ನವದೆಹಲಿ: ಬಹುರಾಷ್ಟ್ರೀಯ ಕಂಪನಿಯೊಂದರ 'ವಂಚನೆ ವಿಭಾಗದ ಹಿರಿಯ ಕಾರ್ಯನಿರ್ವಹಣಾಧಿಕಾರಿ' ಎಂದು ನಟಿಸುವ ಮೂಲಕ ಅಮೆರಿಕ ಪ್ರಜೆಯೊಬ್ಬರಿಗೆ ವಂಚಿಸಿದ ಆರೋಪದ ಮೇಲೆ ಅಹಮದಾಬಾದ್ ಮೂಲದ ವ್ಯಕ್ತಿಯೊಬ್ಬನಿಂದ 930,000 ಡಾಲರ್ (ಸುಮಾರು 7.7 ಕೋಟಿ ರೂ.) ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಸ್ ಪ್ರಜೆಯೊಬ್ಬರಿಗೆ ವಂಚನೆ- ಆರೋಪಿ ಶೈಶವ್ ವಿರುದ್ಧ ಎಫ್‌ಐಆರ್: ಯುನೈಟೆಡ್ ಸ್ಟೇಟ್ಸ್‌ನ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಮಾಹಿತಿ ಆಧಾರದ ಮೇಲೆ ಸಿಬಿಐ ರಾಮವತ್ ಅವರು ಶೈಶವ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ''ನಾವು ಯುಎಸ್ ಪ್ರಜೆಯನ್ನು ಫೋನ್ ಮೂಲಕ ಸಂಪರ್ಕಿಸಿ ಮತ್ತು ಬಹುರಾಷ್ಟ್ರೀಯ ಕಂಪನಿಯೊಂದರ ವಂಚನೆ ವಿಭಾಗದಿಂದ "ಜೇಮ್ಸ್ ಕಾರ್ಲ್ಸನ್" ಎಂದು ಪರಿಚಯಿಸಿಕೊಂಡಿದ್ದರು'' ಎಂದು ಸಿಬಿಐ ರಾಮವತ್ ಶೈಶವ್ ತಿಳಿಸಿದ್ದಾರೆ.
ಸಿಬಿಐ ಅಧಿಕಾರಿಗಳ ಮಾಹಿತಿ: ತನಿಖೆ ವೇಳೆ, ಶೈಶವ್ ಅವರ ಇ-ವ್ಯಾಲೆಟ್‌ನಲ್ಲಿ 28 ಬಿಟ್‌ಕಾಯಿನ್, 55 ಎಥೆರಿಯಮ್, 25,572 ರಿಪ್ಪಲ್ ಮತ್ತು 77 ಯುಎಸ್‌ಡಿಟಿ ಕರೆನ್ಸಿ ಅನ್ನು ಸಿಬಿಐ ಪತ್ತೆ ಮಾಡಿದೆ. ಅವುಗಳನ್ನು ವಶಪಡಿಸಿಕೊಂಡು ಸರ್ಕಾರದ ವ್ಯಾಲೆಟ್‌ಗೆ ವರ್ಗಾಯಿಸಲಾಯಿತು. ವಂಚನೆಗೆ ಒಳಗಾಗಿರುವ ವ್ಯಕ್ತಿ ನಂಬಿಕೆಯನ್ನು ಗಳಿಸಲು, ಆರೋಪಿ ಶೈಶವ್ ಸೆಪ್ಟೆಂಬರ್ 20, 2022 ರಂದು ನಕಲಿ ಪತ್ರವನ್ನು ಇ-ಮೇಲ್ ಮಾಡಿದ್ದನು. ಇದನ್ನು ಯುಎಸ್ ಫೆಡರಲ್ ಟ್ರೇಡ್ ಕಮಿಷನ್ ನೀಡಿದೆ. ಯುಸ್ ಪ್ರಜೆಯ ಬ್ಯಾಂಕ್ ಖಾತೆಗಳಿಂದ ಆಗಸ್ಟ್ 30, 2022 ರಿಂದ ಸೆಪ್ಟೆಂಬರ್ 9, 2022ರ ಅವಧಿಯಲ್ಲಿ ವಿವಿಧ ದಿನಾಂಕಗಳಲ್ಲಿ 130,000 ಡಾಲರ್ ಹಣವನ್ನು ವಿತ್ಡ್ರಾ ಮಾಡಿಕೊಂಡಿದ್ದಾನೆ. ಆರೋಪಿ ಶೈಶವ್ ಬಿಟ್ಕಾಯಿನ್ನಲ್ಲಿ ಠೇವಣಿ ಮಾಡಿ, ಈ ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದನು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ಶೋಧ ಕಾರ್ಯ: ಅಹಮದಾಬಾದ್‌ನಲ್ಲಿರುವ ಆರೋಪಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಆರೋಪಿಯ ಕ್ರಿಪ್ಟೋ ವ್ಯಾಲೆಟ್‌ಗಳಿಂದ 939,000 (ಅಂದಾಜು) ಮೌಲ್ಯದ ಬಿಟ್‌ಕಾಯಿನ್, ಎಥೆರಿಯಮ್, ರಿಪ್ಪಲ್, ಯುಎಸ್‌ಡಿಟಿ ಇತ್ಯಾದಿ ಕ್ರಿಪ್ಟೋಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಂಚನೆ ಪ್ರಕರಣದಲ್ಲಿ ಅಹಮದಾಬಾದ್‌ನಲ್ಲಿ ನೆಲೆಸಿರುವ ಶೈಶವ್‌ನ ಇಬ್ಬರು ಸಹಚರರ ಪಾತ್ರವಿರುವುದು ಬೆಳಕಿಗೆ ಬಂದಿದೆ. ಸಿಬಿಐ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಸಹ ಶೋಧ ಕಾರ್ಯ ನಡೆಸಿದೆ. ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಡಿಜಿಟಲ್ ಸಾಧನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಆಧಾರ್, ವೋಟರ್ ಐಡಿ ನಕಲು ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ