ಜೈಪುರ್(ರಾಜಸ್ಥಾನ): ರಾಜಸ್ಥಾನದ ಭಾರತ್ ಜೋಡೋ ಯಾತ್ರೆಯ ಮೇಲೆ ಕಾಂಗ್ರೆಸ್ ಪಕ್ಷದ ಒಳಗಿನ ಆಂತರಿಕ ಕಲಹಗಳು ಪರಿಣಾಮ ಬೀರಬಹುದು ಎಂಬ ಅಪಪ್ರಚಾರವನ್ನು ಕಾಂಗ್ರೆಸ್ ಹಿರಿಯ ನಾಯಕ ಸಚಿನ್ ಪೈಲಟ್ ತಳ್ಳಿಹಾಕಿದ್ದಾರೆ. ಪಕ್ಷದ ರಾಜ್ಯ ಘಟಕವು "ಸಂಪೂರ್ಣವಾಗಿ ಒಗ್ಗಟ್ಟಾಗಿದೆ" ಮತ್ತು ಯಾತ್ರೆಯು ಇತರ ರಾಜ್ಯಗಳಿಗಿಂತ ಹೆಚ್ಚು ಯಶಸ್ವಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ಹಾಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಕುರಿತು ಮಾತನಾಡಿದ ಅವರು, ಬಿಜೆಪಿ ಮುಖ್ಯಮಂತ್ರಿ ಸ್ಥಾನಕ್ಕೆ ಡಜನ್ಗಟ್ಟಲೇ ಅಭ್ಯರ್ಥಿಗಳನ್ನು ಹೊಂದಿದ್ದು, ಅವರೊಳಗೇ ಸಾಕಷ್ಟು ಭಿನ್ನಭಿಪ್ರಾಯಗಳಿವೆ ಎಂದು ಟೀಕಿಸಿದರು.
ರಾಜಸ್ಥಾನದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಗೆ ಸರಿಯಾದ ಪ್ರತಿಪಕ್ಷವಾಗಿ ಕೆಲಸ ಮಾಡಲು ಸಹ ಸಾಧ್ಯವಾಗಲಿಲ್ಲ ಎಂದ ಅವರು ಅಶೋಕ್ ಗೆಹ್ಲೋಟ್ ತಮ್ಮ ಮೇಲೆ ಮಾಡಿರುವ ವಾಗ್ದಾಳಿ ರಾಜಸ್ಥಾನದಲ್ಲಿ ಯಾತ್ರೆಯ ಭವಿಷ್ಯದ ಬಗ್ಗೆ ಆತಂಕ ಮೂಡಿತ್ತು ಎಂದಾಗ, ಅದೆಲ್ಲ ಮಾಧ್ಯಮದಲ್ಲಿ ಮಾಡಲಾದ ಕಟ್ಟು ಕಥೆಗಳು ಎಂದು ಆ ಆರೋಪವನ್ನು ಪೈಲಟ್ ತಳ್ಳಿ ಹಾಕಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದಂತೆ, ಪಕ್ಷದಲ್ಲಿ ಸಂಪೂರ್ಣ ಒಮ್ಮತವಿದೆ ಮತ್ತು ಅದನ್ನು ಯಶಸ್ವಿಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ ಎ, ಬಿ ಅಥವಾ ಸಿ ವ್ಯಕ್ತಿಗಳ ಪ್ರಶ್ನೆಯೇ ಇಲ್ಲ. ಪಕ್ಷವಾಗಿ ನಾವು ಸರ್ಕಾರ ರಚಿಸಲು ಶ್ರಮಿಸಿದ್ದೇವೆ ಮತ್ತು ರಾಹುಲ್ ಜಿ ಅವರ ಯಾತ್ರೆಯು 12 ತಿಂಗಳ ಅವಧಿಯಲ್ಲಿ ಮುಂದಿನ ಚುನಾವಣೆಗೆ ಗೆಲ್ಲುವ ಪ್ರಯತ್ನಗಳನ್ನು ಹೆಚ್ಚಿಸುತ್ತಿದೆ ಎಂದು ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಹೇಳಿದರು.
ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಹಾಗೆ ಪ್ರತಿ ಐದು ವರ್ಷಗಳಿಗೊಮ್ಮೆ ರಾಜಸ್ಥಾನದಲ್ಲಿ ಸರ್ಕಾರ ಬದಲಾಗಲಿದೆ. 2013 ರಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವು 200 ರಲ್ಲಿ 21 ಸ್ಥಾನಗಳಿಗೆ ಇಳಿಯಿತು ಮತ್ತು ಆ ಹಂತದಿಂದ ಪಕ್ಷವು ಶ್ರಮಿಸಿ ಗೆದ್ದಿತು. ಇದೇ ತರ ನಾವು ಸಾಮೂಹಿಕವಾಗಿ ಕೆಲಸ ಮಾಡಿದರೆ ಮತ್ತು ಸರ್ಕಾರ ಮತ್ತು ಸಂಘಟನೆಯಿಂದ ನಾವು ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸಿದರೆ, ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ:ಇಂದು ಸಂಜೆ ರಾಜಸ್ಥಾನ ಪ್ರವೇಶಿಸಲಿರುವ ಭಾರತ್ ಜೋಡೋ ಯಾತ್ರೆ