ಮೊಗ(ಪಂಜಾಬ್): ಇಲ್ಲಿನ ಧರ್ಮಕೋಟ್ ಕ್ಷೇತ್ರದ ರೆಡ್ವಾನ್ ಗ್ರಾಮದಲ್ಲಿ ಡ್ರಗ್ಸ್ ಚಟ ಅಂಟಿಸಿಕೊಂಡಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. ನಿನ್ನೆ ಸಂಜೆ 5 ಗಂಟೆಗೆ ಯುವಕನ ಶವ ಪತ್ತೆಯಾಗಿದ್ದು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಾವಿಗೀಡಾದ ಶಹಕೋಟ್ ಬಳಿಯ ತಲ್ವಾಂಡಿ ಬುತಿಯಾನ್ ಗ್ರಾಮದ ನಿವಾಸಿ ರಂಜೋಧ್ ಸಿಂಗ್ ಜೋಧಾ ತನ್ನ ಪೋಷಕರಿಗೆ ಏಕೈಕ ಮಗನಾಗಿದ್ದ.
ತಮ್ಮ ಪ್ರದೇಶದಲ್ಲಿ ಬಹಿರಂಗವಾಗಿ ಡ್ರಗ್ಸ್ ಮಾರಾಟವಾಗುತ್ತಿದ್ದರೂ ಪೊಲೀಸರು ಮತ್ತು ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಯುವಕರು ಸಾವನ್ನಪ್ಪುತ್ತಿದ್ದಾರೆ. ಮಾದಕ ವಸ್ತು ಕಳ್ಳಸಾಗಣೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಇದನ್ನೂ ಓದಿ: ₹100 ಕೋಟಿ ಮೌಲ್ಯದ ಡ್ರಗ್ಸ್ಗೆ ಬೆಂಕಿ ಹಚ್ಚಿದ ಪೊಲೀಸರು- ವಿಡಿಯೋ