ETV Bharat / bharat

ಎಲ್​ಎಸಿಯಲ್ಲಿ ಗಲಾಟೆ - ಚರ್ಚೆಗೆ ಅಡ್ಡಿ: ರಾಜ್ಯಸಭೆ ಕಲಾಪ ಬಹಿಷ್ಕರಿಸಿದ ಪ್ರತಿಪಕ್ಷಗಳು - ಮಲ್ಲಿಕಾರ್ಜುನ ಖರ್ಗೆ ನೇತೃತ್ವ

ಸಂಸತ್ತಿನ ಚಳಿಗಾಲದ ಅಧಿವೇಶನದ ರಾಜ್ಯಸಭೆ ಬುಧವಾರ ಕಲಾಪವನ್ನೂ ಆಡಳಿತ ಸದಸ್ಯರು ಚರ್ಚೆಗೆ ಅಡ್ಡಿಪಡಿಸಿದ ಹಿನ್ನೆಲೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ 17 ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದವು.

Parliament House
ಸಂಸತ್ ಭವನ
author img

By

Published : Dec 14, 2022, 2:03 PM IST

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ರಾಜ್ಯಸಭೆ ಕಲಾಪ ತಿರಸ್ಕರಿಸಿ ಬಧವಾರವೂ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ 17 ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದವು. ಡಿಸೆಂಬರ್ 9ರಂದು ಭಾರತ ಮತ್ತು ಚೀನಾದ ಸೈನಿಕರ ನಡುವೆ ತವಾಂಗ್ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆ ಮುಖಾಮುಖಿಯಾಗುವ ಕುರಿತು ಚರ್ಚೆಗೆ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಆಡಳಿತ ಪಕ್ಷದ ಸದಸ್ಯರು ವಿರೋಧ ಮಾಡುತ್ತಿದ್ದಂತೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹಿತ 17 ಪ್ರತಿಪಕ್ಷಗಳ ನಾಯಕರು ಹೊರನಡೆದರು. ಸಂಸತ್ತಿನ ದಿನದ ಕಲಾಪ ಆರಂಭಕ್ಕೂ ಮುನ್ನ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 17 ಪ್ರತಿಪಕ್ಷಗಳ ನಾಯಕರ ಜತೆ ಚರ್ಚೆಗೆ ಬುಧವಾರ ಸಭೆ ನಡೆಸಿದ್ದರು.

ಹಿಂದಿನ ದಿನ ಮಂಗಳವಾರ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತವಾಂಗ್ ಘರ್ಷಣೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ ನಂತರ ಅದರ ಕುರಿತು ಬುಧವಾರ ಚರ್ಚೆಗೆ ಅವಕಾಶ ನೀಡದಿದ್ದಲ್ಲಿ ಸದನ ಬಹಿಷ್ಕರಿಸಲು ಪ್ರತಿಪಕ್ಷಗಳು ಸಭೆಯಲ್ಲಿ ನಿರ್ಧರಿಸಿದ್ದವು.

ಇದನ್ನೂಓದಿ:ಪೆನ್ನಾರ್​ ನದಿ ನೀರು ನ್ಯಾಯಾಧೀಕರಣ ರಚನೆಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ತಾಕೀತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.