ETV Bharat / bharat

ಲಂಪಿ ವೈರಸ್​ನಿಂದ ಹಸುಗಳ ಸರಣಿ ಸಾವು.. ಗೋವುಗಳ ರಾಶಿ ರಾಶಿ ಮೃತದೇಹದ ವಿಡಿಯೋ ವೈರಲ್​ - ಗುಜರಾತ್ ನ ಕಛ್ ನಲ್ಲಿ ಲಂಪಿ ವೈರಸ್ ಜಾನುವಾರುಗಳಿಗೆ ಮಾರಕ

ಜಾನುವಾರುಗಳಿಗೆ ಮಾರಕವಾದ ಲಂಪಿ ವೈರಸ್- ಕಛ್ ಜಿಲ್ಲೆಯಲ್ಲಿ ಹಸುಗಳ ಶವದ ರಾಶಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್- ಕಛ್ ಅಭಿವೃದ್ಧಿ ಅಧಿಕಾರಿಯಿಂದಲೂ ಸಿಕ್ತು ಸ್ಪಷ್ಟನೆ

officers-clarification-regarding-the-viral-video-of-the-dead-cow
ಸತ್ತ ಹಸುಗಳ ಹೆಣದ ರಾಶಿಯ ವಿಡಿಯೋ ವೈರಲ್ : ಅಧಿಕಾರಿಯ ಸ್ಪಷ್ಟನೆ
author img

By

Published : Aug 1, 2022, 7:29 PM IST

ಕಛ್ (ಗುಜರಾತ್) : ಕಛ್ ಜಿಲ್ಲೆಯಲ್ಲಿ ಲಂಪಿ ವೈರಸ್ ನಿಂದಾಗಿ ಜಾನುವಾರುಗಳ ಜೀವಕ್ಕೆ ಕುತ್ತು ಉಂಟಾಗಿದೆ. ಈ ಮಾರಕ ವೈರಸ್ ನಿಂದಾಗಿ ಹಸುಗಳು ಸಾವನ್ನಪ್ಪುತ್ತಿದ್ದು, ಈವರೆಗೆ ಸುಮಾರು 1010 ಹಸುಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಸದ್ಯ ರೋಗ ನಿಯಂತ್ರಣಕ್ಕೆ ಬಾರದೆ ಇಡೀ ಜಿಲ್ಲೆಯನ್ನು ವ್ಯಾಪಿಸಿದೆ. ಜಿಲ್ಲೆಯಲ್ಲಿ ಒಟ್ಟು 23.79 ಲಕ್ಷ ಜಾನುವಾರುಗಳಿವೆ. ಇವುಗಳಲ್ಲಿ 5.74 ಲಕ್ಷ ಹಸುಗಳಿದ್ದು, ಇವುಗಳಲ್ಲಿ 1.64 ಲಕ್ಷ ಹಸುಗಳಿಗೆ ಗಂಟು ರೋಗ ಬಾರದಂತೆ ಲಸಿಕೆ ಹಾಕಲಾಗಿದೆ.

ಜಾನುವಾರುಗಳಲ್ಲಿ ಲಂಪಿ ವೈರಸ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪ್ರವೀಣ ಡಿ.ಕೆ ಅವರು ಮುಂಜಾಗ್ರತಾ ಕ್ರಮವಾಗಿ ಕೆಲವು ಆದೇಶಗಳನ್ನು ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಈ ಚರ್ಮ ರೋಗ ಕಾಣಿಸಿಕೊಂಡಿದ್ದು, ಈ ರೋಗವು ವೈರಸ್ ಮೂಲಕ ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ವೇಗವಾಗಿ ಹರಡುತ್ತದೆ. ಜಾನುವಾರುಗಳ ಪರಸ್ಪರ ಹಾಗೂ ನೇರ ಸಂಪರ್ಕದಿಂದ, ಜೊತೆಗೆ ದನಗಳ ಮೈಮೇಲೆ ಅಂಟಿಕೊಂಡಿರುವ ಜಿಗಣೆ, ನೊಣ, ಸೊಳ್ಳೆ ಮುಂತಾದವುಗಳಿಂದ ಈ ಸೋಂಕು ಹರಡುತ್ತಿದೆ ಎಂದು ಅವರು ಹೇಳಿದ್ದಾರೆ.

ಸತ್ತ ಹಸುಗಳ ಹೆಣದ ರಾಶಿಯ ವಿಡಿಯೋ ವೈರಲ್ : ಅಧಿಕಾರಿಯ ಸ್ಪಷ್ಟನೆ

ರಾಶಿ ರಾಶಿ ಹಸುಗಳ ಮೃತದೇಹ : ಇಲ್ಲಿನ ಭುಜ್‌ನ ನಗರೋ ರಸ್ತೆ ಪ್ರದೇಶದಲ್ಲಿರುವ ಕಸ ವಿಲೇವಾರಿ ಮಾಡುವ ಪ್ರದೇಶದಲ್ಲಿ ಲಂಪಿ ವೈರಸ್ ರೋಗದಿಂದ ಮೃತಪಟ್ಟ ಹಸುಗಳನ್ನು ರಾಶಿ ಹಾಕಲಾಗಿತ್ತು. ಈ ಹಸುಗಳ ಶವಗಳನ್ನು ಪುರಸಭೆ ನೌಕರರು ಇಲ್ಲಿ ಬಿಸಾಡಿದ್ದು, ಹಸುವಿನ ಮೃತದೇಹದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಛ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಭವ್ಯಾ ವರ್ಮಾ, ಪುರಸಭೆ ಮತ್ತು ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಿಂದ ಸತ್ತ ಜಾನುವಾರುಗಳನ್ನು ವಿಲೇವಾರಿ ಮಾಡಲು ಭುಜ್ ಬಳಿಯ ಕಸವಿಲೇವಾರಿ ಪ್ರದೇಶಕ್ಕೆ ತರಲಾಗುತ್ತದೆ. ಸಾಮಾನ್ಯವಾಗಿ 30-35 ಪ್ರಾಣಿಗಳ ಶವಗಳನ್ನು ಇಲ್ಲಿ ವಿಲೇವಾರಿ ಮಾಡಲಾಗುತ್ತದೆ. ಆದರೆ ಜುಲೈ 29 ರಂದು ಹಸುಗಳ ಶವಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗಿರಲಿಲ್ಲ. ಗುತ್ತಿಗೆದಾರರು ಕಾರಣಾಂತರಗಳಿಂದ ಈ ಮೃತ ದೇಹಗಳನ್ನು ವಿಲೇವಾರಿ ಮಾಡಿರಲಿಲ್ಲ. ಅಂದು ಈ ವಿಡಿಯೋ ವೈರಲ್ ಆಗಿದ್ದು, ಸದ್ಯ ಎಲ್ಲ ಪ್ರಾಣಿಗಳ ಶವಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಓದಿ : ಬೈಕ್​ ಹಿಂಬದಿಯಲ್ಲಿ ತಾಯಿಯ ಮೃತದೇಹವಿಟ್ಟು 80 ಕಿಲೋ ಮೀಟರ್ ಸಾಗಿಸಿದ ಪುತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.