ETV Bharat / bharat

ಮಹಿಳಾ ಕ್ರಿಕೆಟರ್‌ ಅನುಮಾನಾಸ್ಪದ ಸಾವು: ಡೆತ್‌ನೋಟ್‌ ವಶಕ್ಕೆ ಪಡೆದ ಪೊಲೀಸರು - ‌ರಾಜಶ್ರೀ ಸ್ವೈನ್

ಒಡಿಶಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ‌ರಾಜಶ್ರೀ ಸ್ವೈನ್, ಡೆತ್​ ನೋಟ್​​ನಲ್ಲಿ ತನ್ನ ಸಾವಿಗೆ ಇಬ್ಬರು ವ್ಯಕ್ತಿಗಳು ಕಾರಣ ಎಂದು ದೂಷಿಸಿದ್ದಾರೆ ಎನ್ನಲಾಗಿದೆ. ಆಕೆಯ ಸ್ಕೂಟರ್‌ನ ಬೂಟ್ ಸ್ಪೇಸ್‌ನಲ್ಲಿ ಪತ್ರ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Odisha Woman Cricketer Death
ಒಡಿಶಾ ಮಹಿಳಾ ಕ್ರಿಕೆಟರ್​ ಸಾವು
author img

By

Published : Jan 15, 2023, 10:02 AM IST

ಕಟಕ್ (ಒಡಿಶಾ) : ರಾಜ್ಯದ ಮಹಿಳಾ ಕ್ರಿಕೆಟರ್​ ರಾಜಶ್ರೀ ಸ್ವೈನ್ ಎಂಬವರ ಸಾವು ಪ್ರಕರಣದಲ್ಲಿ ತಿರುವು ಸಿಕ್ಕಿದೆ. ಆಕೆಯ ಸ್ಕೂಟರ್‌ನ ಬೂಟ್ ಸ್ಪೇಸ್‌ನಲ್ಲಿ ಡೆತ್​ ನೋಟ್​​ ಪತ್ತೆಯಾಗಿದೆ. ಪತ್ರದಲ್ಲಿ ತನ್ನ ಸಾವಿಗೆ ಕೋಚ್ ಮತ್ತು ಒಡಿಶಾ ಕ್ರಿಕೆಟ್ ಅಸೋಸಿಯೇಷನ್ (ಒಸಿಎ) ಮಾಜಿ ಅಧಿಕಾರಿಯೊಬ್ಬರು ಕಾರಣ ಎಂದು ಉಲ್ಲೇಖಿಸಿರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ. ಡೆತ್​ ನೋಟ್ ಅ​ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮಧ್ಯೆ ಆಕೆಯ ಕುಟುಂಬಸ್ಥರು ಒಸಿಎ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಕಟಕ್ ಜಿಲ್ಲೆಯ ಗುರುಡಿಜಾಟಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆತ್ಮಹತ್ಯೆ ಪತ್ರದ ಸತ್ಯಾಸತ್ಯತೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡೆತ್​​ ನೋಟ್ ಅ​ನ್ನು ಕೈಬರಹ ತಜ್ಞರಿಗೆ ಕಳುಹಿಸಲಾಗುವುದು. ಕೆಲವು ಒಸಿಎ ಅಧಿಕಾರಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ರಾಜಶ್ರೀ ಅವರ ಬಳಿಯಿದ್ದ ಪೆನ್​​ಗಳು ಮತ್ತು ಬಟ್ಟೆಗಳನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಕಟಕ್ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

ಕೊಲೆ ಎಂದು ಕುಟುಂಬಸ್ಥರ ದೂರು: ಸ್ಕೂಟರ್‌ನಿಂದ ವಶಪಡಿಸಿಕೊಂಡ ಡೆತ್​​ ನೋಟ್​​ ಬಗ್ಗೆ ಪ್ರತಿಕ್ರಿಯಿಸಿದ ಆಕೆಯ ತಾಯಿ 'ನನ್ನ ಮಗಳ ಕೈಬರಹಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದು ಹೇಳಿದ್ದಾರೆ. ಆಕೆಯ ತಾಯಿಯ ಆರೋಪಗಳನ್ನು ಪುನರುಚ್ಚರಿಸಿದ ರಾಜಶ್ರೀಯ ಸಹೋದರ, ದೇಹದಲ್ಲಿ ಗಾಯದ ಗುರುತುಗಳು ಮತ್ತು ಅವಳ ಕಣ್ಣುಗಳಿಗೆ ಹಾನಿಯಾಗಿರುವುದರಿಂದ ಅವಳನ್ನು ಕೊಲೆ ಮಾಡಲಾಗಿದೆ' ಎಂದು ಆರೋಪಿಸಿದ್ದಾರೆ. ಅಲ್ಲದೇ ಆಕೆಯ ಸಾವಿಗೆ ಒಸಿಎ ಮತ್ತು ಆಕೆಯ ಕೋಚ್ ಪುಷ್ಪಾಂಜಲಿ ಬ್ಯಾನರ್ಜಿ ಕಾರಣ ಎಂದು ದೂರಿದ್ದಾರೆ. ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸಲಾಗುವುದು ಮತ್ತು ಮೃತರ ಕುಟುಂಬಸ್ಥರು ಮಾಡುತ್ತಿರುವ ಆರೋಪಗಳನ್ನು ಪರಿಶೀಲಿಸಲಾಗುವುದು ಎಂದು ಡಿಸಿಪಿ ಪಿನಾಕ್ ಮಿಶ್ರಾ ಭರವಸೆ ನೀಡಿದ್ದಾರೆ.

ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದ ‌ರಾಜಶ್ರೀ: ಒಡಿಶಾದ ಮಹಿಳಾ ಕ್ರಿಕೆಟರ್‌ ‌ರಾಜಶ್ರೀ ಸ್ವೈನ್ ಶುಕ್ರವಾರ ಕಟಕ್ ಹೊರವಲಯದ ದಟ್ಟ ಅರಣ್ಯದಲ್ಲಿ ಶವವಾಗಿ ಪತ್ತೆಯಾಗಿದ್ದರು. ಜ.11 ರಿಂದ ರಾಜಶ್ರೀ ನಾಪತ್ತೆಯಾಗಿದ್ದರು. ಅಥಗಢ ಪ್ರದೇಶದ ಗುರುಡಿಜಾಟಿಯಾ ಅರಣ್ಯದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಕಟಕ್ ಪೊಲೀಸ್ ಉಪ ಆಯುಕ್ತ ಪಿನಾಕ್ ಮಿಶ್ರಾ ತಿಳಿಸಿದ್ದರು.

ರಾಜಶ್ರೀ ನಾಪತ್ತೆಯಾಗಿರುವ ಬಗ್ಗೆ ಅವರ ಕೋಚ್ ಗುರುವಾರ ಕಟಕ್‌ನ ಮಂಗಳಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕ್ರಿಕೆಟರ್‌ ಸಾವಿನ ಬಗ್ಗೆ ಗುರುಡಿಜಾಟಿಯಾ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿತ್ತು. ರಾಜಶ್ರೀ ಸಾವಿನ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ.

ರಾಜಶ್ರೀ ಸ್ವೈನ್‌ ಸೇರಿದಂತೆ ಸುಮಾರು 25 ಮಹಿಳಾ ಕ್ರಿಕೆಟ್‌ ಕ್ರಿಕೆಟರ್‌ಗಳು ಪುದುಚೇರಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಾಗಿ ಬಜ್ರಕಬಾಟಿ ಪ್ರದೇಶದಲ್ಲಿ ಒಡಿಶಾ ಕ್ರಿಕೆಟ್ ಸಂಸ್ಥೆ (ಒಸಿಎ) ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ನಾಪತ್ತೆಯಾಗಿದ್ದ ಮಹಿಳಾ ಕ್ರಿಕೆಟರ್​ ಶವವಾಗಿ ಪತ್ತೆ... ತಂಡದಲ್ಲಿ ಸ್ಥಾನ ಸಿಗದ್ದಕ್ಕೆ ಪ್ರಾಣಬಿಟ್ಟಳೇ ಯುವ ಆಟಗಾರ್ತಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.