ಮುಂಬೈ(ಮಹಾರಾಷ್ಟ್ರ): ಪ್ರೀತಿಯ ಹೆಸರಿನಲ್ಲಿ ಯುವತಿಯರನ್ನು ಪುಸಲಾಯಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವ ಲವ್ ಜಿಹಾದ್ ನಿಯಂತ್ರಿಸಲು ಮಹಾರಾಷ್ಟ್ರ ಸರ್ಕಾರ ಕಾನೂನು ರೂಪಿಸಲು ಮುಂದಾಗಿದೆ. ಇದಕ್ಕೆ ಮುಸ್ಲಿಂ ಸಮುದಾಯ ವಿರೋಧ ವ್ಯಕ್ತಪಡಿಸಿದೆ. ಜಿಹಾದ್ ಎಂಬುದು ಪವಿತ್ರ. ಅದನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ವಿವಿಧ ಪಕ್ಷಗಳ ಮುಸ್ಲಿಂ ನಾಯಕರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರು ಸಮುದಾಯದ ಮೇಲೆ ಕೆಟ್ಟ ಹೆಸರು ತರಲು ಲವ್ ಜಿಹಾದ್ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ. ಅದೊಂದು ಪವಿತ್ರವಾದ ಆಚರಣೆ. ಇದರ ಮೇಲೆ ನಿಷೇಧ ಹೇರಲು ತರಲಾಗುತ್ತಿರುವ ಕಾನೂನಿಗೆ ಆಧಾರವೇ ಇಲ್ಲ ಎಂದು ಸಮಾಜವಾದಿ ಪಕ್ಷದ ಶಾಸಕ ರಯೀಸ್ ಶೇಖ್ ಹೇಳಿದ್ದಾರೆ.
ಲವ್ ಜಿಹಾದ್ ಮಸೂದೆಯನ್ನು ಈ ಬಾರಿಯ ಅಧಿವೇಶನದಲ್ಲಿ ಮಂಡಿಸುವುದಾಗಿ ಸರ್ಕಾರ ಹೇಳುತ್ತಿದೆ. ಇದನ್ನು ಪಕ್ಷ ಮತ್ತು ಸಮುದಾಯ ವಿರೋಧಿಸುತ್ತದೆ. ಬಿಜೆಪಿ ವಾಸ್ತವ, ಆಧಾರರಹಿತವಾಗಿ ಕಾನೂನು ಮಾಡಲು ಮುಂದಾಗಿದೆ. ಸಮಾಜದಲ್ಲಿ ಅಂತಹ ಘಟನೆಗಳು ನಡೆದಲ್ಲಿ, ಧಾರ್ಮಿಕ ಮುಖಂಡರು ಕುಳಿತು ಚರ್ಚಿಸಿ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇಸ್ಲಾಂ ಮುಖಂಡ ಲುಕ್ಮಾನ್ ನದ್ವಿ ಮಾತನಾಡಿ, ಲವ್ ಜಿಹಾದ್ ಎಂಬುದು ಅಪಪ್ರಚಾರವಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಈಗಾಗಲೇ ಇದರ ವಿರುದ್ಧ ಕಾನೂನು ತರಲಾಗಿದೆ. ಇದೀಗ ಮಹಾರಾಷ್ಟ್ರದಲ್ಲೂ ಕಾನೂನು ತಂದು ಸಮಾಜದ ಶಾಂತಿಯನ್ನು ಹಾಳು ಮಾಡಲು ಶಿಂಧೆ ಸರ್ಕಾರ ಮುಂದಾಗಿದೆ. ಈ ಮೂಲಕ ಮುಸ್ಲಿಮರನ್ನು ಹೆದರಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಓದಿ: ಕಾಶ್ಮೀರದ ತುಬಲ್ ಪ್ರದೇಶದಲ್ಲಿ ಐಇಡಿ ಸ್ಫೋಟಕ ವಸ್ತು ಪತ್ತೆ: ಬಿಡಿಎಸ್ ಕಾರ್ಯಾಚರಣೆ