ETV Bharat / bharat

ಕಾಶ್ಮೀರ ತಲುಪಿದ ಭಾರತ್ ಜೋಡೋ ಯಾತ್ರೆ.. ಭದ್ರತೆ ಕಾರಣದಿಂದ ಕೆಲ ಕಾಲ ಸ್ಥಗಿತವಾಗಿದ್ದ ರ‍್ಯಾಲಿ

author img

By

Published : Jan 27, 2023, 4:55 PM IST

Updated : Jan 27, 2023, 5:09 PM IST

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ - ಬಿನಿಹಾಲ್​ನಿಂದ ಕಾಶ್ಮೀರ ಕಣಿವೆಯತ್ತ ಸಾಗಿದ ಯಾತ್ರೆಗೆ ನ್ಯಾಷನಲ್ ಕಾನ್ಫರೆನ್ಸ್ ವೈವ್ ಅಧ್ಯಕ್ಷ ಒಮರ್ ಅಬ್ದುಲ್ಲಾ ಸಾಥ್​ - ಕೆಲ ಕಾಲ ಸ್ಥಗಿತಗೊಂಡಿದ್ದ ಯಾತ್ರೆ - ಜಮ್ಮು- ಕಾಶ್ಮೀರ ಆಡಳಿತದ ವಿರುದ್ಧ ಕಾಂಗ್ರೆಸ್​ ಆಕ್ರೋಶ

ಕಾಶ್ಮೀರವನ್ನು ತಲುಪಿದ ರಾಹುಲ್​ಗಾಂದಿ ನೇತೃತ್ವದ ಭಾರತ್ ಜೋಡೋ ಯಾತ್ರೆ

ಜಮ್ಮು ಮತ್ತು ಕಾಶ್ಮೀರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಶುಕ್ರವಾರ ಕಾಶ್ಮೀರವನ್ನು ಪ್ರವೇಶಿಸಿತು. ರಾಂಬನ್ ಜಿಲ್ಲೆಯ ಬಿನಿಹಾಲ್​ನಿಂದ ಕಾಶ್ಮೀರ ಕಣಿವೆಯತ್ತ ಸಾಗಿದ ಈ ಯಾತ್ರೆಗೆ ನ್ಯಾಷನಲ್ ಕಾನ್ಫರೆನ್ಸ್ ವೈವ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಬನಿಹಾಲ್‌ನಲ್ಲಿ ಯಾತ್ರೆಗೆ ಸೇರಿಕೊಂಡರು. ಎರಡು ಪ್ರದೇಶಗಳು 11-ಕಿಲೋಮೀಟರ್ ನವ್-ಯುಗ್ ಸುರಂಗದ ಮೂಲಕ ಸಂಪರ್ಕ ಹೊಂದಿವೆ.

ಯಾತ್ರೆಯು ಖಾಜಿಗುಂಡ್ ಸಮೀಪದ ಕುಜರೂ ಗ್ರಾಮವನ್ನು ತಲುಪುತ್ತಿದ್ದಂತೆ, ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್​ ನಾಯಕನನ್ನು ಹಾಗೂ ಬೆಂಬಲಿಗರನ್ನು ಸ್ವಾಗತಿಸಿದರು. ಈ ವೇಳೆ, ರಾಹುಲ್​ ಗಾಂಧಿ ಅವರಿಗೆ ಘೋಷಣೆ ಕೂಗಲಾಯಿತು. ಆದಾಗ್ಯೂ ಕಣಿವೆಯಲ್ಲಿ ಭದ್ರತಾ ಸಲಹೆಯ ಕಾರಣದಿಂದ ರಾಹುಲ್ ಗಾಂಧಿ ತಮ್ಮ ಬೆಂಬಲಿಗರೊಂದಿಗೆ ಬೆರೆಯಲು ತಮ್ಮ ವಾಹನದಿಂದ ಇಳಿಯಲಿಲ್ಲ ಎಂಬುದು ತಿಳಿದು ಬಂದಿದೆ.

ಕುಜ್ರೂ ಗ್ರಾಮದಲ್ಲಿ ಯಾತ್ರೆಗೆ ಸ್ವಲ್ಪ ಕಾಲ ನಿಲುಗಡೆ: ಕ್ಯಾವಲ್ಕೇಡ್‌ನಲ್ಲಿ ಮೊಬೈಲ್ ಫ್ರೀಕ್ವೆನ್ಸಿ ಜಾಮರ್‌ಗಳಿಂದಾಗಿ ಯಾತ್ರೆಯನ್ನು ವರದಿ ಮಾಡುವ ವರದಿಗಾರರಿಗೆ ಸೆಲ್‌ಫೋನ್‌ಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ. ಕುಜ್ರೂ ಗ್ರಾಮದಲ್ಲಿ ಯಾತ್ರೆ ಸ್ವಲ್ಪ ನಿಲುಗಡೆಯಾದ ನಂತರ ಮತ್ತೆ ಅನಂತನಾಗ್ ಕಡೆಗೆ ಸಾಗಿತು. ಗಾಂಧಿ ಮತ್ತು ಅವರ ಸಹ ನಾಯಕರು ಅನಂತನಾಗ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.

ಈ ಹಿಂದೆ ಭೂಕುಸಿತ ಮತ್ತು ಕಲ್ಲು ಬೀಳುವ ಆತಂಕದ ಹಿನ್ನೆಲೆಯಲ್ಲಿ ಯಾತ್ರೆಯನ್ನು ಮುಂದೂಡಲಾಗಿತ್ತು. ಆದರೆ, ಇಂದು ಬೆಳಗ್ಗೆ ಬನ್ಹಾಲ್‌ನಿಂದ ಯಾತ್ರೆ ಆರಂಭಗೊಂಡಿದ್ದು, ಕಣಿವೆಯತ್ತ ಸಾಗುತ್ತಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಅದು ತನ್ನ ಕೊನೆಯ ಗುರಿಯತ್ತ ಸಾಗುತ್ತಿದೆ.

ಇದನ್ನೂ ಓದಿ: ಮುಲಾಯಂ ಸಿಂಗ್​ರಿಗೆ ಪದ್ಮವಿಭೂಷಣ ನೀಡಿದ್ದು ಬಿಜೆಪಿಯ ಹೃದಯ ವೈಶಾಲ್ಯ: ಯುಪಿ ಸಚಿವ ಜೈವೀರ್ ಸಿಂಗ್

ಕೆಲ ಕಾಲ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತ - ಜೆಕೆ ಆಡಳಿತದ ವಿರುದ್ಧ ಕಾಂಗ್ರೆಸ್ ಆಕ್ರೋಶ : ಭಾರತ್ ಜೋಡೋ ಯಾತ್ರೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. 'ಭದ್ರತಾ ಲೋಪ ಮತ್ತು ಅಸಮರ್ಪಕ ಭದ್ರತೆ' ಎಂದು ಕಾಂಗ್ರೆಸ್​ ಈ ವೇಳೆ ಆರೋಪಿಸಿತ್ತು. ಜಮ್ಮು ಮತ್ತು ಕಾಶ್ಮೀರ ಆಡಳಿತದಿಂದ ಭದ್ರತಾ ಉಲ್ಲಂಘನೆ ಮತ್ತು ಜನಸಂದಣಿ ದುರುಪಯೋಗಪಡಿಸಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದ ನಂತರ ಶುಕ್ರವಾರ ಕಣಿವೆಯ ಹೆಬ್ಬಾಗಿಲು ಖಾಜಿಗುಂಡ್ ಬಳಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಮೆರವಣಿಗೆಯನ್ನ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಭದ್ರತೆ ಒದಗಿಸಲು ಜೆಕೆ ಆಡಳಿತ ವಿಫಲವಾಗಿದೆ ಎಂದು ಎಐಸಿಸಿ ಉಸ್ತುವಾರಿ ರಜನಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಕಾಶ್ಮೀರದ ಬನಿಹಾಲ್‌ನಲ್ಲಿ ಭದ್ರತಾ ಪಡೆಗಳು ಹಠಾತ್ತನೆ ಯಾತ್ರೆಯನ್ನು ನಿಲ್ಲಿಸಿದ್ದರಿಂದ ಮತ್ತು ಬುಲೆಟ್ ಪ್ರೂಫ್ ಕಾರಿನಿಂದ ಇಳಿಯುವಂತೆ ರಾಹುಲ್ ಗಾಂಧಿ ಅವರನ್ನು ಕೇಳಿದಾಗ ಎಐಸಿಸಿ ಸಂಘಟನೆಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಭದ್ರತಾ ಉಲ್ಲಂಘನೆಯ ಆರೋಪದ ಮೇಲೆ ಕಿಡಿಕಾರಿದರು. ಡಿ-ಏರಿಯಾದಿಂದ ಭದ್ರತಾ ಸಿಬ್ಬಂದಿ ಹಠಾತ್ ಹಿಂತೆಗೆದುಕೊಳ್ಳುವಿಕೆಯು ಕಾಶ್ಮೀರದ ಬನಿಹಾಲ್‌ನಲ್ಲಿ ಗಂಭೀರ ಭದ್ರತಾ ಉಲ್ಲಂಘನೆಯನ್ನು ಉಂಟುಮಾಡಿದೆ. ಇದನ್ನು ಯಾರು ಆದೇಶಿಸಿದ್ದಾರೆ? ಎಂದು ವೇಣುಗೋಪಾಲ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರೀಕ್ಷೆ ಇರಲಿ: ಪರೀಕ್ಷಾ ಪೇ ಚರ್ಚಾದಲ್ಲಿ ಪೋಷಕರಿಗೆ ಪ್ರಧಾನಿ ಮೋದಿ ಸಲಹೆ

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಜನವರಿ 19 ರಂದು ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿದೆ. ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಪಾದಯಾತ್ರೆ ಜನವರಿ 30 ರಂದು ಶ್ರೀನಗರದಲ್ಲಿ ಕೊನೆಗೊಳ್ಳಲಿದೆ.

ಶ್ರೀನಗರದಲ್ಲಿ ಯಾತ್ರೆ ಮುಕ್ತಾಯವಾಗಲಿದೆ: ಯಾತ್ರೆ ಕೊನೆಗೊಳ್ಳುವ ವೇಳೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರಾಡಳಿತ ಪ್ರದೇಶದಲ್ಲಿ 350 ಕಿಲೋಮೀಟರ್ ದೂರ ಕ್ರಮಿಸಲಿದ್ದಾರೆ. ವೇಳಾಪಟ್ಟಿಯ ಪ್ರಕಾರ, ಜನವರಿ 30 ರಂದು ಶೇರ್ - ಎ - ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಹುಲ್ ಗಾಂಧಿ ಅವರ ಸಾರ್ವಜನಿಕ ರ‍್ಯಾಲಿಯೊಂದಿಗೆ ಶ್ರೀನಗರದಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ : ಇಂದಿನ ಭಾರತ್ ಜೋಡೊ ಯಾತ್ರೆ ರದ್ದು, ಜ.27 ರಂದು ಪುನಾರಂಭ

Last Updated : Jan 27, 2023, 5:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.