ಭುವನೇಶ್ವರ (ಒಡಿಶಾ): ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಕ್ಯಾಬಿನೆಟ್ ಇಂದು ಒಡಿಶಾದ ಜನರಿಗೆ ಲಸಿಕೆಗಳನ್ನು ಖರೀದಿಸಲು ಜಾಗತಿಕ ಟೆಂಡರ್ ಕರೆಯುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ.
ಇದು ಒಡಿಶಾದ ಜನರ ಜೀವ ರಕ್ಷಣೆ ಮಾಡಲು ಸಹಾಯ ಮಾಡುತ್ತದೆ ಮತ್ತು ಜನರ ಜೀವನೋಪಾಯವನ್ನು ಪುನಃ ಸ್ಥಾಪಿಸಲಿದೆ.
ಈ ಜಾಗತಿಕ ಟೆಂಡರ್‌ಗಳು 18-44 ವರ್ಷ ವಯಸ್ಸಿನವರಿಗೆ ನೀಡಲಿರುವ ಲಸಿಕೆ ಸಂಗ್ರಹಿಸಲು ಸಹಾಯ ಮಾಡಲಿದೆ ಎಂದು ಸಿಎಂ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.