ETV Bharat / bharat

ಮದ್ರಾಸ್ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ: ಕಳೆದ 3 ತಿಂಗಳಲ್ಲಿ 4 ವಿದ್ಯಾರ್ಥಿಗಳು ಸಾವಿಗೆ ಶರಣು - ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ

ಲವ್​ ಫೈಲ್ಯೂರ್​ನಿಂದಾಗಿ ಮದ್ರಾಸ್ ಐಐಟಿ ಕಾಲೇಜಿನ ಕ್ಯಾಂಪಸ್​ನಲ್ಲಿ ಎರಡನೇ ವರ್ಷದ ಬಿಟೆಕ್ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

iit campus
ಮದ್ರಾಸ್ ಐಐಟಿ
author img

By

Published : Apr 22, 2023, 8:54 AM IST

ಚೆನ್ನೈ: ಇಲ್ಲಿನ ಕೊಟ್ಟೂರು​ಪುರಂ ಪ್ರದೇಶದ ಮದ್ರಾಸ್ ಐಐಟಿಯಲ್ಲಿ ಎರಡನೇ ವರ್ಷದ ಬಿಟೆಕ್ ವ್ಯಾಸಂಗ ಮಾಡುತ್ತಿದ್ದ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚೌಗುಲೆ ಕೇದಾರ್ ಸುರೇಶ್(21) ಮೃತ ವಿದ್ಯಾರ್ಥಿ.

ಐಐಟಿ ಕ್ಯಾಂಪಸ್​ನಲ್ಲಿನ ಕಾವೇರಿ ಹಾಸ್ಟೆಲ್​ನಲ್ಲಿ ತಾನು ವಾಸವಿದ್ದ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಆತನ ಜೊತೆಗಿದ್ದ ವಿದ್ಯಾರ್ಥಿಗಳು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಕೊಟ್ಟೂರು​ಪುರಂ ಪೊಲೀಸರು, ವಿದ್ಯಾರ್ಥಿಯ ಮೃತದೇಹವನ್ನು ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕೊಟ್ಟೂರು​ಪುರಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರೇಮ ವೈಫಲ್ಯದಿಂದಾಗಿ ಕಳೆದ ಕೆಲ ದಿನಗಳಿಂದ ವಿದ್ಯಾರ್ಥಿ ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿದುಬಂದಿದೆ. ಮೃತ ಚೌಗುಲೆ ಕೇದಾರ್ ಸುರೇಶ್ ಕೊಲ್ಹಾಪುರ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದು, ಪ್ರೇಮಿಗಳ ನಡುವಿನ ಭಿನ್ನಾಭಿಪ್ರಾಯ ಉಂಟಾಗಿ ಕೆಲವು ತಿಂಗಳ ಹಿಂದೆ ಯುವತಿಯು ಸುರೇಶ್​ನೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದಳು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಜೊತೆಗೆ, ವಿದ್ಯಾರ್ಥಿ ಆತ್ಮಹತ್ಯೆಗೆ ಬೇರೇನಾದರೂ ಕಾರಣವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಹಾಸ್ಟೆಲ್​ನಲ್ಲಿ ಬಿ ಇ ವಿದ್ಯಾರ್ಥಿ ಆತ್ಮಹತ್ಯೆ.. ಆಘಾತದಿಂದ ವಾರ್ಡನ್ ಸಾವು

ಕಳೆದ ಮೂರು ತಿಂಗಳಲ್ಲಿ 4 ಐಐಟಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ದುರಂತವೇ ಸರಿ. ಮಹಾರಾಷ್ಟ್ರದ ಶ್ರೀವಾನ್ ಸನ್ನಿ, ಆಂಧ್ರದ ವೈಪು ಪುಷ್ಪಕ್ ಶ್ರೀ ಸಾಯಿ, ಪಶ್ಚಿಮ ಬಂಗಾಳದ ಸಚಿನ್ ಕುಮಾರ್ ಜೈನ್, ಕೇದಾರ್ ಸುರೇಶ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳು.

ಇದನ್ನೂ ಓದಿ : ಮದ್ರಾಸ್​ ಐಐಟಿಯಲ್ಲಿ ಆತ್ಮಹತ್ಯೆ ಯತ್ನ.. ಓರ್ವ ಸಾವು, ಕರ್ನಾಟಕದ ಮೂಲದ ಬಿ.ಟೆಕ್ ವಿದ್ಯಾರ್ಥಿ​ ಆಸ್ಪತ್ರೆಗೆ ದಾಖಲು

ಕಳೆದ ಫೆಬ್ರವರಿ 13 ರಂದು ಮಹಾರಾಷ್ಟ್ರ ಮೂಲದ ಶ್ರೀವನ್ ಸನ್ನಿ ಅಲ್ಪತ್ (25) ಚೆನ್ನೈನ ಕೊಟ್ಟೂರುಪುರಂನ ಐಐಟಿ ಕ್ಯಾಂಪಸ್‌ನಲ್ಲಿರುವ ಮಹಾನದಿ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈತ ಐಐಟಿಯಲ್ಲಿ ಎಂಎಸ್ ಎಲೆಕ್ಟ್ರಿಕಲ್ 2 ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪ್ರಾಥಮಿಕ ತನಿಖೆಯಲ್ಲಿ ವಿದ್ಯಾರ್ಥಿ ಶ್ರೀವನ್ ಸನ್ನಿ ಕಳೆದ ಎರಡು ತಿಂಗಳಿನಿಂದ ತರಗತಿಗೆ ಸರಿಯಾಗಿ ಹಾಜರಾಗದೆ ಉಂಟಾದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು.

ಇನ್ನು ಕಳೆದ ತಿಂಗಳ ಮಾರ್ಚ್​ 15 ರಂದು ಹರಿಯಾಣ ನಗರದ ಹೆಸರಾಂತ ಖಾಸಗಿ ಶಾಲೆಯೊಂದರಲ್ಲಿ 12 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ 13ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ತನಿಖೆ ವೇಳೆ ಬಾಲಕ ತನ್ನ ಅಂತಿಮ ವರ್ಷದ ಪರೀಕ್ಷೆಗಳ ಬಗ್ಗೆ ಹೆಚ್ಚು ಆತಂಕಗೊಂಡು ಸಾವಿಗೆ ಶರಣಾದ ಎಂದು ತಿಳಿದುಬಂದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.