ನವದೆಹಲಿ: ಮಹಾಮಾರಿ ಕೊರೊನಾ ವೈರಸ್ನ ರೂಪಾಂತರ ತಳಿ ಒಮಿಕ್ರೋನ್ ಕರ್ನಾಟಕದ ಮೂಲಕ ಭಾರತಕ್ಕೂ ಲಗ್ಗೆ ಹಾಕಿದೆ. ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್, ಕರ್ನಾಟಕದ ಬೆಂಗಳೂರಿನಲ್ಲಿ ಎರಡು ರೂಪಾಂತರ ಕೇಸ್ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
-
#WATCH | Passengers arriving from 'at risk' countries need to undergo RT-PCR test on arrival. If found positive for COVID, they'll be treated under clinical management protocol. If tested negative they'll follow, home quarantine for 7 days: Lav Agarwal, JS, Union Health Ministry pic.twitter.com/OyUJZrELhn
— ANI (@ANI) December 2, 2021 " class="align-text-top noRightClick twitterSection" data="
">#WATCH | Passengers arriving from 'at risk' countries need to undergo RT-PCR test on arrival. If found positive for COVID, they'll be treated under clinical management protocol. If tested negative they'll follow, home quarantine for 7 days: Lav Agarwal, JS, Union Health Ministry pic.twitter.com/OyUJZrELhn
— ANI (@ANI) December 2, 2021#WATCH | Passengers arriving from 'at risk' countries need to undergo RT-PCR test on arrival. If found positive for COVID, they'll be treated under clinical management protocol. If tested negative they'll follow, home quarantine for 7 days: Lav Agarwal, JS, Union Health Ministry pic.twitter.com/OyUJZrELhn
— ANI (@ANI) December 2, 2021
ಕಳೆದ ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾದಿಂದ ಕರ್ನಾಟಕಕ್ಕೆ ಆಗಮಿಸಿರುವ 66 ಹಾಗೂ 46 ವರ್ಷದ ವ್ಯಕ್ತಿಗಳಲ್ಲಿ ರೂಪಾಂತರ ಸೋಂಕು ಕಾಣಿಸಿಕೊಂಡಿದೆ. ಇದೇ ವಿಚಾರವಾಗಿ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ, ಹೊಸ ರೂಪಾಂತರದಿಂದ ಜನರು ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ ಎಂದಿದೆ. ಹೊಸ ವೈರಸ್ ಕಾಣಿಸಿಕೊಂಡವರಿಗೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕ್ವಾರಂಟೈನ್ಗೊಳಪಡಿಸಲಾಗಿದೆ. ಹೀಗಾಗಿ ಯಾವುದೇ ರೀತಿಯಲ್ಲೂ ಹೆದರುವ ಅಗತ್ಯವಿಲ್ಲ ಎಂದಿದೆ.
ಇದನ್ನೂ ಓದಿರಿ: ಭಾರತಕ್ಕೆ ಲಗ್ಗೆ ಹಾಕಿದ ರೂಪಾಂತರಿ: ಕರ್ನಾಟಕದಲ್ಲಿ ಎರಡು ಒಮಿಕ್ರೋನ್ ಕೇಸ್ ಪತ್ತೆ
ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವುದು ಹಾಗೂ ಲಸಿಕೆ ಪಡೆದುಕೊಳ್ಳುವುದರಿಂದ ಒಮಿಕ್ರೋನ್ ತಡೆಗಟ್ಟಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಎಲ್ಲರೂ ಕಡ್ಡಾಯವಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುವಂತೆ ತಿಳಿಸಿದೆ.
ಕರ್ನಾಟಕದಲ್ಲಿ ಒಮಿಕ್ರೋನ್ ಕಾಣಿಸಿಕೊಂಡಿರುವ ಕಾರಣ ಇದೀಗ ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಭಾರತ ಸೇರಿದಂತೆ 29 ಬೇರೆ ಬೇರೆ ದೇಶಗಳಲ್ಲಿ 373 ಒಮಿಕ್ರೋನ್ ಕೇಸ್ ಪತ್ತೆಯಾಗಿವೆ ಎಂಬ ಮಾಹಿತಿಯನ್ನ ಕೇಂದ್ರ ಆರೋಗ್ಯ ಇಲಾಖೆ ನೀಡಿದೆ.