ನಾಗ್ಪುರ(ಮಹಾರಾಷ್ಟ್ರ): ಮನೆಯೊಳಗೆ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಸೊಳ್ಳೆ ನಿವಾರಕ ದ್ರಾವಣದ ಬಾಟಲಿಯನ್ನು ಆಕಸ್ಮಿಕವಾಗಿ ಬಾಯಿಯಲ್ಲಿ ಇಟ್ಟುಕೊಂಡು ಅದರದಲ್ಲಿದ್ದ ರಾಸಾಯನಿಕ ದ್ರಾವಣ ದೇಹ ಸೇರಿದ ಪರಿಣಾಮ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಸಕ್ರದಾರ ಪ್ರದೇಶದ ಆಶಿರ್ವಾದ್ ನಗರದಲ್ಲಿ ನಡೆದಿದೆ. ಒಂದೂವರೆ ವರ್ಷದ ರಿದ್ಧಿ ದಿನೇಶ್ ಚೌಧರಿ ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಸೊಳ್ಳೆ ಹೆಚ್ಚಿದ ಕಾರಣ ಆಕೆಯ ಪೋಷಕರು ಸೊಳ್ಳೆ ನಿವಾರಕ ಯಂತ್ರವನ್ನು ಬಳಸುತ್ತಿದ್ದರು. ಚೌಧರಿ ಕುಟುಂಬ ಸದಸ್ಯರು ಕೆಲಸದಲ್ಲಿ ನಿರತರಾಗಿದ್ದ ಸಮಯದಲ್ಲಿ ರಿದ್ದಿ ಆಟವಾಡಲು ದ್ರವದ ಬಾಟಲಿಯನ್ನು ಎತ್ತಿಕೊಂಡು. ಬಾಟಲಿಯನ್ನು ಬಾಯಿಗೆ ಹಾಕಿಕೊಂಡಿದ್ದಾಳೆ. ಈ ವೇಳೆ, ಬಾಟಲಿಯಲ್ಲಿದ್ದ ದ್ರವವು ಬಾಲಕಿಯ ಹೊಟ್ಟೆ ಸೇರಿದೆ. ನಂತರ ಬಾಲಕಿ ಅಸ್ವಸ್ಥಗೊಂಡಿದ್ದಾಳೆ. ಕೂಡಲೇ ಪೋಷಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಾಲಕರು ಜಾಗೃತರಾಗಬೇಕು: ಸೊಳ್ಳೆಗಳ ಸಂಖ್ಯೆ ಹೆಚ್ಚಾದಾಗ ಸೊಳ್ಳೆ ನಿವಾರಕ ಯಂತ್ರವನ್ನು ದಿನದ 24 ಗಂಟೆಯೂ ಚಾಲನೆಯಲ್ಲಿಡಲಾಗುತ್ತದೆ. ಇದರಿಂದ ಹಲವರಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ. ಇದರ ಹೊರತಾಗಿ ಇತರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಯಂತ್ರವನ್ನು ಮತ್ತು ಅದರ ದ್ರವಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
ಅಲ್ಲದೇ ಚಿಕ್ಕಮಕ್ಕಳು ಇರುವ ಪೋಷಕರು ಅವರ ಮೇಲೆ ಗಮನ ಹರಿಸಬೇಕು ಏಕೆಂದರೆ ಪುಟ್ಟ ಮಕ್ಕಳು ಆಟವಾಡುತ್ತ ತಮ್ಮ ಕೈಗೆ ಸಿಕ್ಕ ವಸ್ತುಗಳನ್ನು ಬಾಯಿಗೆ ಇಟ್ಟುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಕ್ಕಳ ಮೇಲೆ ನಿಗಾವಹಿಸಬೇಕು. ಪೋಷಕರ ಅಜಾಗರೂಕತೆಯು ಮಕ್ಕಳ ಪ್ರಾಣವನ್ನು ಹೇಗೆ ಬಲಿ ಪಡೆಯುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.
ಸೊಳ್ಳೆ ನಿವಾರಕಗಳ ಅಡ್ಡಪರಿಣಾಮಗಳು: ಚರ್ಮದ ತೊಂದರೆ, ಅಲರ್ಜಿ, ಉರಿಯೂತ, ದದ್ದುಗಳು ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು. ಇದು ಕಣ್ಣಿಗೆ ಹೋದರೆ ಉರಿ ಉಂಟಾಗುತ್ತದೆ. ಇದನ್ನು ತುಟಿಗಳ ಮೇಲೆ ಹಚ್ಚಿದರೆ ಮರಗಟ್ಟುವಿಕೆ ಮತ್ತು ಉರಿ ಉಂಟಾಗುತ್ತದೆ. ಸೊಳ್ಳೆ ನಿವಾರಕಗಳು ವಿಷಯುಕ್ತ ರಾಸಾಯನಿಕಗಳಾಗಿವೆ.
ಇದನ್ನೂ ಓದಿ:ಮಾದಕವಸ್ತು ಪುನರ್ವಸತಿ ಕೇಂದ್ರದಲ್ಲಿ ಯುವಕನ ಹತ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಜೀವಕ್ಕೆ ಕುತ್ತು ತಂದಿದ್ದ ಚಾಕೊಲೇಟ್: ಕೆಲವು ತಿಂಗಳುಗಳ ಹಿಂದೆ ಮಹಾರಾಷ್ಟ್ರ ಸತಾರಾದಲ್ಲಿ ಒಂದೂವರೆ ವರ್ಷದ ಬಾಲಕಿಯೊಬ್ಬಳ ಗಂಟಲೊಳಗೆ ಚಾಕೊಲೇಟ್ ಸಿಲುಕಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಬಾಲಕಿ ಚಾಕೊಲೇಟ್ ನುಂಗಿ ಒದ್ದಾಡುತ್ತಿರುವುದನ್ನು ಕಂಡ ತಾಯಿ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಳು.
ಬಾಲಕಿಗೆ ನೆರೆಮನೆಯ ಹುಡುಗಿಯೊಬ್ಬಳು ಜೆಲ್ಲಿ ಚಾಕೊಲೇಟ್ ಕೊಟ್ಟಿದ್ದಳು. ಚಾಕೊಲೇಟ್ ಅನ್ನು ಸಂತಸದಿಂದ ಬಾಯಲ್ಲಿ ಇಟ್ಟುಕೊಂಡಿದ್ದ ಬಾಲಕಿ. ನಂತರ ಚಾಕೊಲೇಟ್ ಇದ್ದಕ್ಕಿದ್ದಂತೆ ಆಕೆಯ ಗಂಟಲೊಳಗೆ ಸಿಲುಕಿಕೊಂಡಿತ್ತು. ಚಾಕೊಲೇಟ್ ಗಂಟಲಿಗೆ ಸಿಕ್ಕಿ ಕೆಮ್ಮಲು ಆರಂಭಿಸಿದ್ದಳು. ತಕ್ಷಣವೇ ಅವಳು ಪ್ರಜ್ಞೆ ಸಹ ಕಳೆದುಕೊಂಡಿದ್ದಳು.
ಇದನ್ನೂ ಓದಿ: ಗಂಟಲೊಳಗೆ ಚಾಕೊಲೇಟ್ ಸಿಲುಕಿ ಬಾಲಕಿ ಸಾವು.. ಮಗಳ ಕಳೆದುಕೊಂಡು ತಾಯಿ ರೋದನ