ETV Bharat / bharat

ಮತ್ತೆ ಅರುಣಾಚಲ ಪ್ರದೇಶದಲ್ಲಿ ಕಂಪಿಸಿದ ಭೂಮಿ - Arunachal Pradesh Earthquake

ನಿನ್ನೆ ಅರುಣಾಚಲ ಪ್ರದೇಶದ ಪಂಗಿನ್‌ ಬಳಿ 3.1ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದ್ದು, ಇಂದು ಇಟಾನಗರದಲ್ಲಿ 3.0 ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.

Earthquake
ಮತ್ತೆ ಅರುಣಾಚಲ ಪ್ರದೇಶದಲ್ಲಿ ಕಂಪಿಸಿದ ಭೂಮಿ
author img

By

Published : Jun 21, 2021, 7:42 AM IST

ಇಟಾನಗರ (ಅರುಣಾಚಲ ಪ್ರದೇಶ): ನಿನ್ನೆಯಷ್ಟೇ ಲಘು ಭೂಕಂಪನ ಸಂಭವಿಸಿದ್ದ ಅರುಣಾಚಲ ಪ್ರದೇಶದಲ್ಲಿ ಇಂದು ಮತ್ತೆ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ 3.0 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (ಎನ್​ಸಿಎಸ್​) ಮಾಹಿತಿ ನೀಡಿದೆ.

ಇಂದು ಬೆಳಗ್ಗೆ 6.09ಕ್ಕೆ ಇಟಾನಗರದಲ್ಲಿ ಲಘು ಭೂಕಂಪನ ಉಂಟಾಗಿದ್ದು, ಇಲ್ಲಿನ ಪಪುಂಪರೆ ಎಂಬ ಪ್ರದೇಶದಿಂದ 10 ಕಿಲೋ ಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಘಟನೆಯಿಂದ ಯಾವುದೇ ಸಾವು-ನೋವು, ಆಸ್ತಿಪಾಸ್ತಿ ಹಾನಿ ವರದಿಯಾಗಿಲ್ಲ.

ಇದನ್ನೂ ಓದಿ: ಅರುಣಾಚಲ ಪ್ರದೇಶ, ಮಣಿಪುರದಲ್ಲಿ ಲಘು ಭೂಕಂಪನ

ನಿನ್ನೆ ಕೂಡ ಅರುಣಾಚಲ ಪ್ರದೇಶದ ಪಂಗಿನ್‌ ಬಳಿ 3.1ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇದಲ್ಲದೇ ಮಣಿಪುರದ ಉಕ್ರುಲ್ ಜಿಲ್ಲೆಯಲ್ಲಿ 3.6 ರಷ್ಟು ತೀವ್ರತೆಯ ಭೂಕಂಪ ಹಾಗೂ ದೆಹಲಿಯ ಪಂಜಾಬಿ ಬಾಗ್​ ಪ್ರದೇಶದಲ್ಲಿ 2.1ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.