ಭುವನೇಶ್ವರ, ಒಡಿಶಾ: ಕೋವಿಡ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ತೀವ್ರವಾಗಿ ಇಳಿಮುಖವಾಗುತ್ತಿರುವ ಕಾರಣದಿಂದಾಗಿ ಕೋವಿಡ್ ವೇಳೆ ನಿರ್ಮಾಣ ಮಾಡಲಾಗಿದ್ದ, ಕೋವಿಡ್ ಕೇರ್ ಸೆಂಟರ್ಗಳನ್ನು ಮುಚ್ಚಲು ಒಡಿಶಾ ಸರ್ಕಾರ ತೀರ್ಮಾನಿಸಿದೆ.
ಕೋವಿಡ್ ನಿರ್ವಹಣೆಗಾಗಿ ಸ್ಥಾಪನೆ ಮಾಡಲಾಗಿದ್ದ ಸ್ಟೇಟ್ ಟೆಕ್ನಿಕಲ್ ಕಮಿಟಿಯ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಕೆ.ಮೊಹಾಪಾತ್ರ ಎಲ್ಲಾ ಜಿಲ್ಲಾಧಿಕಾರಿಗಳು, ಮುನ್ಸಿಪಲ್ ಕಮೀಷನರ್ಗಳಿಗೆ ಪತ್ರ ಬರೆದಿದ್ದು, ಕೋವಿಡ್ ಸೋಂಕಿತರು ಇಲ್ಲದ ಸೆಂಟರ್ಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಆನ್ಲೈನ್ ಅಶ್ಲೀಲ ಫನ್ ರೂ. 200ಕ್ಕೆ!: ಪೋರ್ನ್ ಸೈಟ್ಗಳಂತೆ ಬೆಳೆದ ಸೋಷಿಯಲ್ ಮೀಡಿಯಾಗಳ ನಿಯಂತ್ರಣ ಎಂದು?