ನವದೆಹಲಿ: ಒಲಿಂಪಿಕ್ ಪದಕ ವಿಜೇತೆ, ಅಂತಾರಾಷ್ಟ್ರೀಯ ವೇಟ್ ಲಿಫ್ಟರ್ ಕರ್ಣಂ ಮಲ್ಲೇಶ್ವರಿಗೆ ಉನ್ನತ ಗೌರವವೊಂದು ಒಲಿದು ಬಂದಿದೆ. ದೆಹಲಿ ಕ್ರೀಡಾ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕರ್ಣಂ ಮಲ್ಲೇಶ್ವರಿ ನೇಮಕಗೊಂಡಿದ್ದಾರೆ.
ದೆಹಲಿ ಉನ್ನತ ಶಿಕ್ಷಣ ಇಲಾಖೆ ನಿರ್ದೇಶಕರಾದ ಅಜ್ಮಿಲ್ ಹಘ್ ಆದೇಶ ಹೊರಡಿಸಿದ್ದು, ಈ ಕ್ರೀಡಾ ವಿಶ್ವವಿದ್ಯಾಲಯ ಆರಂಭದ ನಂತರ ವಿವಿಯ ಮೊದಲ ಕುಲಪತಿ ಎಂಬ ಹೆಗ್ಗಳಿಕೆಗೆ ಕರ್ಣಂ ಮಲ್ಲೇಶ್ವರಿ ಪಾತ್ರರಾಗಿದ್ದಾರೆ.
ಕರ್ಣಂ ಮಲ್ಲೇಶ್ವರಿ ಮೂಲತಃ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಅಮಾದಲವಲಸ ಎಂಬ ಪಟ್ಟಣದವರಾಗಿದ್ದು, 2000ನೇ ಸಾಲಿನಲ್ಲಿ ನಡೆದ ಸಿಡ್ನಿ ಒಲಿಂಪಿಕ್ನಲ್ಲಿ ಭಾರತದ ಪರವಾಗಿ ಭಾರ ಎತ್ತುವಿಕೆ ಸ್ಪರ್ಧೆಯಲ್ಲಿ ಭಾಗವಹಿಸಿ, ಕಂಚಿನ ಪದಕ ಪಡೆದು ದಾಖಲೆ ಸೃಷ್ಟಿಸಿದ್ದರು.
ಇದನ್ನೂ ಓದಿ: ಬಂಧುಗಳ ಬಲಿ ಪಡೆದ ಕೋವಿಡ್: ಖಿನ್ನತೆಯಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಕರ್ಣಂ ಮಲ್ಲೇಶ್ವರಿ ಈವರೆಗೆ ಅನೇಕ ಗೌರವಗಳು ಸಂದಿವೆ. ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ ಪುರಸ್ಕಾರ, ಮತ್ತು ಪದ್ಮಶ್ರೀ ಪುರಸ್ಕಾರಗಳು ದೊರೆತಿವೆ. ಈಗ ದೆಹಲಿ ಕ್ರೀಡಾ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಆಯ್ಕೆ ಆಗಿದ್ದು, ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.