಣ, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ, ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳು ಸೇರಿವೆ.

ರಾಜ್ಯ ಮಟ್ಟದಲ್ಲಿ ಉತ್ತರ ಪ್ರದೇಶ ಪ್ರಥಮ ಸ್ಥಾನದಲ್ಲಿದ್ದು, ಇಲ್ಲಿ 5.94 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಬಿಹಾರ ದ್ವಿತೀಯ ಸ್ಥಾನದಲ್ಲಿ (3.77 ಕೋಟಿ) ಮತ್ತು ನಂತರದ ಶ್ರೇಯಾಂಕದಲ್ಲಿ ಮಧ್ಯಪ್ರದೇಶ ರಾಜ್ಯ (2.30 ಕೋಟಿ) ಇದೆ.

"ಕಳೆದ 9 ವರ್ಷಗಳಲ್ಲಿ ವಾರ್ಷಿಕವಾಗಿ 2.75 ಕೋಟಿ ಜನರು ಬಡತನದಿಂದ ಪಾರಾಗಿದ್ದಾರೆ. ಸರ್ಕಾರ ಬಹುಆಯಾಮಗಳ ಬಡತನವನ್ನು ಶೇ.1ಕ್ಕಿಂತ ಕೆಳತರುವ ಗುರಿ ಇಟ್ಟುಕೊಂಡಿದೆ. ಅದಕ್ಕಾಗಿ ಸರ್ವ ಪ್ರಯತ್ನಗಳನ್ನೂ ಕೈಗೊಂಡಿದೆ" ಎಂದು ನೀತಿ ಆಯೋಗದ ಸದಸ್ಯ ರಮೇಶ ಚಂದ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಕೆವೈಸಿ ಅಪೂರ್ಣವಾಗಿರುವ FASTagಗಳು ಜನವರಿ 31ರ ನಂತರ ನಿಷ್ಕ್ರಿಯ

Last Updated : Jan 16, 2024, 8:58 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.