ETV Bharat / bharat

ಅಗತ್ಯ ವಸ್ತುಗಳ ಜಿಎಸ್​​ಟಿ ಏರಿಕೆ: ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ, ಸರ್ಕಾರದ ವಿರುದ್ಧ ಘೋಷಣೆ

ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರ್ಧಾರ ಹಿಂಪಡೆದುಕೊಳ್ಳುವಂತೆ ಒತ್ತಾಯ ಮಾಡಿವೆ.

author img

By

Published : Jul 20, 2022, 4:38 PM IST

Opposition parties protest against GST hike

ನವದೆಹಲಿ: ಅಗತ್ಯ ವಸ್ತುಗಳ ಜಿಎಸ್​ಟಿ ಏರಿಕೆ ಹಾಗೂ ಹಣದುಬ್ಬರ ವಿರೋಧಿಸಿ ಪ್ರತಿಪಕ್ಷದ ಸಂಸದರು ಸಂಸತ್​​ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದು, ಬೆಲೆ ಏರಿಕೆ ಹಿಂಪಡೆದುಕೊಳ್ಳುವಂತೆ ಒತ್ತಾಯಿಸಿದರು. ಕಾಂಗ್ರೆಸ್ ಹಿರಿಯ ಮುಖಂಡ ರಾಹುಲ್​ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಇದರಲ್ಲಿ ಟಿಆರ್​​ಎಸ್​​, ಎನ್​​​ಸಿಪಿ, ಡಿಎಂಕೆ ಮತ್ತು ಇತರೆ ಎಡಪಕ್ಷಗಳ ಮುಖಂಡರು ಭಾಗಿಯಾಗಿದ್ದರು.

ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗ್ತಿದ್ದು, ಇದರಿಂದ ಜನಸಾಮಾನ್ಯರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದೇಶದ ಜನರು ಜೀವನ ನಡೆಸಲು ಕಷ್ಟಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಗತ್ಯ ವಸ್ತುಗಳಾದ ಮೊಸರು, ಬ್ರೆಡ್​, ಪನ್ನೀರ್​​ನಂತಹ ಉತ್ಪನ್ನಗಳ ಜಿಎಸ್​ಟಿ ಏರಿಕೆ ಮಾಡಿರುವುದು ಸರಿಯಲ್ಲ. ತಕ್ಷಣವೇ ಬೆಲೆ ಏರಿಕೆ ನಿರ್ಧಾರ ಹಿಂಪಡೆದುಕೊಳ್ಳುವಂತೆ ಆಗ್ರಹಿಸಿದರು.

ಸಂಸತ್​ ಆವರಣದ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿರಿ: ಆಹಾರ ಧಾನ್ಯಗಳ ಮೇಲಿನ ಜಿಎಸ್​ಟಿ, ಬೆಲೆ ಏರಿಕೆಗೆ ಖಂಡನೆ.. ರಸ್ತೆ ಮೇಲೆ ರೊಟ್ಟಿ ಮಾಡಿ ಪ್ರತಿಭಟನೆ

ಶೋಲೆ ಚಿತ್ರದ ಬ್ಯಾನರ್​ ಹಿಡಿದು ಆಕ್ರೋಶ: ಪ್ರತಿಭಟನಾನಿರತ ವಿರೋಧ ಪಕ್ಷಗಳ ಸಂಸದರು ಕೈಯಲ್ಲಿ ಗಬ್ಬರ್​ ಸಿಂಗ್​​ ಚಿತ್ರದ ಬ್ಯಾನರ್ ಹಾಗೂ ಫಲಕ ಕೈಯಲ್ಲಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಶೋಲೆ ಚಿತ್ರದಲ್ಲಿ ಖಳನಾಯಕ ಗಬ್ಬರ್​​ ಸಿಂಗ್​​ ಗ್ರಾಮಸ್ಥರಿಂದ ಅಕ್ರಮವಾಗಿ ತೆರಿಗೆ ಸಂಗ್ರಹಿಸಿದ್ದನ್ನ ಇಲ್ಲಿ ಉಲ್ಲೇಖ ಮಾಡಲಾಗಿತ್ತು. ಇದರ ಜೊತೆಗೆ ಜಿಎಸ್​​ಟಿಯನ್ನ ಗಬ್ಬರ್​​ ಸಿಂಗ್​ ಟ್ಯಾಕ್ಸ್​ ಎಂದು ಬಣ್ಣಿಸಿವೆ.

  • भयंकर महंगाई के बीच गृहस्थी को चाहिए थी संजीवनी। भाजपा सरकार ने आटा, अनाज, मुरी, गुड़, दही पर गृहस्थी सत्यानाश टैक्स (GST) टैक्स लगाकर महंगाई का बोझ और बढ़ा दिया।@narendramodi जी खर्चा बढ़ा रहे हैं और संसद में चर्चा से कतरा रहे हैं।

    क्या महंगाई पर चर्चा करना "असंसदीय" है? pic.twitter.com/jmrhPORVlp

    — Priyanka Gandhi Vadra (@priyankagandhi) July 20, 2022 " class="align-text-top noRightClick twitterSection" data=" ">

ಪ್ರಿಯಾಂಕಾ ಗಾಂಧಿ ಟ್ವೀಟ್​: ಬೆಲೆ ಏರಿಕೆ ವಿಚಾರವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದು, ಹಣದುಬ್ಬರ ಮತ್ತು ದುಬಾರಿ ಗೃಹಪಯೋಗಿ ವೆಚ್ಚಕ್ಕೆ ಸಂಜೀವಿನಿ ಬೇಕಾಗಿದೆ. ಹಿಟ್ಟು, ಧಾನ್ಯ, ಬೆಲ್ಲ, ಮೊಸರು, ಮಜ್ಜಿಗೆ ಮೇಲಿನ ತೆರಿಗೆ ಏರಿಕೆ ಜನಸಾಮಾನ್ಯರಿಗೆ ದೊಡ್ಡ ಪೆಟ್ಟು ಎಂದಿದ್ದಾರೆ. ಇದರ ಜೊತೆಗೆ ಸಂಸತ್​​​ ಹೊರಗಡೆ ಪ್ರತಿಪಕ್ಷಗಳ ಮುಖಂಡರು ಪ್ರತಿಭಟನೆ ನಡೆಸುತ್ತಿರುವ ಫೋಟೋ ಶೇರ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.