ನವದೆಹಲಿ: ಸೆಪ್ಟೆಂಬರ್ 8 ರಿಂದ 10 ರವರೆಗೆ ಜಿ20 ಶೃಂಗಸಭೆಯ ನಡೆಯಲಿರುವ ಕಾರಣ ದೆಹಲಿಯಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ಮತ್ತು ಆನ್ಲೈನ್ ವಿತರಣಾ ಸೇವೆಗಳಿಗೆ ನಿಷೇಧ ಹೇರಲಾಗಿದೆ. ಈ ವೇಳೆ ದೆಹಲಿ ಪೊಲೀಸರು ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಮತ್ತು ರೈಲುಗಳು, ವಿಮಾನ ಪ್ರಮಾಣಿಕರಿಗೆ ಮಾತ್ರ ವಿನಾಯಿತಿ ನೀಡಲಿದ್ದಾರೆ. ಆದ್ದರಿಂದ, ಇತರ ಸಾರ್ವಜನಿಕರು ಮನೆಯಿಂದ ಹೊರ ಹೋಗದಿದ್ದರೆ ಉತ್ತಮ ಎಂದು ಪೊಲೀಸರು ತಿಳಿಸಿದ್ದಾರೆ.
-
#WATCH | Delhi: National capital gears up for the upcoming G20 summit, scheduled to be held from September 9 to 10.
— ANI (@ANI) September 4, 2023 " class="align-text-top noRightClick twitterSection" data="
(Visuals from Supreme Court Metro Station) pic.twitter.com/gt2A04A3LP
">#WATCH | Delhi: National capital gears up for the upcoming G20 summit, scheduled to be held from September 9 to 10.
— ANI (@ANI) September 4, 2023
(Visuals from Supreme Court Metro Station) pic.twitter.com/gt2A04A3LP#WATCH | Delhi: National capital gears up for the upcoming G20 summit, scheduled to be held from September 9 to 10.
— ANI (@ANI) September 4, 2023
(Visuals from Supreme Court Metro Station) pic.twitter.com/gt2A04A3LP
ಇನ್ನು ಆಗಸ್ಟ್ 25 ರಂದು ಹೊರಡಿಸಲಾದ ಸಂಚಾರ ಡೈರೆಕ್ಟರಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ನವದೆಹಲಿಯಲ್ಲಿ ಆಹಾರ ಮತ್ತು ಇತರ ವಸ್ತುಗಳ ವಿತರಣೆ ಸೇವೆಯನ್ನು ನಿಷೇಧಿಸಲಾಗುವುದು ಎಂದು ದೆಹಲಿಯ ಸಂಚಾರ ಪೊಲೀಸ್ ಘಟಕದ ವಿಶೇಷ ಆಯುಕ್ತ ಸುರೇಂದ್ರ ಯಾದವ್ ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದಾರೆ.
ಅಗತ್ಯ ಸೇವೆಗಳನ್ನು ಹೊರತುಪಡಿಸಿ, ದೆಹಲಿಯಲ್ಲಿ ವಾಣಿಜ್ಯ ವಾಹನಗಳನ್ನು ಅನುಮತಿಸಲಾಗುವುದಿಲ್ಲ. ಅಂತಾರಾಜ್ಯ ಬಸ್ಗಳು ಸರೈ ಕಾಲೆ ಖಾನ್, ಆನಂದ್ ವಿಹಾರ್, ಕಾಶ್ಮೀರಿ ಗೇಟ್ ಮತ್ತು ಇತರ ಡಿಪೋಗಳಿಂದ ಕಾರ್ಯನಿರ್ವಹಿಸಲಿವೆ. ಜನರು ಟಿಕೆಟ್ ತೋರಿಸುವ ಮೂಲಕ ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗುತ್ತದೆ. ಪ್ರಯಾಣಿಕರನ್ನು ಕರೆದೊಯ್ಯುವ ಟ್ಯಾಕ್ಸಿಗಳಿಗೂ ಯಾವುದೇ ನಿರ್ಬಂಧವಿರುವುದಿಲ್ಲ.
ಹೊರ ವರ್ತುಲ ರಸ್ತೆಯನ್ನು ಬಳಸಿಕೊಂಡು ದೆಹಲಿಯಲ್ಲಿ ಸಂಚರಿಸಬಹುದಾಗಿದೆ. ನವದೆಹಲಿಯ ನಿರ್ಬಂಧಿತ ಪ್ರದೇಶಕ್ಕೆ ಮಾತ್ರ ಪ್ರವೇಶವನ್ನು ನಿಷೇಧಿಸಲಾಗಿದೆ. ದೆಹಲಿಯಾದ್ಯಂತ ಶೃಂಗಸಭೆಯ ನಡೆಯಲಿರುವ ದಿನಗಳಂದು ಫುಡ್ ಡೆಲಿವರಿ ಸರ್ವಿಸ್ಗೆ ನಿಷೇಧವಿರುತ್ತದೆ. ವೈದ್ಯಕೀಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ದೆಹಲಿ ಸಂಚಾರ ಪೊಲೀಸ್ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಜನರು ಸಂಚಾರ ಮಾರ್ಗಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೋಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಇವುಗಳಿಗೆ ಇಲ್ಲ ಅನುಮತಿ: ಬೇರೆ ರಾಜ್ಯ ಅಥವಾ ಸ್ಥಳಗಳಿಗೆ ತೆರಳುವ ವಾಹನಗಳು ದೆಹಲಿ ಪ್ರವೇಶಿಸಲು ಅನುಮತಿ ಇರುವುದಿಲ್ಲ. ಪೂರ್ವ ಮತ್ತು ಪಶ್ಚಿಮ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಗಳಲ್ಲಿ ವಾಹನಗಳು ಮಾರ್ಗ ಬದಲಾಯಿಸಬೇಕಾಗುತ್ತದೆ. ಯಾವುದೇ ಗೋಡ್ಸ್ ವಾಹನಗಳು ದೆಹಲಿಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಹಾಲು, ತರಕಾರಿಗಳು ಮುಂತಾದ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿ ಮಾತ್ರ ಅವಕಾಶ ನೀಡಲಾಗಿದೆ.
ದೆಹಲಿಯಲ್ಲಿ ಈಗಾಗಲೇ ಇರುವ ಎಲ್ಲಾ ರೀತಿಯ ಗೋಡ್ಸ್ ವಾಹನಗಳು ಮತ್ತು ಬಸ್ಸುಗಳು ಸೇರಿದಂತೆ ಸಾಮಾನ್ಯ ಸಂಚಾರವನ್ನು ದೆಹಲಿಯ ಗಡಿಗಳ ರಸ್ತೆಗಳಲ್ಲಿ ಮಾತ್ರ ಅನುಮತಿಸಲಾಗುತ್ತದೆ. ನವದೆಹಲಿ ಪೊಲೀಸರು ನಗರದ ಹೊರಗಿನ ರಸ್ತೆ ಮಾರ್ಗದಲ್ಲಿ ಆಟೋಗಳು ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿಸಿದ್ದಾರೆ. ನವದೆಹಲಿಯ ಸ್ಥಳೀಯ ನಿವಾಸಿಗಳನ್ನು ಕರೆದೊಯ್ಯುವ ಟ್ಯಾಕ್ಸಿಗಳು ಮತ್ತು ಜಿಲ್ಲೆಯಲ್ಲಿರುವ ಹೋಟೆಲ್ ಮತ್ತು ಈಗಾಗಲೇ ಬುಕ್ಕಿಂಗ್ ಹೊಂದಿರುವ ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ನೈಋತ್ಯ ದೆಹಲಿಯಿಂದ ನವದೆಹಲಿ ರೈಲ್ವೆ ನಿಲ್ದಾಣಕ್ಕೆ ಮಾರ್ಗ: ಧೌಲಾ ಕುವಾನ್-ರಿಂಗ್ ರಸ್ತೆ-ನರೈನಾ ಫ್ಲೈಓವರ್-ಮಾಯಾಪುರಿ ಚೌಕ್-ಕೀರ್ತಿ ನಗರ ಮುಖ್ಯ ರಸ್ತೆ-ಶಾದಿಪುರ್ ಫ್ಲೈಓವರ್-ಪಟೇಲ್ ರಸ್ತೆ (ಮುಖ್ಯ ಮಥುರಾ ರಸ್ತೆ)-ಪೂಸಾ ವೃತ್ತ-ಪೂಸಾ ರಸ್ತೆ-ದಯಾಳ್ ಚೌಕ್-ಪಂಚಕುಯಾನ್ ರಸ್ತೆ-ಹೊರ ವೃತ್ತ, ಕೊನಾಟ್ ಪ್ಲೇಸ್- ಚೆಲ್ಮ್ಸ್‌ಫೋರ್ಡ್ ರಸ್ತೆ, ಪಹರ್ಗಂಜ್ ಸೈಡ್ ಅಥವಾ ಮಿಂಟೋ ರಸ್ತೆ-ಅಜ್ಮೇರಿ ಗೇಟ್, ಭವಭೂತಿ ಮಾರ್ಗದ ಮೂಲಕ ನವದೆಹಲಿ ರೈಲ್ವೆ ನಿಲ್ದಾಣವನ್ನು ತಲುಪಬಹುದು.
ಇದನ್ನೂ ಓದಿ: ಕೇಂದ್ರ ಸರ್ಕಾರ, ತನಿಖಾ ಸಂಸ್ಥೆಗಳಿಂದ ನನ್ನ ಕುಟುಂಬಕ್ಕೆ ಕಿರುಕುಳ: ಮಮತಾ ಬ್ಯಾನರ್ಜಿ