ಭುವನೇಶ್ವರ (ಒಡಿಶಾ): ಭುವನೇಶ್ವರದ ಚಿಕಣಿ ಕಲಾವಿದೆ ಪ್ರಿಯಾಂಕಾ ಸಹಾನಿ ಎಂಬವರು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ 8 ಅಡಿ ಉದ್ದದ ಭಾವಚಿತ್ರವನ್ನು ಆಹಾರ ಧಾನ್ಯಗಳನ್ನು ಬಳಸಿ ರಚಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸಹಾನಿ, 'ಈ ಭಾವಚಿತ್ರವು ಒಡಿಶಾದ ಜನರಿಂದ ಪ್ರಧಾನಿಗೆ ಉಡುಗೊರೆಯಾಗಿದೆ. ನಾನು ಈ ಭಾವಚಿತ್ರದಲ್ಲಿ ಒಡಿಶಾದ ಸಾಂಪ್ರದಾಯಿಕ ಪಟ್ಟಚಿತ್ರ ಕಲಾ ವಿನ್ಯಾಸವನ್ನು ಬಳಸಿದ್ದೇನೆ' ಎಂದು ಹೇಳಿದರು.
ಪ್ರಧಾನಮಂತ್ರಿಯ ಹೃದಯದಲ್ಲಿ ದೇಶದ ಭೂಪಟವನ್ನು ಚಿತ್ರಿಸಿರುವ ಕಲಾವಿದೆ, 'ಇದು ಪ್ರಧಾನಿ ನಮ್ಮ ಹೃದಯದಲ್ಲಿ ನೆಲೆಸಿರುವಂತೆಯೇ ನಮ್ಮ ದೇಶವು ಪ್ರಧಾನಮಂತ್ರಿಯವರ ಹೃದಯದಲ್ಲಿ ನೆಲೆಯಾಗಿದೆ ಎಂಬುದನ್ನು ಪ್ರತಿನಿಧಿಸುತ್ತದೆ' ಎಂದರು.
ಎಂಟು ಅಡಿ ಉದ್ದ ಮತ್ತು ನಾಲ್ಕು ಅಡಿ ಅಗಲದ ಭಾವಚಿತ್ರವನ್ನು ಮಾಡಲು ಸಹಾನಿ ಐದರಿಂದ ಆರು ಬಗೆಯ ಧಾನ್ಯಗಳನ್ನು ಬಳಸಿದ್ದಾರೆ. ಅದರಲ್ಲಿ ಅಕ್ಕಿ ಮತ್ತು ವಿವಿಧ ದ್ವಿದಳ ಧಾನ್ಯಗಳು ಸೇರಿವೆ.
'ನಾನು ಚಿಕಣಿ ಕಲಾವಿದೆ ಆದ್ದರಿಂದ ಇದು ನನಗೆ ಸವಾಲಿನ ಮತ್ತು ಪ್ರಾಯೋಗಿಕ ಕೆಲಸವಾಗಿತ್ತು. ಈ ಭಾವಚಿತ್ರವನ್ನು ಮಾಡಲು ನನಗೆ ಸುಮಾರು 25 ಗಂಟೆಗಳು ಬೇಕಾಯಿತು' ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಹುಟ್ಟುಹಬ್ಬ.. ವ್ಯಾಕ್ಸಿನೇಷನ್ನಲ್ಲಿ ರೆಕಾರ್ಡ್.. ಮಧ್ಯಾಹ್ನದ ವೇಳೆಗೆ ಕೋಟಿ ದಾಟಿದ ಡೋಸ್..