ನವದೆಹಲಿ : ಈವರೆಗೆ ದೇಶದಲ್ಲಿ 18ರಿಂದ 44 ವರ್ಷದೊಳಗಿನ 11.8 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 30 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ 11,80,798 ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ.
ಇಲಾಖೆ ದತ್ತಾಂಶದ ಪ್ರಕಾರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಸಾಂಕೇತಿಕವಾಗಿ ನೀಡಲಾದ ಲಸಿಕೆ ಪ್ರಮಾಣ
ಅಂಡಮಾನ ನಿಕೋಬರ್- 330
ಆಂಧ್ರಪ್ರದೇಶ-16
ಅಸ್ಸೋಂ- 220
ಬಿಹಾರ್ -284
ಛತ್ತೀಸ್ಗಢ -1,026
ದೆಹಲಿ -1,83,679
ಗೋವಾ -741
ಗುಜರಾತ್ -2,24,109
ಹರಿಯಾಣ- 1,69,409
ಹಿಮಾಚಲ ಪ್ರದೇಶ- 14
ಜಮ್ಮು ಮತ್ತು ಕಾಶ್ಮೀರ- 21,249
ಜಾರ್ಖಂಡ್ -77
ಕರ್ನಾಟಕ -7,068
ಕೇರಳ- 22
ಲಡಾಖ್ -86
ಮಧ್ಯಪ್ರದೇಶ- 9,823
ಮಹಾರಾಷ್ಟ್ರ -2,15,274
ಮೇಘಾಲಯ-2
ನಾಗಾಲ್ಯಾಂಡ್ -2
ಒಡಿಶಾ- 28,327
ಪುದುಚೆರಿ -1
ಪಂಜಾಬ್- 2,187
ರಾಜಸ್ಥಾನ್- 2,18,795
ತಮಿಳು ನಾಡು -8,419
ತೆಲಂಗಾಣ-440
ತ್ರಿಪುರ- 2
ಉತ್ತರ ಪ್ರದೇಶ -86,420
ಉತ್ತರಾಖಂಡ್- 17
ಪಶ್ಚಿಮ ಬಂಗಾಳ -2,757
ಇಂದಿನವರೆಗೆ ಸುಮಾರು 16,49,73,058 ಲಸಿಕೆಯನ್ನ 24,11,300 ಸೆಷನ್ಸ್ ಮೂಲಕ ದೇಶದಾದ್ಯಂತ ರವಾನಿಸಲಾಗಿದೆ. ಇದರಲ್ಲಿ 10,60,064 ಮಂದಿ ಮೊದಲ ಹಂತದ ಲಸಿಕಾ ಅಭಿಯಾನದಲ್ಲಿ ಮೊದಲ ಡೋಸ್ ಪಡೆದಿದ್ದರೆ, 13,10,234 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.
ದೇಶದ ಇಲ್ಲಿಯವರೆಗೆ ನೀಡಲಾದ ಲಸಿಕೆಯ ಒಟ್ಟು ಪ್ರಮಾಣದಲ್ಲಿ ಶೇಕಡಾ 66.84ರಷ್ಟು ಭಾಗ 10 ರಾಜ್ಯಗಳಲ್ಲಿ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 3,31,507 ಮಂದಿ ಕೋವಿಡ್ನಿಂದ ಚೇತರಿಸಿಕೊಂಡಿದ್ದು, ಭಾರತದ ಚೇತರಿಕೆ ಒಟ್ಟು ಸಂಖ್ಯೆ 1,76,12,351ಕ್ಕೆ ಏರಿಕೆಯಾಗಿದೆ ಎಂದಿದೆ.