ETV Bharat / bharat

ಹಸಿವು ಮರೆಯಲು YouTube ನೋಡ್ತಿದ್ದ ಕಾರ್ಮಿಕ ಅದರಿಂದಲೇ ಈಗ ಲಕ್ಷಾಧಿಪತಿ - ಯೂಟ್ಯೂಬ್​ ಚಾನೆಲ್​

ಲಾಕ್‌ಡೌನ್‌ ಸಂಕಷ್ಟದ ಸಂದರ್ಭದಲ್ಲಿ ಹಸಿವು ಮರೆಯಲು ಯೂಟ್ಯೂಬ್​ ನೋಡ್ತಿದ್ದ ಕೂಲಿ ಕಾರ್ಮಿಕನೋರ್ವ ಇದೀಗ ಅದರಿಂದಲೇ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾನೆ.

Odisha man Earns lakhs
Odisha man Earns lakhs
author img

By

Published : Jul 8, 2021, 7:23 PM IST

Updated : Jul 8, 2021, 7:56 PM IST

ಭುವನೇಶ್ವರ್​(ಒಡಿಶಾ): ಕೋವಿಡ್​​ ಸಂದರ್ಭದಲ್ಲಿ ಲಕ್ಷಾಂತರ ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಸಂಕಟ ಅನುಭವಿಸಿದ್ದರು. ಲಾಕ್​ಡೌನ್​ ಜಾರಿಯಾಗಿದ್ದ ಕಾರಣ ಕೆಲಸವಿಲ್ಲದೇ ಇನ್ನಿಲ್ಲದ ತೊಂದರೆ ಎದುರಿಸಿದ್ದಾರೆ. ಸದ್ಯ ನಾವು ಹೇಳಲು ಹೊರಟಿರುವ ಸ್ಟೋರಿಯೂ ಕೂಡಾ ಅಂತಹ ಕೂಲಿ ಕಾರ್ಮಿಕನಿಗೆ ಸಂಬಂಧಪಟ್ಟಿದ್ದು.

ಒಡಿಶಾದ ಸಂಬಲ್ಪುರ್​​ ಜಿಲ್ಲೆಯ ಬುಡಕಟ್ಟು ಜನಾಂಗದ ವ್ಯಕ್ತಿ ಮುಂಡಾ ಎಂಬಾತ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದ. ಕಳೆದ ವರ್ಷ ಲಾಕ್​ಡೌನ್ ಜಾರಿಗೊಂಡಿದ್ದ ಕಾರಣ, ಕೆಲಸವಿಲ್ಲದೇ ಮನೆಯಲ್ಲೇ ಕಾಲ ಕಳೆಯುತ್ತಿದ್ದ. ಒಪ್ಪೊತ್ತಿನ ಊಟಕ್ಕೂ ಪರದಾಟ ನಡೆಸುತ್ತಿದ್ದ ಈತ, ಹಸಿವು ಮರೆಯುವ ಉದ್ದೇಶದಿಂದಲೇ ಯೂಟ್ಯೂಬ್​ನಲ್ಲಿನ​ ವಿಡಿಯೋ ನೋಡುತ್ತಿದ್ದನಂತೆ. ಆ ವಿಡಿಯೋಗಳಿಂದ ಪ್ರೇರಣೆ ಪಡೆದು ತಾನು ಒಂದು ಯೂಟ್ಯೂಬ್​ ಚಾನೆಲ್​ ಓಪನ್ ಮಾಡಲು ಮುಂದಾಗಿದ್ದಾನೆ.

ಯೂಟ್ಯೂಬ್​ನಿಂದಲೇ ಲಕ್ಷಾಧಿಪತಿಯಾದ ಕೂಲಿ ಕಾರ್ಮಿಕ

ಯೂಟ್ಯೂಬ್​ ಚಾನೆಲ್​ ತೆರೆಯಲು ಸ್ಮಾರ್ಟ್​ ಫೋನ್ ಖರೀದಿಗೋಸ್ಕರ 3 ಸಾವಿರ ರೂ. ಸಾಲ ಪಡೆದುಕೊಂಡಿದ್ದಾನೆ. ಮೊಬೈಲ್ ಖರೀದಿಸಿ ಮಾರ್ಚ್​ 2020ರಲ್ಲಿ ಯೂಟ್ಯೂಬ್​ ಚಾನೆಲ್​ ಓಪನ್ ಮಾಡಿದ್ದಾನೆ. ಈ ಚಾನೆಲ್‌ನಲ್ಲಿ ಹಳ್ಳಿ ಪ್ರದೇಶಗಳಲ್ಲಿ ಜನರು ಯಾವ ರೀತಿಯಾಗಿ ಊಟ ತಿನ್ನುತ್ತಾರೆ. ಹೇಗೆ ಜೀವನ ನಡೆಸುತ್ತಾರೆಂಬ ಬಗ್ಗೆ ಮಾಹಿತಿ ಹಾಕುತ್ತಿದ್ದ.ಈ ವಿಡಿಯೋಗಳಿಗೆ ಇನ್ನಿಲ್ಲದ ಸ್ಪಂದನೆ ಸಿಕ್ಕಿದೆ. ಸದ್ಯ ಮುಂಡಾ ಯೂಟ್ಯೂಬ್​​ನಲ್ಲಿ 7 ಲಕ್ಷ ಚಂದಾದಾರರನ್ನು ಹೊಂದಿದ್ದಾನೆ. ತಾನು ಆರಂಭಿಸಿರುವ ಚಾನೆಲ್​ಗೆ 'ಇಸಾಕ್ ಮುಂಡಾ ಈಟಿಂಗ್' ಎಂದು ಹೆಸರಿಟ್ಟಿದ್ದಾನೆ.

  • " class="align-text-top noRightClick twitterSection" data="">

ಇದನ್ನೂ ಓದಿರಿ: ತನ್ನೊಂದಿಗೆ ಸಹಕರಿಸಲಿಲ್ಲವೆಂದು ಯುವತಿಗೆ ಬೆಂಕಿ ಹಚ್ಚಿದ ಪ್ರೇಮಿ: ಆಸ್ಪತ್ರೆಗೆ ದಾಖಲಿಸಿ ಪರಾರಿ

2020ರ ಆಗಸ್ಟ್​ ತಿಂಗಳಿಂದ ಈತ ಯೂಟ್ಯೂಬ್​ನಿಂದ 5 ಲಕ್ಷ ರೂ. ಹಣ ಸಂಪಾದನೆ ಮಾಡಿದ್ದಾನೆ. ಇದೇ ಹಣದಲ್ಲಿ ಮನೆ ಕೂಡ ಕಟ್ಟಿಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ. ಕೇವಲ ಹಣ ಸಂಪಾದನೆ ಮಾಡುವುದಷ್ಟೇ ಉದ್ದೇಶವಲ್ಲ. ಬದಲಾಗಿ ಗ್ರಾಮೀಣ ಪ್ರದೇಶದ ಸಂಸ್ಕೃತಿ ಯಾವ ರೀತಿಯಾಗಿರುತ್ತದೆ ಎಂಬ ಅರಿವು ಮೂಡಿಸುವುದು ನನ್ನ ಧ್ಯೇಯ ಎಂದಿದ್ದಾನೆ.

Last Updated : Jul 8, 2021, 7:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.