ಲಾಸ್ ಎಂಜಲಿಸ್ (ಯುಎಸ್‌ಎ): ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿಂದು ನಡೆದ 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ 'ಆರ್‌ಆರ್‌ಆರ್' ತೆಲುಗು ಸಿನಿಮಾದ ಜನಪ್ರಿಯ 'ನಾಟು ನಾಟು' ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿತು. ಈ ಮೂಲಕ ಎರಡು ದಶಕಗಳ ಬಳಿಕ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡು 'ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಆಸ್ಕರ್ ಪಡೆದ ಮೊದಲ ಭಾರತೀಯ ಗೀತೆಯಾಗಿ ಹೊರಹೊಮ್ಮಿದೆ.
ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಗೀತೆ, ವಿಶ್ವಮಟ್ಟದಲ್ಲೇ ಪ್ರಖ್ಯಾತಿ ಗಳಿಸಿದೆ. ಜಾಗತಿಕ ಗುಣಮಟ್ಟದ ಇಂಗ್ಲಿಷ್ ಹಾಡುಗಳನ್ನೂ ಹಿಂದಿಕ್ಕಿ ನಾಟು ನಾಟು ಪ್ರತಿಷ್ಟಿತ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ. ಕಾರ್ಯಕ್ರಮದಲ್ಲಿ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್ ಪ್ರಶಸ್ತಿ ಪಡೆದುಕೊಂಡರು.
-
'Naatu Naatu' from 'RRR' wins the Oscar for Best Original Song! #Oscars #Oscars95 pic.twitter.com/tLDCh6zwmn
— The Academy (@TheAcademy) March 13, 2023 " class="align-text-top noRightClick twitterSection" data="
">'Naatu Naatu' from 'RRR' wins the Oscar for Best Original Song! #Oscars #Oscars95 pic.twitter.com/tLDCh6zwmn
— The Academy (@TheAcademy) March 13, 2023'Naatu Naatu' from 'RRR' wins the Oscar for Best Original Song! #Oscars #Oscars95 pic.twitter.com/tLDCh6zwmn
— The Academy (@TheAcademy) March 13, 2023
ಪ್ರಶಸ್ತಿಗೆ ರೇಸ್‌ನಲ್ಲಿದ್ದ ಗೀತೆಗಳು: ಈ ವರ್ಷದ ಅಕಾಡೆಮಿ ಪ್ರಶಸ್ತಿಗೆ ಭಾರತದ 'ನಾಟು ನಾಟು' ಹಾಡು ಮತ್ತು ಲಿಫ್ಟ್ ಮಿ ಅಪ್ , ದಿಸ್ ಈಸ್ ಲೈಫ್, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಹಾಡುಗಳು ನಾಮನಿರ್ದೇಶನಗೊಂಡಿದ್ದವು. ಆದ್ರೆ, ಎಲ್ಲವನ್ನೂ ಹಿಂದಿಕ್ಕಿ ಆರ್‌ಆರ್‌ಆರ್ ಸಿನಿಮಾದ ಹಾಡು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಇದನ್ನೂ ಓದಿ: 95ನೇ ಆಸ್ಕರ್ ಪ್ರಶಸ್ತಿ: ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ..
ಉಕ್ರೇನ್‌ನಲ್ಲಿ RRR ಚಿತ್ರೀಕರಣ: ಹಿರಿಯ ಸಂಗೀತ ನಿರ್ದೇಶಕ ಕೀರವಾಣಿ ಸಂಯೋಜನೆಯಲ್ಲಿ ಮೂಡಿಬಂದ 'ನಾಟು ನಾಟು' ಹಾಡಿಗೆ ತೆಲುಗು ನಟ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿಗಾಗಿ ಉಕ್ರೇನ್‌ನಲ್ಲಿ 20 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು. ಫೈನಲ್ ಕಟ್ ಅನ್ನು ಅನುಮೋದಿಸುವ ಮೊದಲು 43 ರಿ ಟೇಕ್‌ಗಳನ್ನು ತೆಗೆದುಕೊಳ್ಳಲಾಗಿತ್ತಂತೆ. ಸಿಪ್ಲಿಗುಂಜ್ ಮತ್ತು ಭೈರವ ಗೀತೆಗೆ ಧ್ವನಿಯಾಗಿದ್ದರು. ಪ್ರೇಮ್ ರಕ್ಷಿತ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಹಿಂದಿಯಲ್ಲಿ 'ನಾಚೋ ನಾಚೋ', ತಮಿಳಿನಲ್ಲಿ 'ನಾಟ್ಟು ಕೂತು', ಕನ್ನಡದಲ್ಲಿ 'ಹಳ್ಳಿ ನಾಟು' ಮತ್ತು ಮಲಯಾಳಂನಲ್ಲಿ 'ಕಾರಿಂತೋಲ್' ಎಂಬ ಹೆಸರಿನಲ್ಲಿ ಹಾಡು ಬಿಡುಗಡೆಯಾಗಿತ್ತು.
ಇದನ್ನೂ ಓದಿ: 'ದ ಎಲಿಫೆಂಟ್ ವಿಸ್ಪರರ್ಸ್' ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ: ಒಲಿದು ಬಂತು ಆಸ್ಕರ್ ಪ್ರಶಸ್ತಿ!
ನಾಟು ನಾಟು ಹಾಡಿಗೆ ಹಲವು ಪ್ರಶಸ್ತಿ: ಈ ಹಾಡಿಗೆ ಈಗಾಗಲೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್, ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ ಅವಾರ್ಡ್ಸ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇದೀಗ ಆಸ್ಕರ್ ಅವಾರ್ಡ್ ಕೂಡ ದಕ್ಕಿದ್ದು, ಚಿತ್ರತಂಡಕ್ಕೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಚಿತ್ರತಂಡದ ಪ್ರತಿಕ್ರಿಯೆ..: ಆಸ್ಕರ್ ಪ್ರಶಸ್ತಿ ಪಡೆದುಕೊಂಡ RRR ತಂಡ ಸಂತಸದಲ್ಲಿ ಮುಳುಗಿದೆ. ಈ ಹಾಡಿಗೆ ಪ್ರಶಸ್ತಿ ಬರುತ್ತದೆ ಎಂದು ಎಲ್ಲರೂ ಹೇಳಿದ್ದರು, ಅಂತೆಯೇ ಪ್ರಶಸ್ತಿ ಸಿಕ್ಕಿದೆ. ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ. ನಟ ರಾಮ್ ಚರಣ್ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.